Monday, March 25, 2013

ತೂಮಿನಾಡು: ಯುವತಿಯ ಪೋಟೋ ಕ್ಲಿಕ್ಕಿಸಿದ ಕಾಮುಕ ಪಿಶಾಚಿಗಳಿಗೆ ತಪಾರಕಿ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ: ದಾರಿಯಲ್ಲಿ ನಡೆದು ಹೋಗುತ್ತಿದ್ದ ಯುವತಿಯೊಬ್ಬಳನ್ನು ಗೇಲಿ ಮಾಡಿ ಪೋಟೋ ಕ್ಲಿಕ್ಕಿಸಿದ ಕೃತಕ ಕಾಮುಕನನ್ನು ನಾಗರಿಕರು ಹಿಡಿದು ಚೆನ್ನಾಗಿ ಥಳಿಸಿದ ಘಟನೆ ತೂಮಿನಾಡು ಉದಯ ನಗರದಲ್ಲಿ ನಿನ್ನೆ ಸಂಜೆ ನಡೆದಿದೆ.
ದೈಗೋಳಿಯಿಂದ ವಿದ್ಯಾಭಾಸ ಮುಗಿಸಿ ತೂಮಿನಾಡು ಉದಯನಗರದ ಹಾದಿಯಾಗಿ ಮನೆಗೆ ತೆರಳುತಿದ್ದ ಯುವತಿಯೊಬ್ಬಳನ್ನು ಗೇಲಿ ಮಾಡಿ ದಾರಿಯಲ್ಲಿ ಬೈಕ್ ನಲ್ಲಿ ಅಡ್ಡಗಟ್ಟಿ ಉಪದ್ರಿಸುತಿದ್ದ ಹಾಗು ರಿಕ್ಷಾದಲ್ಲಿ ಬಂದು ಪೋಟೋ ಕ್ಲಿಕ್ಕಿಸಿದ ಕಾಮುಕ ಪಿಶಾಚಿಗಳಾದ  ತೂಮಿನಾಡು ಲಕ್ಷಂ ವೀಡು ನಿವಾಸಿಗಳಾದ ಯುವಕರಿಬ್ಬರನ್ನು ಸಾರ್ವಜನಿಕರು ಹಿಡಿದು ಥಳಿಸಿಸಿರುತ್ತಾರೆ. ಕಾಮುಕ ಪಿಶಾಚಿಗಳು ಹಲವಾರು ಪ್ರಕರಣಗಳ ಆರೋಪಿಗಳಾಗಿದ್ದು ವರ್ಷಗಳ ಹಿಂದೆ ಟಿ.ವಿ.ವಾಹಿನಿಯೊಂದರ ವರದಿಗಾರನಿಗೂ ಹಲ್ಲೆ ನಡೆಸಿದ ಆರೋಪಲ್ಲೂ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಯಾಗಿದ್ದಾರೆಂದು ನಾಗರಿಕರು ಆರೋಪಿಸಿದ್ದಾರೆ. ಕಾಮುಕ ಪಿಶಾಚಿಗಳ ಉಪದ್ರದಿಂದ ಯುವತಿಯು ಮುಖವನ್ನು ಸಂಪೂರ್ಣವಾಗಿ ಮುಚ್ಚಿ ಹೋಗುವಾಗಲೂ ಮುಖದ ಪರದೆಯನ್ನು ತೆಗೆಯಬೇಕೆಂದು ಅಡ್ಡಗಟ್ಟಿದಾಗ ಯುವತಿ ತಡೆಯಲಾರದೆ ಸ್ವಲ್ಪ ದೂರ ಹೋಗಿ ಸ್ಥಳೀಯರಲ್ಲಿ ತಿಳಿಸಿದಾಗ ಅಲ್ಲಿಂದ ನಾಗರಿಕರು ಬಂದು ಕಾಮುಕ ಪಿಶಾಚಿಗಳನ್ನು ಹಿಡಿದು ಥಳಿಸಿರುತ್ತಾರೆ. ಸಂಭಂಧ ಯುವತಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರೂ ಕೆಲವೊಂದು ಹಿರಿಯರ ಮಾತಿಗೋಸ್ಕರ ಸುಮ್ಮನಗಿದ್ದಾಳೆಂದು ತಿಳಿದು ಬಂದಿದೆ. ಇವರ ಮೇಲೆ ಈಗಾಗಲೇ ಹಲವು ಪ್ರಕರಣಗಳು ಮಂಜೇಶ್ವರ ಠಾಣೆಯಲ್ಲಿ ದಾಖಲಾಗಿದ್ದರೂ ಕೃತಕ ಕಾಮುಕರು ಪುನಃ ಅದೇ ಚಾಳಿಯನ್ನು ಮುಂದುವರಿಸುತ್ತಿರುವುದಾಗಿ ನಾಗರಿಕರು ಆರೋಪಿಸಿದ್ದಾರೆ.

No comments:

Post a Comment