Saturday, March 2, 2013

ಕೊಳವೆ ಬಾವಿಗೆ ವಿರೋಧ:ಸ್ಥಳದಲ್ಲಿ ಸಂಘರ್ಷಾವಸ್ಥೆ




ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ: ಮಂಜೇಶ್ವರ ಗ್ರಾ.ಪಂ. ವತಿಯಿಂದ ಕೊಳವೆ ಬಾವಿ ತೋಡಲು ಬಂದ ಕಾರ್ಮಿಕರನ್ನು ತಡೆಗಟ್ಟಿ ಸ್ಥಳದಲ್ಲಿ  ಎರಡು ಗುಂಪಿನ ನಡುವೆ ಸಂಘರ್ಷಾವಸ್ಥೆ ಉಂಟಾದ ಘಟನೆ ಇಲ್ಲಿಗೆ ಸಮೀಪದ ಉದ್ಯಾವರ ಶ್ಮಶಾನದ ಬಳಿಯಲ್ಲಿ ನಡೆದಿದೆ.
ಇಂದು ಮದ್ಯಾಹ್ನ  ಶ್ಮಶಾನದ ಬಳಿ ಇರುವ ಪಂಚಾಯತ್ ಸ್ಥಳದಲ್ಲಿ ಕೊಳವೆ ಬಾವಿ ತೋಡಲು ಯಂತ್ರದ ಜತೆಯಾಗಿ ತಲುಪಿದ ಕಾರ್ಮಿಕರನ್ನು ಸ್ಥಳಕ್ಕೆ ತಲುಪಿದ ಕೆಲವೊಂದು ವ್ಯಕ್ತಿಗಳು ಕೆಲಸಕ್ಕೆ ವಿರೋಧ ವ್ಯಕ್ತಪಡಿಸಿ ಇದು ದೇವಸ್ಥಾನಕ್ಕೆ ಸಂಭಂಧಪಟ್ಟ ಸ್ಥಳವೆಂದು ತರ್ಕಕ್ಕೆ ನಿಂತಾಗ ಅದೇ ಸ್ಥಳದ ನಾಗರಿಕರು ಅಲ್ಲಿಗೆ ತಲುಪಿದಾಗ ಎರಡೂ ಗುಂಪಿನ ನಡುವೆ ವಾಗ್ವಾದ ನಡೆದು ಸಂಘರ್ಷಾವಸ್ಥೆ ಉಂಟಾಗಿದೆ.ಸ್ಥಳಕ್ಕೆ ಪಂಚಾಯತ್ ಅಧಿಕೃತರು ತಲುಪಿ ಕೆಲಸವನ್ನು ಸ್ಥಗಿತಗೊಳಿಸಿದರೂ ನಾಗರಿಕರು ಕೊಳವೆ ಬಾವಿ ಅಗೆಯುವ ಯಂತ್ರವನ್ನು ತೆಗೆಯಲು ಬಿಡಲಿಲ್ಲ.ಈಗ ಸದ್ಯಕ್ಕೆ ಕೆಲಸವನ್ನು ಮುಂದುವರಿಸದೆ ಸ್ಥಳವನ್ನು ಅಳತೆ ಮಾಡಿ ನಂತ್ರ ಕೆಲಸ ಮುಂದುವರಿಸುವುದಾಗಿ ಪಂಚಾಯತ್ ಅಧಿಕೃತರು ತಿಳಿಸಿದ್ದಾರೆ ಪ್ರದೇಶದಲ್ಲಿ ನೀರಿನ ಸಮಸ್ಯೆ ತಾರಕ್ಕೇರಿದ್ದು ನಾಗರಿಕರು ಕುಡಿಯುವ ನೀರಿಗಾಗಿ ಹಾತೊರೆಯುತ್ತಿರುವಾಗ ಕ್ಸುಲ್ಲಕ ಕಾರಣಕ್ಕಾಗಿ ಕೊಳವೆ ಬಾವಿಗೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿಗಳ ವಿರುದ್ದ ಸ್ಥಳೀಯ ನಾಗರಿಕರಿಂದ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದೆ.

No comments:

Post a Comment