Monday, March 18, 2013

ಯುಪಿಎಸ್ಸಿ ಪರೀಕ್ಷೆ:ಇಂಗ್ಲಿಷ್ ಕಡ್ಡಾಯ ಆದೇಶ ರದ್ದತಿಗೆ ಕೇಂದ್ರದ ಚಿಂತನೆ



 ಮಾರ್ಚ್ -18-2013

ಹೊಸದಿಲ್ಲಿ: ಲೋಕಸೇವಾ ಆಯೋಗವು (ಯುಪಿಎಸ್ಸಿ) ನಡೆಸುವ ಪ್ರತಿಷ್ಠೆಯ ನಾಗರಿಕ ಸೇವಾ ಪರೀಕ್ಷೆಗಳ ಪ್ರಧಾನ ಹಂತದಲ್ಲಿ ಇಂಗ್ಲಿಷ್ ಭಾಷೆಯನ್ನು ಕಡ್ಡಾಯ ಗೊಳಿಸಿರುವುದನ್ನು ರದ್ದುಪಡಿಸುವ ಬಗ್ಗೆ ಸರಕಾರ ಚಿಂತಿಸುತ್ತಿದೆ. ನಾಗರಿಕ ಸೇವಾ ಪರೀಕ್ಷೆಗಳ ಉತ್ತೀರ್ಣತೆಗೆ ಇಂಗ್ಲಿಷ್ ಭಾಷೆಯನ್ನು ಕಡ್ಡಾಯವಾಗಿಸಿದ್ದ ಕೇಂದ್ರ ಸರಕಾರದ ಕ್ರಮಕ್ಕೆ ವಿಪಕ್ಷಗಳು ಹಾಗೂ ಯುಪಿಎಯ ಅಂಗ ಪಕ್ಷಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು.ಈ ಹಿನ್ನೆಲೆಯಲ್ಲಿ ಆಂಗ್ಲ ಭಾಷೆ ಕಡ್ಡಾಯಗೊಳಿಸುವ ಅಧಿಸೂಚನೆ ಪ್ರಕಟಿಸುವುದರಿಂದ ಶುಕ್ರವಾರ ಸರಕಾರ ಹಿಂಜರಿಯಿತು.ಈ ವೊದಲು ಆಂಗ್ಲಭಾಷಾ ಪ್ರಶ್ನೆಪತ್ರಿಕೆ ಅರ್ಹತಾ ಸ್ವರೂಪದ್ದಷ್ಟೇ ಆಗಿದ್ದು, ಅದರ ಅಂಕಗಳನ್ನು ಅಭ್ಯರ್ಥಿಯ ಆಯ್ಕೆಗೆ ಪರಿಗಣಿಸಲಾಗುತ್ತಿರಲಿಲ್ಲ.
ಇಂಗ್ಲಿಷ್ ಭಾಷಾರ್ಹತೆ ಕಡ್ಡಾಯವನ್ನು ರದ್ದುಗೊಳಿಸಿ ಮುಖ್ಯ ಪರೀಕ್ಷೆಗಳಿಗೆ ಹೊಸದಾದ ರೂಪವನ್ನು ಪರಿಚಯಿಸಲು ಸರಕಾರ ನಿರ್ಧರಿಸಿದೆಯೆಂದು ಕೇಂದ್ರ ಸಿಬ್ಬಂದಿ, ಸಾರ್ವಜನಿಕ ದೂರು ಹಾಗೂ ಪಿಂಚಣಿ ಸಚಿವಾಲಯ ತಿಳಿಸಿದೆ.
ಸರಕಾರ ಈ ಸಂಬಂಧ ಯುಪಿಎಸ್ಸಿ ಅಧಿಕಾರಿಗಳ ಸಭೆಯೊಂದನ್ನು ಕರೆಯಲಿದೆ.ಆದಾಗ್ಯೂ, ಅಧಿಸೂಚನೆ ಅಮಾನತಿನಲ್ಲಿಟ್ಟಿರುವುದರಿಂದ ಮೇ ೨೬ರ ನಾಗರಿಕ ಸೇವಾ ಪ್ರಾಥಮಿಕ ಪರೀಕ್ಷೆಗಳಿಗೆ ತೊಂದರೆ ಯಾಗುವುದಿಲ್ಲ ಎನ್ನಲಾಗಿದೆ. 

No comments:

Post a Comment