Friday, March 29, 2013

ಕಾಸರಗೋಡು ಜಿಲ್ಲೆಗೆ ವಿಶೇಷ ಆರ್ಥಿಕ ಪ್ಯಾಕೇಜ್: ಕೇರಳ ರಾಜ್ಯ ಸಚಿವ ಸಂಪುಟ ಸಭೆಯ ತಾತ್ವಿಕ ಒಪ್ಪಿಗೆ



 ಮಾರ್ಚ್ -29-2013

 ಕಾಸರಗೋಡು, ಮಾ.28: ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 11 ಸಾವಿರ ಕೋಟಿ ರೂ.ನ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಲು ರಾಜ್ಯ ಸಚಿವ ಸಂಪುಟ ಸಭೆ ತಾತ್ವಿಕ ಒಪ್ಪಿಗೆ ನೀಡಿದೆ. ಈ ಪ್ಯಾಕೇಜ್‌ನಡಿ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಸರಕಾರ ಯೋಜನೆ ಹಾಕಿ ಕೊಂಡಿದೆ.
ಕೇಂದ್ರ ಸರಕಾರ ಮತ್ತು ಖಾಸಗಿ ವಲಯದ ಸಹಭಾಗಿತ್ವದಲ್ಲಿ ಈ ಪ್ಯಾಕೇಜ್ ರೂಪಿಸಲಾಗುತ್ತಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸುದ್ದಿ ಗಾರರಿಗೆ ತಿಳಿಸಿದರು. ರಾಜ್ಯ ಯೋಜನಾ ಮಂಡಳಿ ಕೂಡ ಈ ಪ್ಯಾಕೇಜ್‌ಗೆ ಅನುಮೋದನೆ ನೀಡಿದೆ. ಇದರಡಿಯಲ್ಲಿ ಬರುವ ಯೋಜನೆಗಳ ರೂಪುರೇಷಗಳನ್ನು ಸಿದ್ಧಪಡಿಸಲಾಗಿದೆ. ಯೋಜನೆಯು ಗಡಿನಾಡು ಕಾಸರಗೋಡು ಜಿಲ್ಲೆಗೆ ಬಂಪರ್ ಕೊಡುಗೆಯೆನ್ನಬಹುದು. ಇದರಲ್ಲಿ 2524.56 ಕೋಟಿ ರೂ. ರಾಜ್ಯ ಸರಕಾರದ ಮೊತ್ತವಾಗಿದೆ. ಕೇಂದ್ರದಿಂದ 756.19 ಕೋಟಿ ರೂ. ಅನುದಾನ ಒಳಗೊಂಡಿದೆ. 543 ಕೋಟಿ ರೂ. ವಿದೇಶಿ ನೆರವು, ಖಾಸಗಿ ಸಾರ್ವ ಜನಿಕ ವಲಯಗಳಿಂದ 7263.16 ಕೋಟಿ ರೂ. ಮೀಸಲಿಡಲಾಗುವುದು. ಇದರಿಂದ ಬೃಹತ್ ಯೋಜನೆಗಳು ಜಿಲ್ಲೆಗೆ ಬರಲಿದೆ.
19 ವಲಯಗಳಲ್ಲಿ 448 ಯೋಜನೆ ಗಳನ್ನು ಜಾರಿಗೊಳಿಸಲು ಸಚಿವ ಸಂಪುಟ ನಿರ್ಧರಿಸಿದೆ. ಉದ್ಯಮ ವಲಯಕ್ಕೆ ಅತೀ ಹೆಚ್ಚು ಅನುದಾನವನ್ನು ಮೀಸಲಿಡಲಾ ಗಿದೆ. ಕೃಷಿ ವಲಯಕ್ಕೆ 639 ಕೋ. ರೂ., ಜಲ ಯೋಜನೆಗೆ 760 ಕೋ. ರೂ., ಸ್ವಚ್ಛತೆ, ಮಾಲಿನ್ಯ ಸಂಸ್ಕರಣೆಗೆ 238 ಕೋ. ರೂ., ಆರೋಗ್ಯ ವಲಯಕ್ಕೆ 216 ಕೋ. ರೂ., ಮೀನುಗಾರಿಕೆ ವಲಯಕ್ಕೆ 205 ಕೋ. ರೂ., ಮೀಸಲಿಡಲಾಗಿದೆ. ವಿದ್ಯುತ್ ವಲಯಕ್ಕೆ 827 ಕೋ.ರೂ., ಸೇತುವೆ ಅಭಿವೃದ್ಧಿಗೆ 787 ಕೋ. ರೂ. ಮೀಸಲಿಡಲಾಗಿದೆ.
ಕೃಪೆ:ವಾ.ಭಾರತಿ 

No comments:

Post a Comment