Saturday, March 9, 2013

ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ನಿರ್ಲಕ್ಷ್ಯಮಂಜೇಶ್ವರ:ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತರಾಗಿರುವ ವೈಧ್ಯರು ರೋಗಿಗಳನ್ನು ನಿರ್ಲಕ್ಷಿಸುತಿದ್ದಾರೆಂಬ ದೂರು ಕೇಳಿ ಬಂದಿದೆ.
ಇಂದು ಬೆಳಿಗ್ಗೆ ಸರಕಾರಿ ಆಸ್ಪತ್ರೆಗೆ ತಲುಪಿದ ತೂಮಿನಾಡು ನಿವಾಸಿ ಮಹಿಳೆಯೊಬ್ಬರು ಅನಾರೋಗ್ಯ ಪೀಡಿತರಾದ  ತನ್ನ ಇಬ್ಬರು ಮಕ್ಕಳನ್ನು ಕರ್ತವ್ಯದಲ್ಲಿದ್ದ  ವೈಧ್ಯರೀಗೆ ತೋರಿಸಿದಾಗ ವೈಧ್ಯರು ಅನಾವಶ್ಯಕ ಪ್ರಶ್ನೆಗಳನ್ನು ಕೇಳಿ ಅವಾಚ್ಯ ಶಭ್ದಗಳಿಂದ ನಿಂದಿಸಿರುವುದಾಗಿ ದೂರಲಾಗಿದೆ.ಇದರಿಂದ ನೊಂದ ಮಕ್ಕಳ ತಾಯಿ ವೈಧ್ಯರ ವಿರುದ್ದ ದೂರು ನೀಡುವುದಾಗಿ ತಿಳಿಸಿದಾಗ ಪರ್ವಾಗಿಲ್ಲ ಎಲ್ಲಿಗೆ ಬೇಕಾದರೂ ದೂರು ನೀಡಿ ಎಂದು ಹಿಯಾಳಿಸಿ ಕಳಿಸಿರುವುದಾಗಿ ಮಹಿಳೆ ಮಂಜೇಶ್ವರ ಗ್ರಾಹಕರ ವೇದಿಕೆ ಗೆ ನೀಡಿದ ದೂರಿನಲ್ಲಿ ತಿಳಿಸಿರುತ್ತಾರೆ.

No comments:

Post a Comment