Wednesday, March 27, 2013

ಮಚ್ಚಂಪ್ಪಾಡಿ ತಿರುಗು ರಸ್ತೆಯ ನಿರ್ಜನ ಪ್ರದೇಶದಲ್ಲಿ ಸೆಕ್ಸ್ ದಂಧೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ: ಮಚ್ಚಂಪ್ಪಾಡಿ ಮಸೀದಿಗೆ ದಾರಿ ಎಂದು ಹಾಕಲಾಗಿರುವ ನಾಮಫಲಕದ ರಸ್ತೆಯಿಂದ ಸ್ವಲ್ಪ ಮುಂದೆ ಅದ್ಯಾಪಕರೊಬ್ಬರ ನಿವಾಸದ ಮುಂಬಾಗದ ನಿರ್ಜನ ಪ್ರದೇಶವೊಂದರಲ್ಲಿ ವ್ಯಾಪಕವಾದ ಸೆಕ್ಸ್ ದಂಧೆ ನಡೆಯುತ್ತಿರುವುದಾಗಿ ಸ್ಥಳೀಯರಿಂದ ಕೇಳಿ ಬಂದಿದೆ.
ರಾತ್ರಿ ಹೊತ್ತಿನಲ್ಲಿ 11 ಗಂಟೆಯ ನಂತ್ರ ಇಲ್ಲಿಗೆ ಸೆಕ್ಸ್ ದಂಧೆಗಾಗಿ ಸ್ಥಳೀಯರ ಸಹಿತ ಕಾರು ಬೈಕ್ ಹಾಗು ಆಟೋದಲ್ಲಿ ಅನ್ಯರಾಜ್ಯದ ಕೆಲವೊಂದು ವ್ಯಕ್ತಿಗಳು ಕೂಡಾ ಆಗಮಿಸುತಿದ್ದಾರೆಂದು ಕೇಳಿ ಬಂದಿದೆ.ಕರ್ನಾಟಕ ದೇರಳ ಕಟ್ಟೆಯಲ್ಲಿ ರಾಜಿ ಪಂಚಾತಿಗೆಗಳಿಗೆ ನೇತೃತ್ವ ವಹಿಸುತ್ತಿರುವ ಹೆಂಗಸೊಬ್ಬೊಳು ರಾತ್ರಿಯಲ್ಲಿ ಸ್ಥಳಕ್ಕೆ ದಂಧೆಗೆ ಆಗಮಿಸಿ ಬೆಳಗಾಗುವಾಗ ಇಲ್ಲಿಂದ ನಿರ್ಗಮಿಸುತ್ತಿರುವುದಾಗಿ ಪ್ರತ್ಯಕ್ಶದರ್ಶಿಯೊಬ್ಬರು ತಿಳಿಸಿದ್ದಾರೆ.ಇವಳೇ ದಂಧೆಯ ಮೂಲ ಸೂತ್ರಧಾರಿಯೆಂದು ಹೇಳಲಾಗುತ್ತಿದೆ.ಇವಳು ಇತರ ಕೆಲವು ಹೆಂಗಸರನ್ನು ತಂದು ಇಲ್ಲಿಯ ದಂಧೆಗೆ ಬಳಸುತ್ತಿರುವುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ.
ಸಂಪೂರ್ಣ ಕತ್ತಲಾಗಿರುವ ಪ್ರದೇಶದಲ್ಲಿ ರಾತ್ರಿಯಲ್ಲಿ ಒಂದು ಹೆಂಗಸಿನ ಜತೆಯಾಗಿ 5 ಅಥವಾ 6 ಜನ ಗಂಡಸರಿರುವುದಾಗಿ ಆರೋಪವಿದೆ.ಬೆಳಗಾದ ಕೂಡಲೇ ಸ್ಥಳದಲ್ಲಿ ಕಾಂಡೊಮ್ ಹಾಗು ಮದ್ಯದ ಬಾಟ್ಲಿಗಳನ್ನು ನೋಡಬಹುದಾಗಿದೆ.ಮಂಜೇಶ್ವರದ ಹೊಸಂಗಡಿ ಹಾಗು ಉಪ್ಪಳದ ಲಾಡ್ಜ್ ಗಳಿಗೆ ನಿರಂತರವಾಗಿ  ಪೊಲೀಸ್ ಧಾಳಿ ಆಗುತ್ತಿರುವುದರಿಂದ ಸೆಕ್ಸ್ ವ್ಯಾಪಾರಿಗಳು ಸೆಕ್ಸ್ ದಂಧೆಗಾಗಿ ಮಚ್ಚಂಪ್ಪಾಡಿ ನಿರ್ಜನ ಪ್ರದೇಶವನ್ನು ಆಯ್ಕೆ ಮಾಡಿರಬಹುದೆಂದು ನಾಗರಿಕರು ಶಂಶಯವನ್ನು ವ್ಯಕ್ತಪಡಿಸಿದ್ದಾರೆ.ಇದೇ ದಾರಿಯಲ್ಲಿ ಗೋವಿಂದ ಪೈ ಸ್ಮಾರಕ ಕಾಲೇಜಿನ ಶ್ಮಶಾನದ ಎದುರು ಜೂಜಾಟದ ಆಡ್ಡೆಯೊಂದು ಕಾರ್ಯಾಚರಿಸುತಿದ್ದು ಆಟ ಮುಗಿದ ನಂತ್ರ  ಇಲ್ಲಿಂದ ಕೂಡಾ ಗಿರಾಕಿಗಳು ಸೆಕ್ಸ್ ದಂಧೆಗಾಗಿ ರಾತ್ರಿಯಲ್ಲಿ ಮಚ್ಚಂಪಾಡಿ ನಿರ್ಜನ ಸ್ಥಳಕ್ಕೆ ತಲುಪುತ್ತಿರುವುದಾಗಿ ತಿಳಿದು ಬಂದಿದೆ.

No comments:

Post a Comment