Friday, March 15, 2013

ಮಂಜೇಶ್ವರದಲ್ಲೊಂದು ಶಾಲೆಯಲ್ಲಿ ದೆವ್ವದ ಕಾಟ
ಮಂಜೇಶ್ವರ:ಇಲ್ಲಿಯ ಹೆಸರುವಾಸಿಯಾಗಿರುವ ಖಾಸಗಿ ಆಂಗ್ಲ ಮಾದ್ಯಮ ಶಾಲೆಯೊಂದರಲ್ಲಿ ದೆವ್ವದ ಕಾಟ ಇರುವುದಾಗಿ ಕೇಳಿ ಬಂದಿದೆ.ಇಲ್ಲಿಗೆ ಬರುತ್ತಿರುವ ವಿದ್ಯಾರ್ಥಿಗಳಿಗೆ ಆಗಾಗ ಇದರ ಕಾಟದ ಅನುಭವವಾಗುತ್ತಿರುವುದಾಗಿ ವಿದ್ಯಾರ್ಥಿಗಳ ಪೋಷಕರಿಂದ ಕೇಳಿ ಬಂದಿದೆ.
ಈ ಶಾಲೆಗೆ ಆಗಮಿಸುತ್ತಿರುವ ಕೆಲವೊಂದು ವಿದ್ಯಾರ್ಥಿಗಳು  ಶಾಲೆಯಲ್ಲಿ ಅಗಾಗ ತಲೆತಿರುಗಿ ಬೀಳುವುದು ವಾಂತಿ ಮಾಡುವುದು ರಾತ್ರಿ ನಿದ್ದೆ ವೇಳೆ ಏನನ್ನೋ ಕಂಡು ಹೆದರಿದ ರೀತಿಯಲ್ಲಿ ಏನೇನನ್ನೋ ಮಾತನಾಡುತ್ತಿರುವುದು ಮರು ದಿವಸ ವಿಪರೀತ ಜ್ವರ ಬರುವುದು ಈ ರೀತಿಯ ವರ್ತನೆಗಳು ವಿದ್ಯಾರ್ಥಿಗಳಲ್ಲಿ ಕಂಡು ಬರುತ್ತಿರುವುದಾಗಿ  ತಿಳಿದು ಬಂದಿದೆ.ಈ ಬಗ್ಗೆ  ವಿದ್ಯಾರ್ಥಿಗಳ ಪೋಷಕರು ಶಾಲಾ ಆಡಳಿತಮಂಡಳಿಯ ಗಮನಕ್ಕೆ ತಂದಾಗ ದೆವ್ವದ ಕಾಟವಿರುವ ವಿಷಯ ನಮ್ಮ ಅರಿವಿಗೆ ಬಂದಿದೆ ಅದಕ್ಕೆ ನಾವು ಈಗಾಗಲೇ ಬೇಕಾದ ಬಂದೋಬಸ್ತ್ ಮಾಡಿರುವುದಾಗಿ ಸೃಷ್ಟೀಕರಣ ನೀಡಿರುವುದಾಗಿ ಪೋಷಕರೊಬ್ಬರಿಂದ ಮಾಹಿತಿ ಸಿಕ್ಕಿದೆ.
ವಿದ್ಯಾಬ್ಯಾಸಕ್ಕಾಗಿ ಈ ಶಾಲೆಯ ಆಡಳಿತ ಮಂಡಳಿಯು ಪೋಷಕರಿಂದ ದುಬಾರಿ ಶುಲ್ಕವನ್ನು ಪಡೆದು  ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುತ್ತಿದೆ. ಇತರ ಆಂಗ್ಲಮಾದ್ಯಮ ಶಾಲೆಗಳನ್ನು ಹೋಲಿಸಿದರೆ ಈ ಶಾಲೆಯ ಶಿಕ್ಷಣವನ್ನು ಮೆಚ್ಚಬೇಕಾದದ್ದೇ ಎಂಬುದು ಇದೇ ಶಾಲೆಯಲ್ಲಿ ಕಲಿಯುತ್ತಿರುವ ೭ ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬನ ಪೋಷಕರ ಅಭಿಪ್ರಾಯ ಇದರಿಂದಾಗಿ ಮಂಜೇಶ್ವರ ಪರಿಸರದ ಅಧಿಕ ಪೋಷಕರೂ ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿಕೊಳ್ಳುತಿದ್ದಾರೆ.ಇದೀಗ ಶಾಲೆಯಲ್ಲಿ ದೆವ್ವದ ಕಾಟವೆಂದು ವಿದ್ಯಾರ್ಥಿಗಳ ಪೋಷಕರಿಂದ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ  ಪೋಷಕರು ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದೆ.ಇಲ್ಲಿಯ ದೆವ್ವದ ಕಾಟದ ಬಗ್ಗೆ ಶಾಲಾಪರಿಸರದ ನಿವಾಸಿಗಳಲ್ಲಿ ವಿಚಾರಿಸಿದಗಲೂ ಶಾಲೆ ಕಟ್ಟಿದ ಪ್ರದೇಶದಲ್ಲಿ ಮೊದಲೇ ದೆವ್ವದಕಾಟವಿತ್ತೆಂದು ಕೇಳಿಬಂದಿದೆ.

No comments:

Post a Comment