Tuesday, March 19, 2013

ಶತಾಯುಷ್ಯದ ರಹಸ್ಯ- ಡಾ.ಶಿವಕುಮಾರ್ 
ಶನಿವಾರ - ಮಾರ್ಚ್ -20-2013

ಕೆಲವರು ಯಾಕೆ ನೂರು ವಸಂತಗಳನ್ನು ಪೂರ್ತಿ ಮಾಡಿಕೊಳ್ಳಬೇಕೆಂದುಕೊಳ್ಳುತ್ತಾರೆ. ನೂರು ವರ್ಷಗಳು ಮೇಲ್ಪಟ್ಟರೂ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾ ಜೀವಿಸುತ್ತಿದ್ದಾರೆಂದು ತಿಳಿದುಕೊಳ್ಳುವುದಕ್ಕೆ ಪ್ರಪಂಚದಲ್ಲಿ ಜರುಗಿದ ವಿವಿಧ ಅಧ್ಯಯನಗಳನ್ನು ಪರಿಶೀಲಿಸೋಣ.100 ವರ್ಷಗಳು, ಅದಕ್ಕೂ ಮೇಲ್ಪಟ್ಟು, ಯಾಕೆ ಜೀವಿಸುತ್ತಿದ್ದಾರೆ, ಹಾಗೇ ಅವರು ಜೀವಿಸಲು ಕಾರಣಗಳು, ಸೂತ್ರಗಳು, ನಾವು ಸಹಾ ದೀರ್ಘಕಾಲ ಜೀವಿಸಬೇಕೆಂದರೆ ಪಾಲಿಸಬೇಕಾದ ವಿಧಾನಗಳನ್ನು ವೈದ್ಯಕೀಯ ಅಧ್ಯಯನಗಳು ಮಂಡಿಸುತ್ತಿವೆ. ಅವುಗಳಲ್ಲಿ ಕೆಲವು ಆಶ್ಚರ್ಯಕರವಾದ ಅಂಶಗಳು ಈ ಅಧ್ಯಯನಗಳಿಂದ ಬೆಳಕಿಗೆ ಬಂದಿದೆ. ಅವು...
1.ನಮ್ಮ ಹತ್ತಿರದ ಬಂಧುಗಳಲ್ಲಿ ದೀರ್ಘಕಾಲ ಜೀವಿಸಿದವರು ಹೆಚ್ಚಿನ ಮಂದಿ ಇದ್ದಂತಾದರೆ ನಾವೂ ಸಹ ಅವರ ಹಾಗೇ ದೀರ್ಘ ಕಾಲ ಜೀವಿಸುವ ಅವಕಾಶಗಳು ನಿಶ್ಚಯವಾಗಿ ಇರುತ್ತವೆ. ಸಂಬಂಧಿಗಳಲ್ಲಿ ದೀರ್ಘಾಯುಗಳಾಗಿಇರುವವರು ಹೆಚ್ಚಾಗಿದ್ದಾರೆಂದರೆ ಅದಕ್ಕೆ ‘ಜೀನ್ಸ್’ (ವಂಶವಾಹಿನಿ) ಒಂದು ಮುಖ್ಯ ಕಾರಣವಾಗುತ್ತದೆ.
ಈಗ 100 ವರ್ಷಗಳು ಸಮೀಪಿಸುತ್ತಿರುವ ತಂದೆ-ತಾಯಿಯರು, ಅವರ ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರು, ಅಜ್ಜ-ಅಜ್ಜಿಯರು ಇದ್ದರೆ ಅವರ ತಂದೆ-ತಾಯಿಗಳು, ತಾತಂದಿರು, ಅಜ್ಜಿಯಂದಿರು ಸಹಾ 90 ವರ್ಷಗಳಿಗೆ ಮೇಲ್ಪಟ್ಟು ಜೀವಿಸುವವರಾಗಿರುತ್ತಾರೆ.
ಆದರೆ ಇಂಥ ಸದವಕಾಶ ಕೇವಲ ಅರ್ಧದಷ್ಟು ಮಂದಿಗೆ ಮಾತ್ರ ಪ್ರಾಪ್ತವಾಗಿರುತ್ತದೆ ಎಂದು ಬ್ರಿಟನ್‌ನಲ್ಲಿರುವ ‘ಬೋಸ್ಟನ್ ಸ್ಕೂಲ್ ಆಫ್ ಮೆಡಿಸನ್’ನವರು ನಡೆಸಿದ ಅಧ್ಯಯನದಿಂದ ದೃಢಪಡಿಸಿದ್ದಾರೆ.ಒಂದೇ ಸಮುಯದಲ್ಲಿ ಜನಿಸಿದ ಅಣ್ಣ-ತಮ್ಮಂದಿರಿಗೆ ನೂರು ವರ್ಷಗಳು ಅದಕ್ಕೆ ಮೇಲ್ಪಟ್ಟು ಜೀವಿಸಲು ಅದೇ ಸಮಯದಲ್ಲಿ ಜನಿಸಿದ ಇತರೆ ಪುರುಷರಿಗಿಂತ 17ಪಟ್ಟು ಅಧಿಕವಾಗಿ ಅವಕಾಶಗಳು ಇದ್ದು, ನೂರು ವರ್ಷಗಳಿಗೆ ಹತ್ತಿರವಾಗುತ್ತಿರುವ ಸ್ತ್ರೀಯರಿಗೆ 8.5 ಪಟ್ಟು ಮಾತ್ರವೇ ಅಧಿಕ ಎಂದು ತಿಳಿಸುತ್ತದೆ ಮತ್ತೊಂದು ಅಧ್ಯಯನ.
2.ಅಧಿಕ, ಅತ್ಯಲ್ಪ ಆಂದೋಲನ ಮರಣ ಅವಕಾಶಗಳನ್ನು ಹೆಚ್ಚಿಸುತ್ತವೆ! ಎಲ್ಲ ವಿಷಯಗಳಲ್ಲೂ ತೀವ್ರವಾಗಿ ಆತಂಕ, ಆಂದೋಲನ ಪಟ್ಟುಕೊಳ್ಳುವುದು, ಆಳವಾಗಿ ಯೋಚಿಸಿ ಆತ್ಮವಿಮರ್ಶೆ ಮಾಡಿಕೊಂಡು ಬಾಧೆಪಡುವುದು, ಇಷ್ಟರಲ್ಲೇ ಏನೋ ಅಪಾಯಕರ ಘಟನೆ ಸಂಭವಿಸಬಹುದೆಂಬ ಆಲೋಚನೆಯನ್ನು ಬೆಳೆಸಿಕೊಳ್ಳುವುದರಿಂದ ಆಯಸ್ಸು ಕಡಿಮೆಯಾಗುವ ಅವಕಾಶಗಳು ಇರುತ್ತವೆ.
ಅದೇ ಸಮಯದಲ್ಲಿ ಆಯಾ ಅಂಶಗಳ ಕುರಿತು ಚುರುಕಾಗಿ ವ್ಯವಹರಿಸದೆ ಇದ್ದು ಇಲ್ಲದ ಹಾಗೆ ಇರುವುದು, (ವರೀಯಿಂಗ್ ಫಾರ್ ನಥಿಂಗ್!) ಇದೂ ಸಹಾ ಒಳ್ಳೆಯದಲ್ಲ. ಬಂದೊದಗಲಿರುವ ಅಪಘಾತ, ಅವಘಡಗಳನ್ನು ಮುಂಚೆಯೇ ಊಹಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಚುರುಕಾಗಿ ಕಾರ್ಯನಿರ್ವಹಿಸುವುದು... ಇಂಥ ಚರ್ಯೆಯಿಂದಲೂ ಮೃತ್ಯು ಅವಕಾಶಗಳು 50% ಕಡಿಮೆಯಾಗುತ್ತದೆ.
ನೂರು ವರ್ಷಗಳು ಬದುಕಿದ ಪುರುಷರು ಮಹಿಳೆಯರಿಗಿಂತ ಸಣ್ಣಗೆ ಇರುವವರೇ. ಈ ಅಂಶಗಳೊಂದಿಗೆ ಆರೋಗ್ಯಕರ ಜೀವನ ವಿಧಾನ (ಲೈಫ್‌ಸ್ಟೈಲ್), ಕ್ರಮ ತಪ್ಪದ ವ್ಯಾಯಾಮ, ಮಿತ ಆಹಾರ ಸೇವನೆ ಇವುಗಳನ್ನು ಪಾಲಿಸುವುದರಿಂದ ಪ್ರಮಾದಕರ ಘಟನೆಗಳನ್ನು ತಪ್ಪಿಸಿಕೊಂಡು ದೀರ್ಘಾಯುಗಳಾಗಿರ ಬಹುದೆಂದು ಸಂಶೋಧನೆಗಳು ತಿಳಿಸುತ್ತವೆ.
3. ವೇಗವಾಗಿ ನಡೆಯುವುದು, ಚಕಚಕ ಅಂತ ಕೆಲಸ ಮಾಡುವುದು ಇವುಗಳಿಂದಲೂ ಆಯಸ್ಸು ವೃದ್ಧಿಯಾಗುತ್ತದೆ. ಪ್ರತಿ ಸಾರಿಯೂ ನಡಿಗೆಯ ವೇಗ 0.1 ಮೀಟರ್ ಹೆಚ್ಚಿಸಿದರೆ ಮರಣದ ಸಂಭವಗಳು 12% ಕಡಿಮೆಯಾಗುತ್ತದೆ. ಪೀಟ್ಸ್‌ಬರ್ಗ್  ವಿಶ್ವವಿದ್ಯಾಲಯದ ಪರಿಶೋಧನೆಗಳು ತಿಳಿಸುತ್ತವೆ.ಮನುಷ್ಯನ ವೇಗ ಸರಾಸರಿ ಸೆಕೆಂಡಿಗೆ 3 ಹೆಜ್ಜೆಗಳಿರುತ್ತವೆ. ಸೆಕೆಂಡಿಗೆ ೨ ಹೆಜ್ಜೆಗಳಿಗಿಂತ ಕಡಿಮೆ ನಡೆಯುವವರಲ್ಲಿ ಈ ಮೃತ್ಯು ಅವಕಾಶ ಹೆಚ್ಚಾಗಿರುತ್ತದೆಂದು ಈ ಅಧ್ಯಯನಗಳು ತಿಳಿಸುತ್ತವೆ. ಸೆಕೆಂಡಿಗೆ 3.3 ಹೆಜ್ಜೆಗಳನ್ನು (ಗಂಟೆಗೆ 2.25 ಮೈಲಿಗಳು) ನಡೆಯುವವರು ದೀರ್ಘಕಾಲ ಜೀವಿಸುತ್ತಾರೆ.ಆದ್ದರಿಂದ ಸ್ತ್ರೀ-ಪುರುಷರೆಂಬ ಭೇದಭಾವವಿಲ್ಲದೆ ಸೆಕೆಂಡಿಗೆ ಕನಿಷ್ಠ ಮೂರು ಹೆಜ್ಜೆಗಳು ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
4.ಸಾಮಾಜಿಕ ಸಂಬಂಧಗಳು ಹೆಚ್ಚಾಗಿರುವವರಿಗೆ ದೀರ್ಘಾಯುಸ್ಸು ಇರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. ಒಂಟಿತನದಿಂದ ವ್ಯಾಧಿಗಳಿಗೆ ಗುರಿಯಾಗಿ, ಅವು ಉಲ್ಭಣ ವಾಗುತ್ತದೆ. ಆದ್ದರಿಂದ ಒಳ್ಳೆಯ ಸಾಮಾಜಿಕ ಸಂಬಂಧವನ್ನು ಬೆಳೆಸಿಕೊಳ್ಳುವುದು ಉತ್ತಮ. ಇದನ್ನು 1,500 ಮಂದಿಯನ್ನು ಎರಡು ಭಾಗಗಳಾಗಿ ಮಾಡಿ ಅವರನ್ನು ಅಧ್ಯಯನ ಮಾಡಿದಾಗ ಒಂಟಿಯಾಗಿರುವವರಿಗಿಂತ ಸಮಾಜದಲ್ಲಿ ಬೆರೆತಿದ್ದವರಿಗೆ ಉತ್ತಮ ಆರೋಗ್ಯ ದೀರ್ಘಾಯುಸ್ಸು ಪ್ರಾಪ್ತವಾಗಿತ್ತಂತೆ.
5. 35 ವರ್ಷಗಳ ಆ ನಂತರ ಮಗುವಿಗೆ ಜನ್ಮವಿತ್ತ ತಾಯಿಗೆ ವಯಸ್ಸು ಏರಿದಂತೆಲ್ಲಾ ಆಕೆ ಆರೋಗ್ಯವಾಗಿರುತ್ತಾಳೆ. ಇಂಗ್ಲೆಂಡ್‌ನಲ್ಲಿ 100 ವರ್ಷ ವಯಸ್ಸು ದಾಟಿದವರನ್ನು ಸಮೀಕ್ಷೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.40 ವರ್ಷಗಳ ನಂತರ ತಾಯಿ ಯಾದವರು 100 ವರ್ಷಗಳು ಬದುಕುವ ಸಂಭವಗಳು ಹೆಚ್ಚೆಂದು ಅದು 35 ವರ್ಷಗಳಾದ ನಂತರ ತಾಯಿ ಅದವರಿಗಿಂತ ದೀರ್ಘಾಯುಗಳಾಗಿ ಬಾಳುತ್ತಾರೆಂದು ಸಾರುತ್ತಾರೆ. ಆರೋಗ್ಯ ಪಂಡಿತರು, ಇದು ಅಪರೂಪ ಅನಿಸಿದರೂ 30, 40, 50 ವರ್ಷಗಳಲ್ಲಿ ಮಗುವಿನ ತಾಯಿಯಾದವರಿಗೆ ಅವರ ದೇಹದಲ್ಲಿ ಪುನರೋತ್ಪತ್ತಿ ದೀರ್ಘಾಕಾಲವಿದ್ದು ಅವರಿಗೆ ದೀರ್ಘಾಯುಸ್ಸನ್ನು ನೀಡುತ್ತದೆಂದು ಒಂದು ಅಂದಾಜು.
6. ದೇಹದ ತೂಕವು ಹೆಚ್ಚಾಗಿದ್ದರೆ ಹೆಚ್ಚು ಆಯಸ್ಸಿನವರೆಗೂ ಜೀವಿಸಲಾರರೆಂದೂ, ತೂಕವು ಸ್ವಲ್ಪ ಕಡಿಮೆಯಾಗಿದ್ದರೆ, 100 ಹಾಗೂ 100ರ ಮೇಲೆ ಬದುಕುತ್ತಾರೆ ಎಂದು ಸಂಶೋಧನೆಗಳಿಂದ ದೃಢಪಡಿಸಿದ್ದಾರೆ. ಹೆಚ್ಚಾಗಿ ಅನಾರೋಗ್ಯ, ವ್ಯಾಧಿಗಳು, ದೇಹದ ಸಮಸ್ಯೆಗಳು ಕಂಡು ಬರುವುದು ಸಾಮಾನ್ಯವಾಗಿ ಸ್ಥೂಲಕಾಯರಲ್ಲಿ. ಇವರಲ್ಲಿ ಅಧಿಕ ರಕ್ತದೊತ್ತಡ, ಬಿ.ಪಿ. ಷುಗರ್, ಆಸ್ತಮಾ... ಇತ್ಯಾದಿ ದೊಡ್ಡ ಕಾಯಿಲೆಗಳು ಸಾಮಾನ್ಯ. ಮಹಿಳೆಯರಲ್ಲಿ ಸಣ್ಣಗಿರುವವರು 100 ವರ್ಷಗಳಿಗೆ ಮೇಲ್ಪಟ್ಟು ಬದುಕುತ್ತಾರೆ. ಕಾರಣ ಅವರು ಮನೆ ಕೆಲಸಗಳಲ್ಲಿ ಶ್ರಮಪಡುತ್ತಾರೆ. ಹೊರಗೆ ಹೆಚ್ಚಾಗಿ ತಿನ್ನದೇ ಮನೆ ಆಹಾರಕ್ಕೆ ಒಗ್ಗಿಕೊಂಡು ಶುದ್ಧ ಆಹಾರವನ್ನು ಸೇವಿಸುತ್ತಾರೆ. ಯಾವುದೇ ಕೆಟ್ಟ ಅಭ್ಯಾಸ ಇರುವುದಿಲ್ಲ ಅದಕ್ಕೆ.
7. ಸಣ್ಣಗೆ ಉದ್ದವಾಗಿರುವವರೂ ದೀರ್ಘಾಯುಗಳಾಗಿರುತ್ತಾರೆ ಅಂತಾರೆ ಸಂಶೋಧಕರು. ಇದಕ್ಕೆ ಅವರ ಕ್ರೋಮೋಜೋನ್ಸ್ ಮತ್ತು ಡಿ.ಎನ್.ಎ. ಕಾರಣ. ದೀರ್ಘಕಾಲಿಕ ಒತ್ತಡಗಳನ್ನು ನಿವಾರಣೆ ಮಾಡಿಕೊಳ್ಳುವುದು. ಧೂಮಪಾನ, ಮದ್ಯಪಾನ ಚಟಗಳನ್ನು ಬಿಡುವುದು, ಒಮೆಗಾ-3 ಪೋಷಕಾಂಶಗಳು ಲಭ್ಯವಾಗುವ ಬಾದಾಮಿ, ಪಿಷ್ಟ, ಮೀನು ಇತ್ಯಾದಿ ಪದಾರ್ಥಗಳನ್ನು ಸೇವಿಸುವುದರಿಂದ ಟಲಿಮರ‍್ಸ್ ಕಾರ್ಯನಿರ್ವಹಿಸಿ ಉದ್ದವಾಗಿ, ದೀರ್ಘಾಯುವಾಗಿ ಬೆಳೆಯಲು ಸಾಧ್ಯವಾಗುತ್ತದೆ.
8. ಮಹಿಳೆಯರಿಗೆ 100 ವರ್ಷಗಳು ಬಾಳುವ ಅವಕಾಶ ಪುರುಷರಿಗಿಂತ ಜಾಸ್ತಿ. ಇದಕ್ಕೆ ಕಾರಣ ಹಲವಾರು. ಅವರಲ್ಲಿ ಉಂಟಾಗುವ ಋತುಚಕ್ರ, ಸೆಕ್ಸ್ ಹಾರ್ಮೋನ್ಸ್ ಬೇಗ ನಿಷ್ಕ್ರಿಯವಾಗುವುದು. ಮೆನೋಪಾಜ್ ಪರಿಸ್ಥಿತಿ, ಪ್ರಶಾಂತವಾದ ಜೀವನ, ಒತ್ತಡವಿಲ್ಲದ, ಸಮಸ್ಯೆ ಇಲ್ಲದ, ಯೋಚನೆ ಇಲ್ಲದ ಜೀವನ.ಹಾಗೇ ಅವರಲ್ಲಿ ಧೂಮಪಾನ, ಮದ್ಯಪಾನ, ಡ್ರಗ್ಸ್, ಹೆರಾಯಿನ್ ಸೇವನೆ ಇಂಥ ಕೆಟ್ಟ ಚಟಗಳ್ಯಾವುದೂ ಇರುವುದಿಲ್ಲ. ಆತ್ಮಹತ್ಯೆಗಳಂತವು ಪುರುಷರಿಗಿಂತ ಸ್ತ್ರೀಯರಲ್ಲಿ ಕಡಿಮೆ ಇರುತ್ತದೆ. ಅವರಿಗೆ ಧೈರ್ಯ, ಮನೋಬಲ ಹೆಚ್ಚು. ಅವರು ತಮ್ಮ ದೇಹದ ಕ್ಯಾಲೋರಿ ಶಕ್ತಿಯನ್ನು ಎಂದೂ ಅಪ್ರಯೋಜನವಾಗಿ ಬಳಸಿಕೊಳ್ಳುವುದಿಲ್ಲ. ಕೂಗುವುದು, ಅರಚಾಡುವುದು, ಹೊಡೆದಾಡುವುದು, ಮಾನಸಿಕ ಆತಂಕ, ಆಂದೋಲನ ಇವು ಇರುವುದಿಲ್ಲ. ತಾಳ್ಮೆಯನ್ನು ಪಾಲಿಸುತ್ತಾರೆ. ಈ ಅಂಶಗಳೆಲ್ಲವೂ ಅವರ ಆರೋಗ್ಯವನ್ನು ಸಕಾರಾತ್ಮಕವಾಗಿರಿಸಿ ಅವರ ದೀರ್ಘಾಯಸ್ಸಿಗೆ ಸೋಪಾನ ಹಾಸುತ್ತದೆ.
ಯಾವುದು ಹೇಗೆ ಆದರೂ ಇಂದಿನ ಓಟ ಜೀವನ ಜಟ್ ಯುಗದಲ್ಲಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕಾದ್ದು ಎಲ್ಲವುದಕ್ಕಿಂತಲೂ ಅತ್ಯಗತ್ಯ. ಶುದ್ಧವಾದ ಆಹಾರ ಸೇವನೆ, ನೀರು, ಗಾಳಿಯನ್ನು ಸೇವಿಸುವುದು, ನಡೆಯುವುದು, ವ್ಯಾಯಾಮ, ಒಳ್ಳೆಯ ಅಭ್ಯಾಸ, ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು, ಆದಷ್ಟೂ ದುರಭ್ಯಾಸ, ಕೆಟ್ಟ ಚಟಗಳಿಂದ ದೂರವಿರುವುದು, ಶಾರೀರಿಕ ಶ್ರಮ, ಮಾನಸಿಕ ಪ್ರಶಾಂತತೆ, ಆನಂದವಾಗಿರುವುದು, ತೃಪ್ತಿ ಜೀವನ... ಹೀಗಿರುವಾಗ ಪ್ರತಿಯೊಬ್ಬ ವ್ಯಕ್ತಿಯೂ ದೀರ್ಘಾಯುವಾಗಿ ಈ ಭುವಿಯ ಮೇಲೆ ಜೀವಿಸಬಹುದು. ನೀವೆಲ್ಲರೂ ಇಂದಿನಿಂದಲೇ ಇವುಗಳನ್ನು ಅಭ್ಯಾಸ ಮಾಡಿರಿ! ಗುಡ್‌ಲಕ್! 

No comments:

Post a Comment