Saturday, March 30, 2013

ಜಾರಿ ಬಿದ್ದ ‘ಜಾಣ’ ರಘುಪತಿ ಭಟ್


ಜಾರಿ ಬಿದ್ದ ‘ಜಾಣ’ ರಘುಪತಿ ಭಟ್


 ಮಾರ್ಚ್ -30-2013

ಉಡುಪಿಯಲ್ಲಿ ಅಭ್ಯರ್ಥಿಗಾಗಿ ಮುಗಿಯದ ಹುಡುಕಾಟ
ಉಡುಪಿ: 2008ರಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಆಡಳಿತಕ್ಕೇರಿದ ಬಿಜೆಪಿ ಆಡಳಿತದ ಐದು ವರ್ಷ, ಉಡುಪಿಯ ಮಟ್ಟಿಗೆ ಆರಂಭಗೊಂಡು ಮುಕ್ತಾಯಗೊಳ್ಳು ವುದು ಶಾಸಕ ಕೆ.ರಘುಪತಿ ಭಟ್ ಅವರಿಂದಲೇ.
ಅಂದು ಬಿಜೆಪಿ ರಾಜ್ಯದಲ್ಲಿ ಅತೀ ದೊಡ್ಡ ಪಕ್ಷವಾಗಿ ಆಡಳಿತದ ಚುಕ್ಕಾಣಿ ಹಿಡಿದ ತಿಂಗಳೊ ಪ್ಪತ್ತಿನಲ್ಲೇ ಶಾಸಕರಾಗಿ 2ನೆ ಬಾರಿ ಆಯ್ಕೆ ಯಾದ ಕೆ. ರಘುಪತಿ ಭಟ್‌ರ ಪತ್ನಿ ಜೂ.10 ರಂದು ನಿಗೂಢವಾಗಿ ನಾಪತ್ತೆಯಾಗಿದ್ದರು. ಹಾಗೂ ಅಷ್ಟೇ ನಿಗೂಢವಾಗಿ ಜೂ.15ರಂದು ಹೊಸ ದಿಲ್ಲಿಯ ದ್ವಾರಕಾನಗರದ ಶಮಾ ಅಪಾರ್ಟ್ ಮೆಂಟಿನ ಫ್ಲಾಟ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ನಡುವಿನ ಅವಧಿಯಲ್ಲಿ ಈ ಪ್ರಕರಣ ರೋಚಕ ಸಿನಿಮಾ ವೊಂದಕ್ಕೆ ಚಿತ್ರಕತೆ ಯಾಗುವಷ್ಟು ತಿರುವುಗಳನ್ನು ಹೊಂದಿತ್ತು.
 ಇಡೀ ಪ್ರಕರಣದಲ್ಲಿ ರಘುಪತಿ ಭಟ್ ಅವರ ಪಾತ್ರ ಸಂಶಯಾಸ್ಪದವಾಗಿತ್ತು. ಜನಸಾಮಾನ್ಯರ ದೃಷ್ಟಿಯಲ್ಲಿ ಅವರು ಈ ಪ್ರಕರಣದಲ್ಲಿ ನಿರಪರಾಧಿ ಯಾಗಿ ಪರಿಗಣಿಸಲ್ಪಟ್ಟೇ ಇಲ್ಲ. ತನ್ನದೇ ಪಕ್ಷದ ಸರಕಾರ ರಾಜ್ಯದಲ್ಲಿದ್ದ ಹಿನ್ನೆಲೆಯಲ್ಲಿ ಪೊಲೀಸ್ ದಾಖಲೆಗಳಲ್ಲಿ ಅವರ ಮೇಲೆ ಯಾವುದೇ ಆರೋಪಗಳಿಲ್ಲ ಅಷ್ಟೇ. ಆದರೆ ನಾಳೆ ಇನ್ನೊಂದು ಸರಕಾರ ಬಂದು ಈ ಕೇಸನ್ನು ಮರು ತನಿಖೆಗೆ ಒಳಪಡಿಸಿದರೆ, ಆಗ ಇಡೀ ಪ್ರಕರಣ ಬೇರೆಯೇ ತಿರುವನ್ನು ಪಡೆದುಕೊಳ್ಳಲು ಸಾಧ್ಯ.
 2008ರ ವಿಧಾನಸಭಾ ಚುನಾವಣೆಗೆ ಮೊದಲೇ ರಘುಪತಿ ಭಟ್ ಹಾಗೂ ಪದ್ಮಪ್ರಿಯಾರ ನಡುವಿನ ಸಂಬಂಧ ಬಿರುಕು ಬಿಟ್ಟಿದ್ದು ಬಹಿರಂಗವಾಗಿತ್ತು. ಇದು ಭಟ್ ಅವರ ಮರು ಆಯ್ಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಮನಗಂಡ ದಿ.ಡಾ.ವಿ.ಎಸ್. ಆಚಾರ್ಯ ಹಾಗೂ ಸಂಘ ಪರಿವಾರದ ಹಿರಿಯರು ಇಬ್ಬರ ನಡುವೆ ಮಾತುಕತೆ ನಡೆಸಿ ಸಂಬಂಧಕ್ಕೆ ತಾತ್ಕಾಲಿಕವಾಗಿ ತೇಪೆ ಹಾಕಿದ್ದರು. ಅಲ್ಲದೇ ಪದ್ಮಪ್ರಿಯಾ ಪತಿಯ ಪರವಾಗಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿರುವುದಕ್ಕೆ ವಿಶೇಷ ಪ್ರಚಾರ ಸಿಗುವಂತೆ ನೋಡಿಕೊಂಡಿದ್ದರು.
ಇಷ್ಟಾದರೂ ತಾತ್ಕಾಲಿಕ ತೇಪೆ ಮತ್ತೆ ಹರಿ ಯಲು ಹೆಚ್ಚು ಕಾಲ ಬೇಕಾಗಿರಲಿಲ್ಲ. ಜೂ.10 ರಂದು ಮುಲ್ಕಿಯ ತಾಯಿ ಮನೆಗೆಂದು ಹೋಗಿದ್ದ ಪದ್ಮಪ್ರಿಯಾರ ಕಾರು ಮರುದಿನ ಕುಂಜಾರುಗಿರಿ ಯಲ್ಲಿ ಅನಾಥವಾಗಿ ಪತ್ತೆಯಾದ ಬಳಿಕ ಇಡೀ ಘಟನೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಯಿತು. ಆಗ ಗೃಹ ಸಚಿವ ರಾಗಿದ್ದ ಡಾ.ಆಚಾರ್ಯ ಮೊದಲು ಪದ್ಮಪ್ರಿಯಾ ಜೀವಂತವಾಗಿ ಬರುತ್ತಾರೆ ಎಂದು ಇಡೀ ರಾಜ್ಯಕ್ಕೆ ಭರವಸೆ ನೀಡಿ, ಬಳಿಕ ಹೆಣವಾಗಿ ಪತ್ತೆಯಾದ ಈ ಹೆಣ್ಣು ಮಗಳ ಸಾವಿಗೆ ನ್ಯಾಯಕೊಡಿಸಲು ಪ್ರಾಮಾಣಿಕ ಪ್ರಯತ್ನವನ್ನೇ ನಡೆಸಲಿಲ್ಲ ಎಂಬುದು ರಾಜ್ಯದ ಜನರ ಅನಿಸಿಕೆಯಾಗಿತ್ತು.
ಈ ಘಟನೆ ಜನಮಾನಸದಿಂದ ಮಾಸುವ ಮೊದಲೇ ರಘುಪತಿ ಭಟ್ ಮತ್ತೊಮ್ಮೆ ಸುದ್ದಿ ಯಾಗಿದ್ದು, ಮಲ್ಪೆ ಬಳಿಯ ಸೈಂಟ್ ಮೇರಿಸ್ ದ್ವೀಪದಲ್ಲಿ ವಿದೇಶಿಗರ ಮೋಜು ಮಸ್ತಿಯ ರೇವ್ ಪಾರ್ಟಿ ನಡೆಸುವ ಮೂಲಕ. ಕಳೆದ ವರ್ಷದ ಫೆ.3ರಿಂದ ಮೂರು ದಿನಗಳ ಕಾಲ ನಡೆದ ಈ ವಿದೇಶಿಗರ ಖುಲ್ಲಂ ಖುಲ್ಲಾ ನಂಗಾನಾಚ್‌ನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಪ್ರತಿಷ್ಠೆ ಮಸುಕಾಯಿತು. ಪಕ್ಷ, ಸಂಘ ಪರಿವಾರ ಸದಾ ಬಡಬಡಿಸುವ ಭಾರತೀಯತೆ, ಸಂಸ್ಕೃತಿ, ದೇಶಾಭಿಮಾನವೆಂಬ ಶಬ್ದಗಳೆಲ್ಲವೂ ಲೊಳಲೊಟ್ಟೆ ಎಂಬುದನ್ನು ಪಕ್ಷದ ಆಶೀರ್ವಾ ದದಲ್ಲಿ ನಡೆದ ಈ ಉತ್ಸವ ಸಾಬೀತು ಪಡಿಸಿತು.
ಈಗ ಇನ್ನೇನು ಸರಕಾರದ ಅಧಿಕಾರಾವಧಿ ಮುಗಿದು ಮತ್ತೊಂದು ಚುನಾವಣೆಯನ್ನು ಎದುರಿಸಲು ಎಲ್ಲರೂ ಸಿದ್ಧತೆ ನಡೆಸಿರುವಾಗ ಹೊರಬಿದ್ದಿರುವ ರಘುಪತಿ ಭಟ್ ಅವರದೆನ್ನಲಾದ ನೀಲಿಚಿತ್ರದ ಸಿಡಿ ಅವರ ರಾಜಕೀಯ ಬದುಕಿನ ಬಾಗಿಲನ್ನು ಶಾಶ್ವತವಾಗಿ ಮುಚ್ಚಿಸಿದೆ ಎನ್ನಬಹುದು. ಭಾರತದಲ್ಲಿ ‘ನೀಲಿ ಚಿತ್ರದ ಹಗರಣ’, ‘ಲೈಂಗಿನ ಹಗರಣ’ಗಳಲ್ಲಿ ಸಿಲುಕಿದ ಅಧಿಕಾರಸ್ಥ ರಾಜಕಾರಣಿ ಮತ್ತೆಂದೂ ರಾಜಕೀಯ ಜೀವನದಲ್ಲಿ ಚಿಗುರಿದ ಉದಾಹರ ಣೆಗಳೇ ಇಲ್ಲ (ರೇಣುಕಾಚಾರ್ಯ, ಹಾಲಪ್ಪರಂಥ ವರನ್ನು ಹೊರತು ಪಡಿಸಿ) ಎನ್ನಬಹುದು.
ಅಭ್ಯರ್ಥಿಗೆ ಹುಡುಕಾಟ:  
ಕೇವಲ ಎರಡು ದಿನಗಳ ಹಿಂದಿನವರೆಗೂ ಉಡುಪಿಗೆ ಈ ಬಾರಿ ತಾನೇ ಅಭ್ಯರ್ಥಿ ಎಂದು ಘೋಷಿಸಿಕೊಂಡು ಕ್ಷೇತ್ರದಾದ್ಯಂತ ರ್ಯಾಲಿ, ಸಮಾವೇಶಗಳನ್ನು ನಡೆಸಿ ಚುನಾವಣಾ ಸಿದ್ಧತೆ ಮಾಡಿಕೊಂಡಿದ್ದ ರಘುಪತಿ ಭಟ್, ಕಳೆದ ರವಿವಾರ ಬ್ರಹ್ಮಾವರದಲ್ಲಿ ಲಕ್ಷಾಂತರ ರೂ.ಖರ್ಚು ಮಾಡಿ ಬೃಹತ್ ರ್ಯಾಲಿ ಹಾಗೂ ಸಮಾವೇಶ ನಡೆಸಿದ್ದರು. ಇದೀಗ ಸಿಡಿ ಹಗರಣದಲ್ಲಿ ಸಿಲುಕಿದ ಬಳಿಕ ಅನಿವಾರ್ಯವಾಗಿ ತಾನು ಕೌಟುಂಬಿಕ ಹಾಗೂ ಇತರ ಕಾರಣಗಳಿಂದ ಸ್ಪರ್ಧಾಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಪ್ರಕಟಿಸಿದ್ದಾರೆ. ಈಗ ಭಟ್ಟರ ಸ್ಥಾನದಲ್ಲಿ ಇನ್ನೊಬ್ಬ ಅಭ್ಯರ್ಥಿಯನ್ನು ಹುಡುಕುವ ಇಕ್ಕಟ್ಟಿನ ಸ್ಥಿತಿ ಪಕ್ಷಕ್ಕೆದುರಾಗಿದೆ. ಹಿಂದಾಗಿದ್ದರೆ ಸಾಕಷ್ಟು ಮಂದಿ ಸ್ಥಾನಾಕಾಂಕ್ಷಿಗಳು ಇದ್ದರೆ ಈಗ ಯಾರೂ ಸ್ಪರ್ಧೆಗೆ ಮುಂದೆ ಬರುತ್ತಿಲ್ಲ ಎಂದು ಪಕ್ಷದ ಒಳಗಿನ ಮೂಲಗಳು ತಿಳಿಸಿವೆ.
ಏನಿದ್ದರೂ, ಪಕ್ಷದ ಹೈಕಮಾಂಡ್ ಚರ್ಚೆಯ ಮೂಲಕ ಸೂಕ್ತ ಅಭ್ಯರ್ಥಿಯೊಬ್ಬರನ್ನು ಆಯ್ಕೆ ಮಾಡಿ, ಮನ ಒಲಿಸಿ ಪ್ರಕಟಿಸುವ ಸನ್ನಿವೇಶ ಎದುರಾಗಿದೆ. ದಿ.ಡಾ.ವಿ.ಎಸ್.ಆಚಾರ್ಯರ ಪತ್ನಿ ಶಾಂತಾ ವಿ.ಆಚಾರ್ಯರ ಹೆಸರನ್ನು ಈ ದಿಶೆ ಯಲ್ಲಿ ತೇಲಿ ಬಿಟ್ಟಿದ್ದರೂ ರಾಜಕೀಯದಲ್ಲಿ ಎಂದೂ ಆಸಕ್ತಿಯನ್ನು ತೋರದ ಅವರು ಇದಕ್ಕೆ ಒಪ್ಪಿಕೊಳ್ಳುವ ಸಾಧ್ಯತೆ ಇರಲಿಲ್ಲ. ಈಗಂತೂ ಅದು ಕನಸಿನ ಮಾತು.
ಇನ್ನು ಬಿಜೆಪಿ ಜಿಲ್ಲಾಧ್ಯಕ್ಷ ಉದಯಕುಮಾರ್ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ, ಅಶೋಕ ಕುಮಾರ್ ಕೊಡ್ಗಿ ಅವರ ಹೆಸರು ಈಗ ಸ್ಥಳೀಯ ವಾಗಿ ಕೇಳಿಬರುತ್ತಿದ್ದರೂ, ಇನ್ನೇನಿದ್ದರೂ ಅಭ್ಯರ್ಥಿ ಆಯ್ಕೆ ಮೇಲ್ಮಟ್ಟದಲ್ಲಿ ಆಗುವ ಕಾರಣ, ಅಚ್ಚರಿಯ, ಯಾರೂ ಊಹಿಸದ ಮುಖ ವೊಂದು ಇಲ್ಲಿ ಟಿಕೆಟ್ ಪಡೆದರೂ ಆಶ್ಚರ್ಯವಿಲ್ಲ
ಕೃಪೆ:ವಾ.ಭಾರತಿ 

No comments:

Post a Comment