Friday, March 22, 2013

ತೂಮಿನಾಡಿನಲ್ಲಿ ಮತ್ತೆ ತಲೆ ಎತ್ತಿದ ಇಣುಕು ಕಳ್ಳರು



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕೆಲಕಾಲ ನಿಶ್ಯಭ್ದರಾಗಿದ್ದ ಇಣುಕು ಕಳ್ಳರು ಇದೀಗ ಪುನಃ ತಮ್ಮ ಪೌರುಷವನ್ನು ತೋರಿಸಲು ತೂಮಿನಾಡಿನ ಲಕ್ಷಂ ವೀಡು ಕಾಲನಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ..
ರಾತ್ರಿ ಸಮಯಗಳಲ್ಲಿ ಕೇವಲ ಹೆಂಗಸರು ಮಾತ್ರ ಇರುವ ಮನೆಯನ್ನು ಗುರುತಿಸಿ ಅವರ ಬಾಗಿಲಿಗೆ ಬಡಿದು ಅಸಭ್ಯವಾದ ಸೆಕ್ಸ್ ಮಾತುಗಳಿಂದ ನಿಂದಿಸುವುದು,ಸ್ತ್ರೀಯರು ಮಲಗಿರುವ ಕೋಣೆಗಳನ್ನು ಇಣುಕಿ ನೋಡುವುದು,ಕಿಟಿಕಿಯಿಂದ ಕೈಯನ್ನು ತೂರಿಸುವುದು,ಬಾತ್ ರೂಂಗಳಲ್ಲಿ ಸ್ನಾನ ಮಾಡುತ್ತಿರುವ ಹೆಂಗಸರನ್ನು ಇಣುಕಿ ನೋಡುವುದು ಮೊದಲಾದ ರೀತಿಯ ಕೃತಕ ಕಾಮದ ಪ್ರದರ್ಶನದೊಂದಿಗೆ ಇದೀಗ ತೂಮಿನಾಡು ಲಕ್ಷಂ ವೀಡು ಕಾಲನಿಯ ಬಡವರ ಮನೆಗಳನ್ನು ಕೇಂದ್ರೀಕರಿಸಿ ತಮ್ಮ ಪ್ರದರ್ಶನವನ್ನು ನೀಡಲು ಇಣುಕು ಕಳ್ಳರು ತೊಡಗಿಸಿಕೊಂಡಿದ್ದಾರೆ.
ಮುಖಕ್ಕೆ ಮುಖವಾಡವನ್ನು ಧರಿಸಿದ ಇವರು ಸತತವಾಗಿ ಕಳೆದ ಒಂದು ವಾರದಿಂದ ಒಂದು ದಿನವೂ ತಪ್ಪಿಸದೆ ಇದೇ ಕಾಲನಿಯಲ್ಲಿ ಮನೆಮಂದಿಯನ್ನು ಉಪದ್ರಿಸುತಿದ್ದಾರೆ.ಇಲ್ಲಿಯ ಕೆಲವೊಂದು ಜನರಿಗೆ ಇಣುಕು ಕಳ್ಳರ ಬಗ್ಗೆ ಸುಳಿವು ಸಿಕ್ಕಿರುವುದಾಗಿ ತಿಳಿದು ಬಂದಿದೆ.ರಾತ್ರಿ ೧೨ ಗಂಟೆಯ ನಂತ್ರ ಇಣುಕು ಕಳ್ಳರ ಕಸರತ್ತು ಆರಂಭವಾಗುವುದಾಗಿ ಸ್ಥಳೀಯರೊಬ್ಬರಿಂದ ತಿಳಿದು ಬಂದಿದೆ. ಮನೆಯಲ್ಲಿ ಏಕಾಂಗಿಯಾಗಿದ್ದ  ಹೆಂಗಸಿಗೆ ಚಾಕು ತೋರಿಸಿ ಬೆದರಿಸಿದ ಘಟನೆಯೂ ಇಲ್ಲಿ ನಡೆದಿದೆ.ರಾತ್ರಿ ವೇಳೆಯಲ್ಲಿ   ಕೆಲವೊಂದು ವ್ಯಕ್ತಿಗಳು ಗಾಂಜಾ ರೀತಿಯ ಮಾದಕ ದ್ರವ್ಯಗಳನ್ನು ಸೇವಿಸಿ ಇಂತಹ ಕೃತ್ಯಗಳನ್ನು ನಡೆಸುತ್ತಿರುವುದಗಿ ಕೂಡಾ ನಾಗರಿಕರ ಆರೋಪವಿದೆ.ಇಣುಕು ಕಳ್ಳರ ಉಪಟಳದಿಂದಾಗಿ ತೂಮಿನಾಡು ಲಕ್ಷಂ ವೀಡು ಕಾಲನಿಯ ಜನರೀಗೆ ಇದೀಗ ಮನಶಾಂತಿ ಇಲ್ಲದಂತಾಗಿದ್ದು ಪೊಲೀಸರು ಇತ್ತ ಕಡೆ ಗಮನ ಹರಿಸಿ  ಸೂಕ್ತ ಕ್ರಮ ಕೈಗೊಳ್ಳಲು ನಾಗರಿಕರು ಆಗ್ರಹಿಸಿದ್ದಾರೆ

No comments:

Post a Comment