Wednesday, March 27, 2013

ಮಂಜೇಶ್ವರ:ರೋಲರ್ ಗೆ ಲಾರಿ ಡಿಕ್ಕಿ
ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ರಸ್ತೆ ಕಾಮಗಾರಿಯ ರೋಲರ್ ಗೆ ಲಾರಿಯೊಂದು ಡಿಕ್ಕಿ ಹೊಡೆದು ರೋಲರ್ ಸಂಪೂರ್ಣ ನುಜ್ಜುಗುಜ್ಜಾಗಿ ರೋಲರ್ ನಲ್ಲಿದ್ದ ಓರ್ವ ಕಾರ್ಮಿಕ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಸಂಜೆ   ಮಂಜೇಶ್ವರ ಗೋವಿಂದ ಪೈ ಕಾಲೇಜಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮುಂಬೈ ಯಿಂದ ಗಾಜುಗಳನ್ನು ಹೇರಿಕೊಂಡು ಕೇರಳದ ಕೊಚ್ಚಿಗೆ ಹೋಗುತಿದ್ದ  ಎಂ.ಎಚ್.11 ಎಂ.5631  ರಿಜಿಶ್ಟ್ರೇಶನ್ ಲಾರಿಯೊಂದು ರಸ್ತೆ ಕಾಮಗಾರಿಯಲ್ಲಿ ನಿರತವಾಗಿದ್ದ ರೋಲರ್ ಗೆ ಡಿಕ್ಕಿಹೊಡೆದು ರೋಲರ್ ಮೇಲೆ ಹತ್ತಿ ನಿಂತಿದೆ. ರೋಲರ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು ರೋಲರ್ ಚಾಲಕ ಕರ್ನಾಟಕದ ಹಾಸನ ನಿವಾಸಿ ಕಲೀಲ್(50) ಎಂಬವರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.ರೋಲರ್ ನಲ್ಲಿ ಜತೆಯಾಗಿದ್ದ ಕರ್ನಾಟಕದ ವಸೂರು ನಿವಾಸಿ ಮಲ್ಲೇಶ್(22) ಎಂಬವರೀಗೆ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ತಲುಪಿರುತ್ತಾರೆ.
ಲಾರಿ ಚಾಲಕನ ಅಜಾಗರುಕತೆಯೇ ಅಫಘಾತಕ್ಕೆ ಕಾರಣವೆಂದು ಹೇಳಲಾಗಿದೆ ಲಾರಿ ಚಾಲಕ ಬೆಳಗಾಂ ನಿವಾಸಿ ಅಜಯ್ ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುತ್ತಾರೆ.

No comments:

Post a Comment