Friday, March 8, 2013

ಕ್ರಿಕೆಟ್ ಆಟದ ವಿವಾದ:ವಿದ್ಯಾರ್ಥಿಗೆ ಹಲ್ಲೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕ್ರಿಕೆಟ್ ಆಟದ ಮದ್ಯೆ ಉಂಟಾದ ವಾಗ್ವಾದದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗೆ ಹಲ್ಲೆ ಗೈದ ಪ್ರಕರಣಕ್ಕೆ ಸಂಭಂಧಿಸಿ ಓರ್ವನ ವಿರುದ್ದ ಪೊಲೀಸರು ಕೇಸು ದಾಖಲಿಸಿರುತ್ತಾರೆ.
ಪೈವಳಿಕೆ ಕಳಾಯಿ ನಿವಾಸಿ ಬಾಲತು ಮಂಥೆರೋರವರ ಪುತ್ರ 10 ನೇ ತರಗತಿ ವಿದ್ಯಾರ್ಥಿ ಪ್ರದೀಪ್ ಸರಲ್ ಮೊಂಥೆರೋ ಎಂಬವನಿಗೆ ಶಾಲೆ ಬಿಟ್ಟು ತೆರಳುತ್ತಿರುವಾಗ ಕ್ರಿಕೆಟ್ ಆಟದ ವಿಷಯದ ಬಗ್ಗೆ ಪ್ರಶ್ನಿಸಿ ರವಿ ಮೊಂಥೆರೋ ಎಂಬವನು ಹಲ್ಲೆ ಗೈದಿರುವುದಾಗಿ ದೂರಲಾಗಿದೆ. ಸಂಭಂಧ ರವಿ ಮೊಂಥೆರೋ ಎಂಬವರ ವಿರುದ್ದ ಪೊಲೀಸರು ಕೇಸು ದಾಖಲಿಸಿರುತ್ತಾರೆ.

No comments:

Post a Comment