Saturday, March 9, 2013

ಕುಟುಂಬಶ್ರೀ ಕಲಾಜಾಥಾಗೆ ಮೀಂಜದಲ್ಲಿ ಭವ್ಯ ಸ್ವಾಗತಮಂಜೇಶ್ವರ:ಕುಟುಂಬಶ್ರೀ ಕಾಸರಗೋಡು ಜಿಲ್ಲಾ ಮಿಶನ್ ನೇತೃತ್ವದಲ್ಲಿ ಇಂಧನ ಉಳಿತಾಯದ ಕುರಿತು ಜನಜಾಗೃತಿಯನ್ನುಂಟುಮಾಡುವ ಊರ್ಜಶ್ರೀ ಕಲಾ ಜಾಥಾಗೆ ಮೀಂಜ ಪಂಚಾಯತಿನ ಕುಟುಂಬಶ್ರೀ ಸಿಡಿಎಸ್ ವತಿಯಿಂದ ಭವ್ಯ ಸ್ವಾಗತವನ್ನು ನೀಡಲಾಯಿತು.
ಮೀಯಪದವು ಮಾರ್ಕೆಟ್ ಹಾಲ್ ನಲ್ಲಿ ಜರಗಿದ ಸಮಾರಂಭದಲ್ಲಿ ಮೀಂಜ ಗ್ರಾ. ಪಂ.ಅಧ್ಯಕ್ಷೆ ಶ್ರೀಮತಿ ಶಂಷಾದ್ ಅಧ್ಯಕ್ಷತೆ ವಹಿಸಿದರು.ಮಂಜೇಶ್ವರ ಬ್ಲಾಕ್ ಪಂ.ಉಪಾಧ್ಯಕ್ಷ ಹರ್ಷಾದ್ ವರ್ಕಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

No comments:

Post a Comment