Wednesday, March 20, 2013

ಗೇರು ಕಟ್ಟೆ ಟಿ.ಎ.ಎನರ್ಜಿ ಇಂಡಸ್ಟ್ರೀಸ್ ಕಾರ್ಖಾನೆ ಬೆಂಕಿ





ನಮ್ಮ ಪ್ರತಿನಿಧಿ ವರದಿ 
ಮಂಜೇಶ್ವರ:ಟಯರ್ ಕಾರ್ಖಾನೆಯೊಂದರಲ್ಲಿ ಉಂಟಾದ ಆಕಸ್ಮಿಕ ಬೆಂಕಿಯಿಂದ ಅಪಾರ ನಾಶ ನಷ್ಟ ಸಂಭವಿಸಿದ ಘಟನೆ ಇಲ್ಲಿಗೆ ಸಮೀಪದ ಪಾವೂರು ಗೇರು ಕಟ್ಟೆಯಿಂದ ವರದಿಯಾಗಿದೆ.
 ಮಂಜೇಶ್ವರಕ್ಕೆ ಸಮೀಪದ ಗೇರು ಕಟ್ಟೆಯಲ್ಲಿ  ನಾಡಿನ ಜನರ ವಿರೋಧದ ಮದ್ಯೆ ಇತ್ತೀಚೆಗೆ ಸ್ಥಾಪನೆಯಾದ ಟಿ.ಎ.ಎನರ್ಜಿ ಇಂಡಸ್ಟ್ರೀಸ್ ಎಂಬ ಹೆಸರಿನಲ್ಲಿರುವ ಗೇರು ಕಟ್ಟೆ ಟಯರ್ ಕಾರ್ಖಾನೆಯಲ್ಲಿ ಇಂದು ಮದ್ಯಾಹ್ನ ಸಂಭವಿಸಿದ ಆಕಸ್ಮಿಕ ಬೆಂಕಿಯು ಸುಮಾರು ಒಂದುವರೆ ತಾಸು ಕಾಲ ಹೊತ್ತಿ ಉರಿಯಿತು.ನಂತ್ರ ಉಪ್ಪಳ ಹಾಗು ಕಾಸರಗೋಡುನಿಂದ ಆಗಮಿಸಿದ ಅಗ್ನಿಶಾಮಕ ಧಳದ ಸಿಬ್ಬಂಧಿಗಳು ಹರಸಾಹಸ ಪಟ್ಟು ಕೊನೆಗೂ ಬೆಂಕಿಯನ್ನು ನಂದಿಸುವಲ್ಲಿ ಯಶಶ್ವೀಯಾಗಿದ್ದಾರೆ.ಕಾರ್ಖಾನೆಯಲ್ಲಿ ಉಂಟಾದ ಆಕಸ್ಮಿಕ ಬೆಂಕಿಯಿಂದ ಸಿಬ್ಬಂಧಿಗಳೆಲ್ಲರೂ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.ಸುಮಾರು ೧ ಲಕ್ಷ ನಷ್ಟ ಅಂದಾಜಿಸಲಾಗಿದೆ.ಆಕಸ್ಮಿಕ ಬೆಂಕಿಗೆ ಇನ್ನೂ ಕಾರಣ ತಿಳಿದು ಬಂದಿಲ್ಲ
     ಹಳೆಯದಾದ ಟಯರ್ ಗಳನ್ನು ಉರಿಸಿ ಅದರ ಎಣ್ಣೆ ಹಾಗು ಪೌಡರ್ ತಯಾರು ಮಾಡುವ ಉದ್ದೇಶದಿಂದ  ಮಂಜೇಶ್ವರದ ಪಾವೂರು ಗೇರುಕಟ್ಟೆ ಎಂಬ ಸ್ಥಳದಲ್ಲಿ ಮಂಗಳೂರಿನ  ಕಂಕನಾಡಿ ನಿವಾಸಿ ಮಹಮ್ಮದ್ ಖಾಸಿಂ ಎಂಬ ಉದ್ಯಮಿಯೊಬ್ಬರು ಈ ಕಾರ್ಖಾನೆಯನ್ನು ಸ್ಥಾಪಿಸಿದ್ದರು.ಈ ಕಾರ್ಖಾನೆಯಿಂದ ಹೊರಬರುವ ದುರ್ವಾಸನೆಯ ಹೊಗೆಯಿಂದ ಪರಿಸರದ ಜನರಿಗೆ ಆರೋಗ್ಯಕ್ಕೆ ಹಾನಿಕರವಿದೆಯೆಂದು ಊರಿನ ಜನರ ವ್ಯಾಪಕವಾದ ವಿರೋಧದ ನಡುವೆಯೂ ಸರಿಯಾದ ಸುರಕ್ಷಾ ಕ್ರಮವನ್ನು ಅನುಸರಿಸದೆ ಇಲ್ಲಿ ಕಾರ್ಖಾನೆಯ ಯಂತ್ರವನ್ನು ಚಲಾಯಿಸುತ್ತಿರುವುದಾಗಿ ಊರಿನವರು ಆರೋಪಿಸಿದ್ದಾರೆ.ಪತ್ರಕರ್ತರು ಘಟನಾ ಸ್ಥಳಕ್ಕೆ ತಲುಪಿ ಈ ಬಗ್ಗೆ ಸಂಭಂಧಪಟ್ಟ ಅಧಿಕೃತರಲ್ಲಿ ವಿವರವನ್ನು ಕೇಳಿದಾಗ ಸರಿಯಾದ ಮಾಹಿತಿಯನ್ನು ನೀಡಿಲ್ಲವೆಂಬ ಆರೋಪ ಕೂಡಾ ಬಂದಿದೆ

No comments:

Post a Comment