Tuesday, March 12, 2013

ಉಪ್ಪಳ ರೈಲ್ವೇ ಹಳಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ರೈಲು ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ಉಪ್ಪಳ ರೈಲ್ವೇ ಗೇಟಿನ ಹಳಿಯಲ್ಲಿ ಪತ್ತೆಯಾಗಿದೆ.
ಸುಮಾರು 60 ರಿಂದ 70 ವರ್ಷ ಪ್ರಾಯವಿರುವ ಗಂಡಸಿನ ಮೃತದೇಹವಾಗಿದೆ.ಬಿಳಿಯಾದ ಶರ್ಟ್ ಹಾಗು ಬಿಳಿ ಲುಂಗಿ ತೊಟ್ಟ ಸ್ಥಿತಿಯಲ್ಲಿ  ಪತೆಯಾಗಿದ್ದು ಮೃತದೇಹದ ಕಾಲುಗಳು ಸಂಪೂರ್ಣ ಜಜ್ಜಿ ಹೋಗಿವೆ.ಸ್ಥಳಕ್ಕೆ ಮಂಜೇಶ್ವರ ಪೊಲೀಸರು ತಲುಪಿ ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಪೊಟೋದಲ್ಲಿ ಮೃತ ದೇಹದ ಪತ್ತೆ ಹಚ್ಚಿದವರು  ಮಂಜೇಶ್ವರ ಪೊಲೀಸ್ ಠಾಣೆಯ 04998272640 ನಂಬ್ರಕ್ಕೆ ಕರೆದು ಮಾಹಿತಿ ನೀಡಬೇಕಾಗಿ ಪೊಲೀಸರು ತಿಳಿಸಿದ್ದಾರೆ.

No comments:

Post a Comment