Friday, March 22, 2013

ದಿಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ : ಮಾಧ್ಯಮ ವರದಿಗೆ ಹೈಕೋರ್ಟ್ ಸಮ್ಮತಿ ಮಾರ್ಚ್ -23-2013

ಹೊಸದಿಲ್ಲಿ: ಇಲ್ಲಿನ ಸಾಕೇತ್ ತ್ವರಿತ ನ್ಯಾಯಾಲಯದಲ್ಲಿ ನಡೆಯುತ್ತಿರುವ ದಿಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆಯ ಪ್ರತಿನಿತ್ಯದ ವರದಿಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದಕ್ಕೆ ದಿಲ್ಲಿ ಹೈಕೋರ್ಟ್ ಇಂದು ಪರವಾನಿಗೆ ನೀಡಿದೆ.
 
ತ್ವರಿತ ನ್ಯಾಯಾಲಯವು ಕೇವಲ ಓರ್ವ ಮಾಧ್ಯಮ ಪ್ರತಿನಿಧಿಯು ವಿಚಾರಣೆಯ ವಿವರವನ್ನು ಸಂಗ್ರಹಿಸಿ ಬಳಿಕ ಅದನ್ನು ಇತರರಿಗೆ ರವಾನಿಸಬೇಕೆಂದು ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಪತ್ರಕರ್ತರ ಅಹವಾಲನ್ನು ಆಲಿಸಿದ ನ್ಯಾ.ರಾಜೀವ್ ಶಕ್ದೇರ್‌ರಿದ್ದ ನ್ಯಾಯಪೀಠ ರಾಷ್ಟ್ರೀಯ ವಾಹಿನಿಗಳ ಓರ್ವ ವರದಿಗಾರ ಕ್ಯಾಮರಾವನ್ನು ಉಪಯೋಗಿಸದೆ ವಿಚಾರಣೆಯ ಸಂಪೂರ್ಣ ವಿವರಗಳನ್ನು ದಾಖಲಿಸಿಕೊಳ್ಳಬಹುದು ಎಂದು ಇಂದು ಆದೇಶ ನೀಡಿದೆ.
 
ಮಾಧ್ಯಮಗಳ ಮೇಲೆ ಕೆಲವೊಂದು ನಿರ್ಬಂಧಗಳನ್ನು ಹೇರಿದ ನ್ಯಾಯಾಲಯ, ಮಾಧ್ಯಮವು ಯಾವುದೇ ಕಾರಣಕ್ಕೂ ಸಂತ್ರಸ್ತೆಯ ನೈಜ ಹೆಸರನ್ನಾಗಲಿ ಅಥವಾ ಕುಟುಂಬದ ಸದಸ್ಯರ ಹೆಸರನ್ನಾಗಲಿ ಅಥವಾ ಸಾಕ್ಷಿಗಳನ್ನಾಗಲಿ ಬಹಿರಂಗಪಡಿಸಬಾರದೆಂದು ತಾಕೀತು ಮಾಡಿದೆ
ಕೃಪೆ:ವಾ.ಭಾರತಿ 

No comments:

Post a Comment