Monday, March 18, 2013

ಕಿಡಿಗೇಡಿಗಳಿಂದ ಮಸೀದಿ ದೇವಸ್ಥಾನಗಳ ಪ್ಲೆಕ್ಸ್ ಬೋರ್ಡ್ ನಾಶನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಇತ್ತೀಚಿನ ದಿನಗಳಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಅತಿಯಾಗುತಿದ್ದು ಉಪ್ಪಳ ಹಿದಾಯತ್ ನಗರದಲ್ಲಿ ನಡೆಯುತ್ತಿರುವ ಮಸೀದಿಯಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮವೊಂದರ ಬ್ರ‍ಹತಾಕಾರದ ಫ್ಲೆಕ್ಸ್ ಬೋರ್ಡಿಗೆ ಹಾನಿಗೊಳಿಸಿದ ಕಿಡಿಗೇಡಿಗಳು ಇದಕ್ಕೆ ಸಮೀಪದ ಉಪ್ಪಳ ಕೈಕಂಬದಲ್ಲಿ ಸ್ಥಾಪಿಸಲಾಗಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರ‍ಹ್ಮ ಕಲಶೋತ್ಸವ ಮಹೋತ್ಸವದ ಬೃಹತ್ ಫ್ಲೆಕ್ಸ್ ಬೋರ್ಡನ್ನು ಕಿಚ್ಚಿಟ್ಟು ನಾಶಗೈದಿದ್ದಾರೆ.ರವಿವಾರ ರಾತ್ರಿ ಈ ಕೃತ್ಯ ಎಸೆಗಲಾಗಿದೆ.ಕೆಲವು ದಿನಗಳ ಹಿಂದೆ ಕುಂಜತ್ತೂರಿನಲ್ಲಿ ಸ್ಥಾಪಿಸಲಾಗಿದ್ದ ದೇವಸ್ಥಾನವೊಂದರ ಫ್ಲೆಕ್ಸ್ ಬೋರ್ಡ್ ಗೂ ಹಾನಿಗೊಳಿಸಲಾಗಿತ್ತು.ಅದೇ ರೀತಿ ಮಚ್ಚಂಪಾಡಿ ರಸ್ತೆಯಲ್ಲಿ ಮಸೀದಿಯೊಂದರ ನಾಮ ಫಲಕಕ್ಕೂ ಬಣ್ಣ ಹಚ್ಚಿ ಹಾನಿಗೊಳಿಸಲಾಗಿತ್ತು.ಇದೆಲ್ಲಾ ನಡೆಯುವುದು ರಾತ್ರಿ ಸಮಯಗಳಲ್ಲಿಯೇ ಇದೆಲ್ಲಾ ನಡೆಯುತಿದ್ದರೂ ಕಾನೂನು ಪಾಲಕರು ಇದುವರೇಗೂ ಯಾರನ್ನೂ ಸೆರೆಹಿಡಿದಿಲ್ಲ.ಕಾನೂನುಪಾಲಕರ ಉದಾಸೀನತೆಯೇ ಕಿಡಿಗೇಡಿಗಳ ಅಟ್ಟಹಾಸಕ್ಕೆ ಕಾರಣವಾಗುತ್ತಿದೆಂದು ನಾಗರಿಕರಿಂದ ಕೇಳಿ ಬರುತ್ತಿದೆ.ಇನ್ನು ಮುಂದಾದರೂ ಕಾನೂನು ಪಾಲಕರು ರಾತ್ರಿ ಸಮಯಗಳಲ್ಲಿ ಗಸ್ತು ನಡೆಸಿ ಸಮಾಜವನ್ನು ಒಡೆಯಲು ಹುನ್ನಾರ ನಡೆಸುವ ಸಮಾಜ ಘಾತಕ ಶಕ್ತಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

No comments:

Post a Comment