Tuesday, March 26, 2013

ವಿಕಲಾಂಗ ವ್ಯಕ್ತಿಯಿಂದ ಹಣ ಪಡೆದು ಟಿಕೆಟ್ ನೀಡದೆ ಸತಾಯಿಸಿದ ಕರ್ನಾಟಕ ಸಾರಿಗೆ ಬಸ್ ನಿರ್ವಾಹಕ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕರ್ನಾಟಕದ ಸಾರಿಗೆ ಬಸ್ ನಿರ್ವಾಹಕನೊಬ್ಬ ಹಣ ಪಡೆದು ಟಿಕೆಟ್ ನೀಡದೆ ನೀತಿಕತೆ ಹೇಳಿ ಭೋಧಿಸಿದ ಘಟನೆ ಇಂದು (ಮಂಗಳವಾರ ರಾತ್ರಿ) ಮಂಗಳೂರು ಕಾಸರಗೋಡು ರೂಟಿನಲ್ಲಿ ಚಲಿಸುತ್ತಿರುವ ಬಸ್ ನಲ್ಲಿ ನಡೆದಿದೆ.
ಮಂಗಳೂರು ಡಿಪೋದಿಂದ ರಾತ್ರಿ 7.55ಕ್ಕೆ ಹೊರಟ ಕೆ..19.2785 ಬಸ್ಸಿನಲ್ಲಿ ಮಂಜೇಶ್ವರಕ್ಕೆ ಸಮೀಪದ ಉದ್ಯಾವರ ದಲ್ಲಿ ಇಳಿಯಲು ಉದ್ಯಾವರ ಬಿ.ಎಸ್.ನಗರ ನಿವಾಸಿ ವಿಕಲಾಂಗ ವ್ಯಕ್ತಿಯಾಗಿರುವ ನಾಸರ್ ಕುಟುಂಬವು ಪ್ರಯಾಣ ಬೆಳೆಸಿತ್ತು.ಬಸ್ಸು ಸ್ವಲ್ಪ ಮುಂದೆ ಚಲಿಸುತಿದ್ದಂತೆ ನಿರ್ವಾಹಕ ಬಂದು ಟಿಕೆಟ್ ಹಣ ಕೇಳಿದಾಗ ಪ್ರಯಾಣಿಕ 100 ರೂ ನೀಡಿದ್ದಾನೆಂದು ಹೇಳಲಾಗಿದೆ ಕೂಡಲೇ ನಿರ್ವಾಹಕ ಪ್ರಯಾಣಿಕನ ಕೈಯಲ್ಲಿ 45 ರೂ ಹಿಂತಿರುಗಿಸಿದನೆನ್ನಲಾಗಿದೆ.ಪ್ರಯಾಣಿಕರು ಕೂಡಲೇ ನಿರ್ವಾಹಕನಲ್ಲಿ ಟಿಕೆಟ್ ನ್ನು ಕೇಳಿದಾಗ ಪರ್ವಾಗಿಲ್ಲ ಸ್ವಾಮಿ ನಿಮಗೆ ಡಿಸ್ಕೌಂಟ್ ಮಾಡಿದ್ದೇನೆ. ರಾತ್ರಿಯಲ್ಲಿ ಯಾರು ಚೆಕ್ಕಿಂಗ್ ಗೆ ಬರೊಲ್ಲವೆಂದು ಹೇಳಿದ್ದಾನೆಂದೆನ್ನಲಾಗಿದೆ.ಆವಾಗ ಪ್ರಯಾಣಿಕ  ಬೇಡಾ ಸ್ವಾಮಿ ನಮಗೆ ಟಿಕೆಟ್ ಬೇಕೇ ಬೇಕು ಎಂದು ಹಟ ಹಿಡಿದಾಗ ನಿರ್ವಾಹಕ ರೀತಿ ಪ್ರತಿಕ್ರಿಯಿಸಿ ಸಮುದ್ರದಿಂದ ಒಂದು ಲೋಟ ನೀರು ಕುಡಿದರೆ ಸಮುದ್ರದ ನೀರಿಗೆ ಏನೂ ಕಮ್ಮಿಯಾಗೊಲ್ಲ ಅದೇ ರೀತಿ ನಿಮ್ಮಿಂದ 55 ರೂ ನಾನು ತೆಗೆದರೆ ಸರಕಾರದ ಬೊಕ್ಕಸಕ್ಕೆ ಕಮ್ಮಿಯಾಗೊಲ್ಲ ನೀವು ಕೇರಳದವರು ನಿಮ್ಮ ಸರಕಾರದ ಬೊಕ್ಕಸವನ್ನು ನೀವು ಜಾಗ್ರತೆ ಮಾಡಿದರೆ ಸಾಕು ಕರ್ನಾಟಕದ ಬಗ್ಗೆ ನೀವು ತಲೆಕೆಡಿಸುವುದು ಬೇಡಾ ಎಂಬಿತ್ಯಾದಿ ನೀತಿ ಕತೆಗಳನ್ನು ಬೋಧಿಸಿ ಸರಕಾರ ಹಣವನ್ನು ಗುಳುಂ ಮಾಡಲು ಪ್ರಯತ್ನಿಸಿರುವುದಾಗಿ  ಪ್ರಯಾಣಿಕರಾದ ನಾಸರ್ ದೂರಿದ್ದಾರೆ.ಕೊನೆಗೆ ಪ್ರಯಾಣಿಕರು ಸಂಭಂಧಪಟ್ಟ ಅಧಿಕಾರಿಗಳಿಗೆ ಪೋನ್ ಮಾಡುವುದಾಗಿ ತಿಳಿಸಿದಾಗ ಬೇರೆ ನಿರ್ವಾಹವಿಲ್ಲದೆ ನಿರ್ವಾಹಕ ಟಿಕೆಟ್ ನೀಡಿ ಬಾಕಿ ಹಣ ಪಡೆದಿರುವುದಾಗಿ ನಾಸರ್ ತಿಳಿಸಿದ್ದಾರೆ, ಸಂಭಂಧ ಕರ್ನಾಟಕ ಸಾರಿಗೆ ಸಚಿವ ಸಹಿತ ಎಲ್ಲಾ ಉನ್ನತ ಸಾರಿಗೆ ಅಧಿಕಾರಿಗಳಿಗೆ ದೂರು ರವಾನಿಸುವುದಾಗಿ ನಾಸರ್ ಪತ್ರಿಕೆಗೆ ತಿಳಿಸಿದ್ದಾರೆ.

No comments:

Post a Comment