Monday, March 25, 2013

ಸಂದೇಶ ಕಳುಹಿಸುವ ಮೂಲಕ ಮೊಬೈಲ್‌ ಬ್ಯಾಟರಿ ಚಾರ್ಜ್‌





ಮೊಬೈಲ್‌ನಲ್ಲಿ ಎಸ್‌ಎಂಎಸ್‌ ರವಾನಿಸುವುದು ಗೊತ್ತು. ಆದರೆ ಎಸ್‌ಎಂಎಸ್‌ ಮೂಲಕವೇ ಮೊಬೈಲ್‌ ಬ್ಯಾಟರಿ ರೀಚಾರ್ಚ್‌ ಮಾಡುವುದು ಗೊತ್ತೇ?

ವಿದ್ಯುತ್‌ ಪೂರೈಕೆ ಇಲ್ಲದ ಅಥವಾ ದಿನದ ಬಹುಪಾಲು ವಿದ್ಯುತ್‌ ಸಮಸ್ಯೆ ಇರುವಂತಹ ಪ್ರದೇಶಗಳಿಗೆ ಭಾರೀ ಅನುಕೂಲವಾಗಬಹುದಾದ ಈ ಸಂಶೋಧನೆಯನ್ನು ಬ್ರಿಟನ್‌ ಮೂಲದ ಬಫ‌ಲ್ಲೋ ಗ್ರಿಡ್‌ ಎಂಬ ಕಂಪನಿ ಮಾಡಿದೆ. ಮೊಬೈಲ್‌ ಗ್ರಾಹಕರು ಕೇವಲ ಒಂದು ಸಂದೇಶ ಕಳುಹಿಸುವ ಮೂಲಕ ಸುಮಾರು 1.30 ಗಂಟೆ ಬಳಸಬಹುದಾದಷ್ಟು ಬ್ಯಾಟರಿ ಚಾರ್ಜ್‌ ಮಾಡಿಕೊಳ್ಳಬಹುದು.

'ಬಫ‌ಲ್ಲೋ ಗ್ರಿಡ್‌' ಕಂಪನಿ ಆಫ್ರಿಕಾದ ಬಡ ದೇಶ ಉಗಾಂಡದಲ್ಲಿ ಸೌರಶಕ್ತಿ ಆಧರಿತ ಬ್ಯಾಟರಿಯನ್ನು ಹಳ್ಳಿಗಳಿಗೆ ಸೈಕಲ್‌ನಲ್ಲಿ ತೆಗೆದುಕೊಂಡು ಹೋಗುತ್ತದೆ. ಇವುಗಳಿಗೆ ಒಂದು ಸಂಖ್ಯೆ ಇರುತ್ತದೆ. ಅದಕ್ಕೆ ಗ್ರಾಹಕರು ಎಸ್‌ಎಂಎಸ್‌ ಕಳುಹಿಸಿದ ಕೂಡಲೇ ಬ್ಯಾಟರಿಯಲ್ಲಿ ಚಿಕ್ಕದೊಂದು ಎಲ್‌ಇಡಿ ಬಲ್ಬ್ ಹೊತ್ತಿಕೊಳ್ಳುತ್ತದೆ. ಇದು ಬ್ಯಾಟರಿ ಚಾರ್ಜ್‌ ಮಾಡಲು ಅನುಮತಿ ಸಿಕ್ಕಿದ್ದನ್ನು ಸೂಚಿಸುತ್ತದೆ. ಬಳಿಕ ಗ್ರಾಹಕರು ಅಲ್ಲೇ ಇರುವ ಚಾರ್ಜಿಂಗ್‌ ಪಾಯಿಂಟ್‌ನಲ್ಲಿ ಕೇಬಲ್‌ನ ಮೂಲಕ ಸುಲಭವಾಗಿ ಬ್ಯಾಟರಿ ಚಾರ್ಜ್‌ ಮಾಡಿಕೊಳ್ಳಬಹುದು. ಸುಮಾರು ಒಂದೂವರೆ ಗಂಟೆಕಾಲ ಮೊಬೈಲ್‌ ಬಳಸಲು ಅಗತ್ಯವಾದ ಬ್ಯಾಟರಿ ಚಾರ್ಜ್‌ ಮಾಡಿಕೊಳ್ಳಲು 2.25 ರೂ. ದರ ವಿಧಿಸಲಾಗುತ್ತದೆ.
webduniya 

No comments:

Post a Comment