Wednesday, March 27, 2013

ಬಾಯಿತಪ್ಪಿ ಬಂದ ಹೇಳಿಕೆ...ಕ್ಷಮೆಯಾಚಿಸಿದ ಪ್ರಹ್ಲಾದ್ ಜೋಶಿ
ಮಾರ್ಚ್ -27-2013

ಬೆಂಗಳೂರು: ಮಹಾತ್ಮಾ ಗಾಂಧೀಜಿ ಯವರ ಮೂರು ಮಂಗಗಳ ಕಥೆಯ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಬಾಯಿ ತಪ್ಪಿನಿಂದ ತಾನು ಈ ಹೇಳಿಕೆ ನೀಡಿದ್ದು, ಇದಕ್ಕಾಗಿ ಬೇಷರತ್ ಕ್ಷಮೆ ಯಾಚಿಸುವೆನೆಂದು ತಿಳಿಸಿದ್ದಾರೆ. ಮಂಗಳವಾರ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸುವ ಉದ್ದೇಶವಿರಲಿಲ್ಲ. ತಪ್ಪಿನಿಂದ ಈ ಹೇಳಿಕೆ ನೀಡಿದ್ದು, ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನನಗೆ ಅಪಾರ ಗೌರವವಿದೆ ಎಂದರು.
ಕೆಲವರು ಈ ಹೇಳಿಕೆಯನ್ನು ವಿವಾದಕ್ಕೆ ಬಳಕೆ ಮಾಡಿಕೊಳ್ಳಲು ವಿಫಲ ಯತ್ನ ನಡೆಸಿದ್ದಾರೆ. ಆದುದರಿಂದ ಈ ಬಗ್ಗೆ ನಾನು ಹೆಚ್ಚಿಗೆ ಪ್ರಕ್ರಿಯೆ ನೀಡುವುದಿಲ್ಲ. ನನ್ನ ಹೇಳಿಕೆಗೆ ಕ್ಷಮೆಯಾಚಿಸುವೆ ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟಣೆ ನೀಡಿದರು

No comments:

Post a Comment