Thursday, March 28, 2013

ಹೊಸಂಗಡಿ:ವ್ಯಾಪಕ ಅನಧಿಕೃತ ಮದ್ಯ ಮಾರಾಟ:ಅಬಕಾರಿದಳ ದಾಳಿ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮಂಜೇಶ್ವರದ ಹೃದಯ ಬಾಗವಾದ ಹೊಸಂಗಡಿ ಜಂಕ್ಷನ್ ನಲ್ಲಿ  ಅನಧಿಕೃತ ಮದ್ಯ ಮಾರಾಟ ದಂಧೆ ವ್ಯಾಪಕವಾಗುತ್ತಿದೆಂಬ ಆರೋಪ ಉಂಟಾದ ಹಿನ್ನೆಲೆಯಲ್ಲಿ ನಿನ್ನೆ ಅಬಕಾರಿ ದಳ ಈ ಸ್ಥಳಕ್ಕೆ ದಾಳಿ ನಡೆಸಿದೆ.ಅಬಕಾರಿ ದಳ ದಾಳಿ ನಡೆಸುವ ಮೊದಲೇ ವಿವರ ಅರಿತ ಅನಧಿಕೃತ ಮದ್ಯ ಮಾರಾಟಗಾರರು ಅದಕ್ಕೆ ಬೇಕಾದ ಬಂದೋಬಸ್ತ್ ಮಾಡಿರುವುದಾಗಿ ತಿಳಿದು ಬಂದಿದೆ.ಇದರಿಂದಾಗಿ ಅಬಕಾರಿ ದಳದವರೀಗೆ ಈ ಸ್ಥಳದಲ್ಲಿ ಎಲ್ಲಿಂದಲೂ ಅನಧಿಕೃತ ಮದ್ಯ ವನ್ನು ಪತ್ತೆ ಮಾಡಲು ಸಾದ್ಯವಾಗಿಲ್ಲ.
ಹೊಸಂಗಡಿಯ ರೈಲ್ವೇ ಗೇಟಿನ ಸಮೀಪ ೨ ಗೂಡಂಗಡಿಗಳಿದ್ದು ಅದರಲ್ಲಿ ಒಂದು ಗೂಡಂಗಡಿ ಅನಧಿಕೃತ ಮದ್ಯವನ್ನು ದಾಸ್ತಾನು ಮಾಡಲಿಕ್ಕಾಗಿ ಮಾತ್ರ ಉಪಯೋಗಿಸಲಾಗುತ್ತಿದೆಂಬ ನಾಗರಿಕರ ಆರೋಪವಿದೆ.ಕೇವಲ ನಾಲ್ಕು ತಿಂಗಳ ಮೊದಲು ಆರಂಭವಾದ ಈ ದಂಧೆ ಮೊದಲು ಮಂಜೇಶ್ವರ ಫಾರೂಕ್ ಮಿಲ್ಲ್ ನ ಸಮೀಪವಿರುವ ಪೊದೆಗಳಲ್ಲಿ ಅಡಗಿಸಿಡಲಾಗುತಿತ್ತು.ಅಲ್ಲಿಂದ ಬೈಕ್ ರಿಕ್ಷಾಗಳಲ್ಲಿ ಬೇಡಿಕೆಗನುಸಾರವಾಗಿ ಹೊರಗಡೆ ತಂದು ಮಾರಾಟಮಾಡಲಾಗುತಿತ್ತು.ಒಮ್ಮೆ ಇಲ್ಲಿಗೆ ಅಬಕಾರಿ ದಳ ದವರು ಧಾಳಿ ನಡೆಸಿದಾಗ ಕೆಲವು ಮದ್ಯದ ಬಾಟ್ಲಿಗಳು ಸಿಕ್ಕಿತೇ ಹೊರತು ಇದರ ವ್ಯಾಪಾರಿಗಳನ್ನು ಪತ್ತೆ ಮಾಡಲು ಸಾದ್ಯವಾಗಿಲ್ಲ. ಇದೀಗ ಹೊಸಂಗಡಿ ಜಂಕ್ಷನ್ ನಲ್ಲೇ ಅನಧಿಕೃತ ಮದ್ಯಮಾರಟದ ದಂಧೆ ವ್ಯಾಪಕವಾಗುತ್ತಿದೆ.ಈ ದಂಧೆಯ ಮೂಲ ಸೂತ್ರಧಾರಿಗಳು ಸ್ಥಳೀಯರೇ ಆಗಿದ್ದು ಇವರ ಮಾಹಿತಿ ಅಬಕಾರಿ ದಳದವರೀಗೆ ಸಿಕ್ಕಿರುವುದಾಗಿ ತಿಳಿದು ಬಂದಿದೆ.

No comments:

Post a Comment