Wednesday, March 20, 2013

ಬಿಹಾರ ಅಭಿವೃದ್ಧಿ: ಬ್ರಿಟಿಶ್ ರಾಜತಾಂತ್ರಿಕನ ಮೆಚ್ಚುಗೆ ಮಾರ್ಚ್ -21-2013

ಪಾಟ್ನಾ: ಬಿಹಾರದ ಅಭಿವೃದ್ಧಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್‌ರ ನಾಯಕತ್ವದಲ್ಲಿ ರಾಜ್ಯ ಸಾಧಿಸಿರುವ ಸರ್ವರನ್ನೊಳಗೊಂಡ ಬೆಳವಣಿಗೆ ಬಗ್ಗೆ ಬ್ರಿಟಿಶ್ ರಾಜತಾಂತ್ರಿಕರೊಬ್ಬರು ಇಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮೂಲಸೌಕರ್ಯ, ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಗ್ರೇಟ್ ಬ್ರಿಟನ್‌ನ ಹಲವು ಕಂಪೆನಿಗಳು ಉತ್ಸುಕವಾಗಿವೆ ಎಂದು ಅವರು ಹೇಳಿದ್ದಾರೆ.
‘‘ರಾಜ್ಯದಲ್ಲಿನ ಕಾನೂನು ಮತ್ತು ವ್ಯವಸ್ಥೆ ಪರಿಸ್ಥಿತಿಯ ಸುಧಾರಣೆಯ ಯಶಸ್ಸು ಮುಖ್ಯಮಂತ್ರಿಗೆ ಹೋಗುತ್ತದೆ ಹಾಗೂ ಬಿಹಾರ ಕುರಿತ ಬದಲಾದ ಕಲ್ಪನೆಯಿಂದಾಗಿ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ ಕ್ಷೇತ್ರಗಳಿಗೆ ಬಂಡವಾಳ ಹರಿದುಬರುತ್ತಿದೆ. ಇದು ಸರ್ವರನ್ನೊಳಗೊಂಡ ಅಭಿವೃದ್ಧಿಗೆ ಕಾರಣವಾಗಿದೆ’’ ಎಂದು ಪೂರ್ವ ಭಾರತಕ್ಕಾಗಿನ ಬ್ರಿಟಿಶ್ ಉಪ ಹೈಕಮಿಶನರ್ ಸಂಜಯ್ ವಾದ್ವಾನಿ ಇಲ್ಲಿ ನಡೆದ ವಿಚಾರಸಂಕಿರಣವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.
‘‘ನಿತೀಶ್ ಕುಮಾರ್‌ರ ಮುನ್ನೋಟವನ್ನು ಅಭಿನಂದಿಸಬೇಕಾಗಿದೆ. ಅದರಿಂದಾಗಿಯೇ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಬಿಹಾರ ಯಶಸ್ಸು ಕಾಣಲು ಸಾಧ್ಯವಾಯಿತು. ಈ ಬಗ್ಗೆ ಭಾರತ ಮತ್ತು ಹೊರದೇಶಗಳಲ್ಲಿ ಜನರು ಮೆಚ್ಚುಗೆಯಿಂದ ಮಾತನಾಡುವಂತಾಗಿದೆ’’ ಎಂದರು.
‘‘ಬಿಹಾರ ಭಾರತದ ಅತ್ಯಂತ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿ ಹೊರಹೊಮ್ಮಿರುವುದಲ್ಲದೆ, ಭಾರತದ ಅಭಿವೃದ್ಧಿಗೆ ದೇಣಿಗೆ ನೀಡುತ್ತಿದೆ’’ ಎಂದು ವಾದ್ವಾನಿ ಹೇಳಿದರು.
ತಮ್ಮ ಪೂರ್ವಿಕರ ಭೂಮಿಯ ಯಶೋಗಾಥೆಯನ್ನು ಕೇಳಿ ಬಿಹಾರದಿಂದ ವಲಸೆ ಹೋಗಿ ಯಶಸ್ಸು ಕಂಡ ಹಲವರು ತಾಯ್ನಡಿಗೆ ಹಿಂದಿರುಗಿದ್ದಾರೆ ಎಂದರು
ಕೃಪೆ ವಾ.ಭಾರತಿ 

No comments:

Post a Comment