Thursday, March 14, 2013

ಅನಧಿಕೃತ ಮರಳು ಸಾಗಾಟ:ರಿಕ್ಷಾ ವಶನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಅನಧಿಕೃತವಾಗಿ ಮರಳು ಸಾಗಾಟ ಮಾಡುತಿದ್ದ ಎರಡು ಆಟೋ ರಿಕ್ಷಾಗಳನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ.ಚಾಲಕರು ರಿಕ್ಷಾಗಳನ್ನು ಉಪೇಕ್ಷಿಸಿ ಪರಾರಿಯಾಗಿದ್ದಾರೆ.
ಉದ್ಯಾವರ ಬಾಗಕ್ಕೆ ಮರಳು ಸಾಗಾಟ ಮಾಡುತಿದ್ದ ರಿಕ್ಷಾವನ್ನು ಮಂಜೇಶ್ವರ ರೈಲ್ವೇ ಸ್ಟೇಶನ್ ಬಳಿಯಿಂದಲೂ ಹೊಸಂಗಡಿ ಬಾಗಕ್ಕೆ ಸಾಗಾಟ ಮಾಡುತಿದ್ದ ರಿಕ್ಷಾವನ್ನು ಸಬ್ ರಿಜಿಸ್ಟ್ರಾರ್ ಬಳಿಯಿಂದಲೂ ಸೆರೆ ಹಿಡಿಯಲಾಗಿದೆ.ರಿಕ್ಷಾಗಳಲ್ಲಿ ಎಂಟು ಗೋಣಿ ಚೀಲಗಳಲ್ಲಿ ಮರಳನ್ನು ತುಂಬಿಸಿ ಸಾಗಿಸಲಾಗುತಿತ್ತು.

No comments:

Post a Comment