Friday, March 8, 2013

ಅಕ್ಟೋಬರ್‌ನಿಂದ ಉಚಿತ ರಾಷ್ಟ್ರೀಯ ರೋಮಿಂಗ್ ಸಾಧ್ಯತೆ: ಸಿಬಲ್



 ಹೊಸದಿಲ್ಲಿ: ಮೊಬೈಲ್ ಚಂದಾದಾರರಿಗೆ ಈ ವರ್ಷದ ಅಕ್ಟೋಬರ್‌ಗೆ ಮೊದಲು ಧರ್ಮಾರ್ಥ ರಾಷ್ಟ್ರೀಯ ರೋಮಿಂಗ್ ಸೌಲಭ್ಯ ಆರಂಭಿಸಲು ಸರಕಾರ ಪ್ರಯತ್ನ ನಡೆಸುವುದೆಂದು ದೂರ ಸಂಪರ್ಕ ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ. ಈ ಸಂಬಂಧ ಟ್ರಾಯ್ ಸಮಾಲೋಚನಾ ಪತ್ರವೊಂದನ್ನು ಹೊರ ತಂದಿದೆ. ಆದುದರಿಂದ ಟ್ರಾಯ್‌ನ ಶಿಫಾರಸು ಬಂದ ಬಳಿಕ ಅಕ್ಟೋಬರ್‌ಗೆ ವೊದಲು ಫ್ರೀ ರೋಮಿಂಗ್ ಸೌಲಭ್ಯಕ್ಕೆ ಪ್ರಯತ್ನಿಸಲಿದ್ದೇವೆ ಎಂದು ಇಂದಿಲ್ಲಿ ನಡೆದ ರಾಷ್ಟ್ರೀಯ ಅಂತರ್ಜಾಲ ರಿಜಿಸ್ಟ್ರೀಯ ಬಿಡುಗಡೆ ಸಮಾರಂಭದ ನೇಪಥ್ಯದಲ್ಲಿ ಅವರು ಪತ್ರಕರ್ತರೊಡನೆ ಹೇಳಿದರು.ಕಳೆದ ಡಿಸೆಂಬರ್‌ನಲ್ಲಿ ಟ್ರಾಯ್, ರಾಷ್ಟ್ರೀಯ ರೋಮಿಂಗ್ ಸೇವೆಯ ಶುಲ್ಕಕ್ಕೆ ಸಂಬಂಧಿಸಿ ಸಂಬಂಧಿತರಿಂದ ಸಲಹೆ ಕೋರಿ ಸಮಾಲೋಚನಾ ಪೂರ್ವ ಪತ್ರವೊಂದನ್ನು ಬಿಡುಗಡೆಗೊಳಿಸಿತ್ತು.
ವಿಡಿಯೊ ಕರೆ ಹಾಗೂ ಎಸ್‌ಎಂಎಸ್ ದರ, ಕರೆ ದರಗಳು, ಒಳ ಬರುವ ಕರೆಗಳ ಶುಲ್ಕ ವಸೂಲಿ ಇತ್ಯಾದಿ ರಾಷ್ಟ್ರೀಯ ರೋಮಿಂಗ್ ಸೇವೆಗೆ ಸಂಬಂಧಿಸಿ ಅಭಿಪ್ರಾಯಗಳನ್ನು ಯಾಚಿಸಿತ್ತು.ಪ್ರಸ್ತುತ ಇತರ ಜಾಲಗಳಿಗೆ ಮಾಡಿದ ಕರೆಗಳಿಗೆ ದೂರ ಸಂಪರ್ಕ ಸೇವಾದಾರರು ಟರ್ಮಿನೇಶನ್ ಶುಲ್ಕ, ಅಂತಃಸಂಪರ್ಕ ಶುಲ್ಕಗಳನ್ನು ಪಾವತಿಸಬೇಕಿದ್ದು, ಅದನ್ನು ಬಳಕೆದಾರರ ಅಂತಿಮ ಶುಲ್ಕಕ್ಕೆ ಸೇರಿಸಲಾಗುತ್ತವೆ

No comments:

Post a Comment