Tuesday, March 19, 2013

ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯಗಳ ಶೇಖರಣೆಕುಂಜತ್ತೂರು:ಇಲ್ಲಿಗೆ ಸಮೀಪದ ಉದ್ಯಾವರ ಮಾಡ ರಾಷ್ಟ್ರೀಯ ಹೆದ್ದಾರಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಕಟ್ಟಡದ ಮಾಲಿಕನೊಬ್ಬ ಬಾವಿಯಿಂದ ತೆಗೆಯಲಾದ ಚೇಡಿ ಮಣ್ಣು ಹಾಗು ತ್ಯಾಜ್ಯಗಳನ್ನು ಜನಸಾಮನ್ಯರು ನಡೆದಾಡುವ ರಾಷ್ಟ್ರೀಯ ಹೆದ್ದಾರಿಯ ಬಳಿ ಹಾಕಿದ್ದು ಇದು ಇಲ್ಲಿಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದು ವಾರದ ಮೊದಲು ಕಟ್ಟಡದ ಮಾಲಕ  ಜನ ಸಾಮಾನ್ಯರ ಎದುರಿನಲ್ಲಿಯೇ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯಗಳನ್ನು ಉಪೇಕ್ಷಿಸಿರುವುದಾಗಿ ನಾಗರಿಕರು ಆರೋಪಿಸುತಿದ್ದಾರೆ.ಇದರ ಬಗ್ಗೆ ಆಕ್ಷೇಪವೆತ್ತಿದವರಲ್ಲಿ ತೆರವುಗೊಳಿಸುತ್ತೇನೆಂದು ಭರವಸೆ ನೀಡುತ್ತಾನೆ ಹೊರತು ತೆರವುಗೊಳಿಸಲು ಕಟ್ಟಡದ ಮಾಲಕ ಮುಂದಾಗುವುದಿಲ್ಲವೆಂದು ನಾಗರಿಕರು ಆರೋಪಿಸುತಿದ್ದಾರೆ.ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಶೇಖರಿಸಿದ ಸ್ಥಳಗಳಲ್ಲಿ ಪಂಚಾಯತ್ ಅಧಿಕೃತರು  ದಿನ ನಿತ್ಯ ಸಂಚರಿಸುತಿದ್ದರೂ ಯಾರೂ ಇದರ ಬಗ್ಗೆ ಗಮನಹರಿಸುವುದಿಲ್ಲವೆಂದು ಕೇಳಿ ಬಂದಿದೆ. ಈಗಲೇ ತ್ಯಾಜ್ಯಗಳನ್ನು ಇಲ್ಲಿಂದ ತೆರವುಗೊಳಿಸದಿದ್ದಲ್ಲಿ  ಮಳೆಗಾಲದಲ್ಲಿ  ಸುರಿಯುವ ನೀರಿನಿಂದ ತ್ಯಾಜ್ಯ ಶೇಖರಣೆಯಾಗಿರುವ ಸ್ಥಳವು ಸಂಪೂರ್ಣವಾಗಿ ಕೊಳಚೆಯಾಗಿ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ.ಸಂಭಂಧ ಪಟ್ಟವರು ಇತ್ತ ಕಡೆ ಗಮನಹರಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

No comments:

Post a Comment