Sunday, March 17, 2013

ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯವನ್ನು ಉಪೇಕ್ಷಿಸಲು ಬಂದ ವಾಹನಕ್ಕೆ ನಾಗರಿಕರಿಂದ ತಡೆ
ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ: ತ್ಯಾಜ್ಯವನ್ನು ಟೆಂಪೋದಲ್ಲಿ ತುಂಬಿಸಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಉಪೇಕ್ಷಿಸಲು ಬಂದ ವಾಹನ ಹಾಗು ಸಿಬ್ಬಂಧಿಗಳಿಗೆ ನಾಗರಿಕರು ತಡೆಯೊಡ್ಡಿದ ಘಟನೆ ಇಲ್ಲಿಗೆ ಸಮೀಪದ ತೂಮಿನಾಡು ಜಂಕ್ಷನ್ ನಲ್ಲಿ ರವಿವಾರ ಸಂಜೆ ನಡೆದಿದೆ.
ತ್ಯಾಜ್ಯಗಳನ್ನು ರಸ್ತೆ ಬದಿಗಳಲ್ಲಿ ಉಪೇಕ್ಷಿಸಬಾರದೆಂಬ ನಿಯಮವನ್ನು ಮಂಜೇಶ್ವರ ಗ್ರಾ.ಪಂ.ಆದೇಶವಿತ್ತಿದ್ದರೂ ಸ್ಥಳೀಯನೊಬ್ಬ ನ ನೇತೃತ್ವದಲ್ಲಿ ರವಿವಾರ ಸಂಜೆ ೨ ಟೆಂಪೋ ತ್ಯಾಜ್ಯಗಳನ್ನು ತೂಮಿನಾಡಿನ ಜನಸಂಚಾರವಿರುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಉಪೇಕ್ಷಿಸಲಾಯಿತು.ಈ ಬಗ್ಗೆ ಸ್ಥಳೀಯ ಕೆಲವು ವ್ಯಕ್ತಿಗಳು ಈ ಬಗ್ಗೆ ಟೆಂಪೋ ದಲ್ಲಿ ತಂದ ಸ್ಥಳೀಯ ಸಿಬ್ಬಂಧಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರೂ ಇವರ ಮಾತಿಗೆ  ಚಿಕ್ಕಾಸಿನ ಬೆಲೆ ನೀಡದೆ ರಸ್ತೆ ಬದಿಯಲ್ಲಿಯೇ ಉಪೇಕ್ಷಿಸಿ ತಿರುಗಿ ಮತ್ತೊಂದು ಟೆಂಪೋದಲ್ಲಿ ತಂದಾಗ ನಾಗರಿಕರು ತಡೆದು ತರಾಟೆಗೆ ತೆಗೆದಾಗ ತ್ಯಾಜ್ಯ ವಸ್ಥುಗಳನ್ನು ಹಿಂತಿರುಗಿ ಕೊಂಡು ಹೋಗಿದ್ದಾನೆ.ಆದರೆ  ಮೊದಲು ೨ ಟೆಂಪೋ ದಲ್ಲಿ ತುಂಬಿಸಿ ತಂದ ತ್ಯಾಜ್ಯಗಳನ್ನು ಇಲ್ಲಿ ಉಪೇಕ್ಷಿಸಲಾಗಿದ್ದು ಇದು ಮಳೆಗಾಲದ ಸೊಳ್ಳೆ ಉತ್ಪಾಧನಾ ಕೇಂದ್ರಕ್ಕೆ ಅಡಿಗಲ್ಲು ಹಾಕಿದಂತಾಗಿದೆ.ರಾಷ್ಟ್ರೀಯ ಹೆದ್ದಾರಿ ಹಾಗು ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯಗಳನ್ನು ಉಪೇಕ್ಷಿಸಿದ ವ್ಯಕ್ತಿಗಳ ವಿರುದ್ದ ನಾಗರಿಕರು ಗ್ರಾ.ಪಂ.ಹಾಗು ಪೊಲೀಸರಿಗೆ ದೂರು ನೀಡುವುದಾಗಿ ತಿಳಿದು ಬಂದಿದೆ

No comments:

Post a Comment