Thursday, March 21, 2013

ಮಟ್ಕಾ ಅಡ್ಡೆಗೆ ಧಾಳಿ:ಮೂವರ ಬಂಧನನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮಟ್ಕಾ ದಂಧೆ ನಡೆಯುತಿದ್ದ ಪ್ರಧಾನ ಅಡ್ಡೆಯೊಂದಕ್ಕೆ ಧಾಳಿ ನಡೆಸಿದ ಪೊಲೀಸರು ಪ್ರಧಾನ ಸೂತ್ರಧಾರಿಗಳಾದ ಮೂವರನ್ನು ಬಂಧಿಸಿ ಆಟಕ್ಕೆ ಬಳಸಿದ ನಗದು ಹಾಗು ಉಪಕರಣಗಳನ್ನು ವಶಪಡಿಸಿದ ಘಟನೆ ಇಲ್ಲಿಗೆ ಸಮೀಪದ  ಅಂಗಡಿಪದವಿನಲ್ಲಿ ನಡೆದಿದೆ.
ಮಂಜೇಶ್ವರ ಹೊಸಂಗಡಿ ಸಮೀಪದ ಅಂಗಡಿ ಪದವಿನಲ್ಲಿರುವ ಕೊಠಡಿಯೊಂದು ದಂಧೆಯ ಪ್ರಧಾನ ಕೇಂದ್ರವಾಗಿದ್ದು ಪೊಲೀಸರಿಗೆ ತಲುಪಿದ ಖಚಿತವಾದ ಮಾಹಿತಿಯ ಆಧಾರದಲ್ಲಿ ಅಡ್ಡೆಗೆ ಮಂಜೇಶ್ವರ ಠಾಣಾಧಿಕಾರಿ ಬಿಜುಲಾಲ್ ರವರ ನೇತೃತ್ವದಲ್ಲಿ ಧಾಳಿ ನಡೆಸಲಾಗಿದೆ.
ಧಾಳಿ ವೇಳೆ ಆಟದಲ್ಲಿ ನಿರತರಾಗಿದ್ದ ಮಜಿಬೈಲ್ ನಿವಾಸಿ ಗಣೇಶ(೪೪)ಮಿತ್ತ ಕನಿಲದ ಸತೀಶ(೩೫)ಪಿರಾರ ಮೂಲೆ ನಿವಾಸಿ ಮನೋಜ್ (೪೨) ಎಂಬಿವರನ್ನು ಬಂಧಿಸಲಾಗಿದ್ದು ಮೂವರು ದಂಧೆಯ ಪ್ರಧಾನ ಸೂತ್ರಧಾರರಾಗಿದ್ದು ಇವರಿಂದ ಆಟಕ್ಕೆ ಬಳಸಲಾಗಿದ್ದ ೧೫,೫೦೦ ರೂ ಹಾಗು ದಂಧೆಗೆ ಬಳಸಲಾಗಿದ್ದ ಉಪಕರಣಗಳನ್ನು ವಶಪಡಿಸಲಾಗಿದೆಂದು ಪೊಲೀಸರು ತಿಳಿಸಿದ್ದಾರೆ.ಮಂಜೇಶ್ವರದ ಹಲವು ಬಾಗಗಳಿಗೆ ಇಲ್ಲಿಂದ ಸಂಖ್ಯೆಗಳನ್ನು ರವಾನಿಸುತ್ತಿರುವುದಾಗಿ ಕೇಳಿ ಬಂದಿದೆ.

No comments:

Post a Comment