Thursday, March 21, 2013

ವಸತಿ ಸೌಕರ್ಯಕ್ಕೆ ಆದ್ಯತೆ ನೀಡಿ ಮಂಜೇಶ್ವರ ಬ್ಲಾಕ್ ಪಂ.ವಾರ್ಷಿಕ ಮುಂಗಡ ಪತ್ರ ಮಂಡನೆRahman Udyawar 

 ಮಂಜೇಶ್ವರ:ಸ್ವಂತ ಮನೆಯಿಲ್ಲದವರಿಗಾಗಿ ಮನೆ ನಿರ್ಮಿಸುವ ಮಹತ್ತರವಾದ ಗುರಿಯನ್ನಾಗಿರಿಸಿಕೊಂಡು ಮಂಜೇಶ್ವರ ಬ್ಲಾಕ್ ಪಂಚಾಯತಿನ 2012-13 ನೇ ಸಾಲಿನ ವಾರ್ಷಿಕ ಮುಂಗಡ ಪತ್ರವನ್ನು ಮಂಗಳವಾರ ಮಂಡಿಸಲಾಯಿತು.ಮಂಜೇಶ್ವರ ಬ್ಲಾಕ್ ಪಂಚಾಯತು ಸಭಾಂಗಣದಲ್ಲಿ ಜರುಗಿದ ಬಜೆಟ್ ಅಧಿವೇಶನದಲ್ಲಿ 23ಕೋಟಿ,85 ಲಕ್ಷದ 27 ಸಾವಿರದ 19 ರೂಪಾಯಿ ಆದಾಯ ಹಾಗು 23 ಕೋಟಿ,56 ಲಕ್ಷದ 85 ಸಾವಿರದ 55 ರೂಪಾಯಿ ಖರ್ಚಿನೊಂದಿಗೆ ಒಟ್ಟು 28 ಲಕ್ಷದ 41 ಸಾವಿರದ 364 ರೂಪಾಯಿ ಮಿಗತೆಯಿರುವ ಬಜೆಟನ್ನು ಮಂಜೇಶ್ವರ ಬ್ಲಾಕ್ ಪಂಚಾಯತು ಉಪಾಧ್ಯಕ್ಷರೂ ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷರೂ ಆಗಿರುವ ಹಿರಿಯ ಪತ್ರಕರ್ತ ಹರ್ಷಾದ್ ವರ್ಕಾಡಿಯವರು ಮಂಡಿಸಿದರು.ಬ್ಲಾಕ್ ಪಂಚಾಯತು ಅಧ್ಯಕ್ಷೆ ಶ್ರೀಮತಿ ಮುಮ್ತಾಜ್ ಸಮೀರ ಅಧ್ಯಕ್ಷತೆ ವಹಿಸಿದರು.
2012-13 ನೇ ಸಾಲಿನಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿನಲ್ಲಿ ಕೇಂದ್ರ ಸರಕಾರದ ಮೊತ್ತದಲ್ಲಿ ಒಟ್ಟು 339 ಮನೆಯನ್ನು ನಿರ್ಮಿಸಲು ಒಟ್ಟು 6 ಕೋಟಿ,58 ಲಕ್ಷ ರೂಪಾಯಿ ಮೀಸಲಿರಿಸಲಾಗಿದೆ.ಇದರಲ್ಲಿ ಪರಿಸಿಷ್ಟ ಜಾತಿಗೆ 188 ಮನೆಗಳು ಹಾಗು ಪರಿಶಿಷ್ಟ ವರ್ಗಕ್ಕೆ 15 ಮನೆಗಳು ಒಳಗೊಂಡಿದೆ.ಶುಚಿತ್ವಕ್ಕಾಗಿ ಬ್ಲಾಕ್ ಪಂಚಾಯತು ಹೆಚ್ಚಿನ ಪರಿಗಣನೆ ನೀಡಿದ್ದು ಒಟ್ಟು 17 ಲಕ್ಷ 72 ಸಾವಿರ ರೂ ಮೀಸಲಿರಿಸಲಾಗಿದೆ.ಎಣ್ಮಕಜೆ ಹಾಗು ಮಂಗಲ್ಪಾಡಿ ಗ್ರಾಮ ಪಂಚಾಯತು ಕೇಂದ್ರಗಳಲ್ಲಿ -ಟಾಯ್ಲೆಟ್ ನಿರ್ಮಿಸಲಾಗುತಿದ್ದು ಇನ್ನಿತರ ಪಂಚಾಯತುಗಳಿಗೆ ಇದನ್ನು ವ್ಯಾಪಿಸಲಾಗುವುದು.ನಾಡಿನ ಮೂಲಾಧಾರವಾದ ಕೃಷಿಗೆ ಆದ್ಯತೆಯನ್ನು ನೀಡಲಾಗಿದ್ದು ಇಲ್ಲಿನ ಪ್ರಮುಖ ಕೃಷಿಯಾದ ಅಡಿಕೆ ಕೃಷಿಕರಿಗೆ ಕೃಷಿ ಉಪಕರಣಗಳನ್ನು ದೊರಕಿಸಲು ರಾಜ್ಯ ಸರಕಾರ ಮಂಜೇಶ್ವರ ಬ್ಲಾಕಿಗೆ ಕೃಷಿ ಸೇವಾ ಕೇಂದ್ರವನ್ನು ಮಂಜೂರುಗೊಳಿಸಿದ್ದು ತತ್ಕ್ಷಣವೇ ಇದು ಪ್ರಾರಂಭಗೊಳ್ಳಲಿದೆ.ಕುಡಿಯುವ ನೀರಿಗಾಗಿ ಬ್ಲಾಕ್ ಪಂಚಾಯತು ವಿವಿಧ ಯೋಜನೆಗಳನ್ನು ರೂಪೀಕರಿಸಲಾಗಿದ್ದು 20 ಲಕ್ಷ ರೂ ಮೀಸಲಿಡಲಾಗಿದೆ.ಮೊಟಕುಗೊಂಡಿರುವ ವಿವಿಧ ಯ್ಕುಡಿಯುವ ನೀರು ಯೋಜನೆಗಳನ್ನು ಪುನರುಜ್ಜೀವನಗೊಳಿಸಲು 10 ಲಕ್ಷ ರೂ ಮೀಸಲಿಡಲಾಗಿದೆ.ಮಹಾತ್ಮ ಗಾಂಧೀ ಉದ್ಯೋಗ ಖಾತರಿ ಯೋಜನೆಯಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತು 2012-13 ನೇ ಸಾಲಿನಲ್ಲಿ 6.53 ಕೋಟಿ ರೂ ವ್ಯವಹಿಸಿದ್ದು 2013-14 ನೇ ಸಾಲಿನಲ್ಲಿ 12 ಕೋಟಿ ರೂ ವ್ಯವಹಿಸುವ ಗುರಿಯನ್ನು ಹೊಂದಿದೆ.ಗ್ರಾಮ.ಪಂ ಗಳನ್ನು ಜೊತೆಗೂಡಿಸಿಕೊಂಡು ಸಂಯೋಜಿತ ಪದ್ದತಿಯನ್ನು ರೂಪೀಕರಿಸಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗಾಗಿ 1 ಕೋಟಿ 50 ಲಕ್ಷ 93 ಸಾವಿರದ 562 ರೂ ಬಜೆಟಿನಲ್ಲಿ ಮೀಸಲಿರಿಸಲಾಗಿದೆ.ವೃದ್ದರ ಅಂಗವಿಕಲರ ಕಲ್ಯಾಣಕ್ಕಾಗಿ 15 ಲಕ್ಷ ರೂ ಮೀಸಲಿರಿಸಲಾಗಿದೆ.
ಬಜೆಟ್ ಮಂಡನೆಯಲ್ಲಿ ಬಿಡಿಓ ಮನ್ಸೂರ್ ಸ್ವಾಗತಿಸಿದರು.ಸ್ಥಾಯೀ ಸಮಿತಿ ಅಧ್ಯಕ್ಷರುಗಳು, ಗ್ರಾ. ಪಂ.ಅಧ್ಯಕ್ಷರುಗಳು,ನಿರ್ವಣಾ ಅಧಿಕಾರಿಗಳು,ಹಾಗು ಬ್ಲಾಕ್ ಪಂಚಾಯತು ಸಿಬ್ಬಮ್ದಿಗಳು ಉಪಸ್ಥರಿದ್ದರು. (ಚಿತ್ರ ಜತೆಗಿದೆ)

No comments:

Post a Comment