Wednesday, March 20, 2013

ವಿಧಾನಸೌಧದಲ್ಲಿ ಗನ್‌ಮ್ಯಾನ್-ಪೊಲೀಸರ ನಡುವೆ ಮುಸುಕಿನ ಗುದ್ದಾಟ



ಮಾರ್ಚ್ -21-2013

ಬೆಂಗಳೂರು: ಹೆಸರಿಗೆ ಮಾತ್ರ ಗನ್ ಮ್ಯಾನ್, ಆದರೆ ಅವರ ಕೈಯಲ್ಲಿ ಗನ್ ಇಲ್ಲ. ಇದು ಎಲ್ಲೆಡೆ ಅಲ್ಲ. ವಿಧಾನಸೌಧದಲ್ಲಿ ಮಾತ್ರ. ಗನ್ ಅಥವಾ ಯಾವುದೇ ಶಸ್ತ್ರಾಸ್ತ್ರ ಹಿಡಿದು ವಿಧಾನಸೌಧ ಪ್ರವೇಶಿಸುವಂತಿಲ್ಲ. ಹಾಗೆಂದು ಆದೇಶ ಹೊರಡಿಸಿದ್ದಾರೆ ವಿಧಾನಸೌಧ ಭದ್ರತಾ ವಿಭಾಗದ ಉಪ ಪೊಲೀಸ್ ಆಯುಕ್ತ ಲಕ್ಷ್ಮಣ್ ಸಿಂಗ್. ಶಸ್ತ್ರಾಸ್ತ್ರ ಹೊಂದಿರುವ ಬೆಂಗಾವಲು ಸಿಬ್ಬಂದಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಹಾಗೊಂದು ವೇಳೆ ಗನ್‌ಮ್ಯಾನ್‌ಗಳು ವಿಧಾನಸೌಧಕ್ಕೆ ಆಗಮಿಸಬೇಕಾದರೆ ಪಿಸೂತಿಲನ್ನು ಹೊರಗಿಟ್ಟು ಒಳಗೆ ಬರಬೇಕು. ಆದೇಶ ಕಡ್ಡಾಯ. ಮಂತ್ರಿಗಳು, ಶಾಸಕರು, ಇತರ ಗಣ್ಯ ವೈಕಿತಿಗಳೂ ಸಹ ಇದನ್ನು ಪಾಲಿಸಲೇಬೇಕು. ಾವುದೇ ವ್ಯಕಿತಿಗಳ ಬೆಂಗಾವಲು ಸಿಬ್ಬಂದಿಗಳು ಶಸ್ತ್ರಾಸ್ತ್ರಗಳೊಂದಿಗೆ ವಿಧಾನಸೌಧವಷ್ಟೇ ಅಲ್ಲ ವಿಕಾಸೌಧಕ್ಕೂ ಪ್ರವೇಶಿಸುವಂತಿಲ್ಲ.
ಇದಕ್ಕೆ ಲಕ್ಷ್ಮಣ್ ಸಿಂಗ್ ನೀಡುವ ಕಾರಣ. ವಿಧಾನಸೌಧ ಸುರಕ್ಷಿತ ತಾಣ. ಒಳಗೆ ಪ್ರವೇಶಿಸಿದರೆ ಭದ್ರ ಕೋಟೆಯೊಳಗೆ ಪ್ರವೇಶಿಸಿದಂತೆ. ಒಮ್ಮೆ ವಿಧಾನಸೌಧಕ್ಕೆ ಬಂದರೆ ಅವರನ್ನು ರಕ್ಷಿಸುವ ಜವಾಬ್ದಾರಿ ಭದ್ರತಾ ಸಿಬ್ಬಂದಿಯದ್ದು ಎನ್ನುತಾತಿರೆ.
ಲಕ್ಷ್ಮಣ್ ಸಿಂಗ್ ಈ ರೀತಿ ಆದೇಶ ಹೊರಡಿಸಿದ ನಂತರ ವಿಧಾನಸೌಧದ ಗೇಟಿನ ಬಳಿ ಪ್ರತಿನಿತ್ಯ ಸಚಿವರು, ಶಾಸಕರ ಗನ್‌ಮ್ಯಾನ್‌ಗಳು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯುತಿತಿರುವುದು ಸರ್ವೆ ಸಾಮಾನ್ಯವಾಗಿದೆ.
ಷ್ಟೇ ಪ್ರಭಾವಿ ಸಚಿವರಾದರೂ ಅವರ ಗನ್‌ಮ್ಯಾನ್‌ಗಳನ್ನು ಗನ್ ಸಮೇತ ಒಳಗೆ ಬಿಡುತಿತಿಲ್ಲ. ಒಬ್ಬೊಬ್ಬ ಸಚಿವರಿಗೂ ಇಬ್ಬರಿಂದ ಮೂವರು ಮಂದಿ ಗನ್‌ಮ್ಯಾನ್‌ಗಳಿರುತಾತಿರೆ. ಅವರ ಪೈಕಿ ಒಬ್ಬರು ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡು ವಿಧಾನಸೌಧದ ಹೊರಗಡೆ ಇರಬೇಕು.
ಮತೊತಿಬ್ಬರು ಸಚಿವರು ಹಿಂದೆ ಶಸ್ತ್ರ ರಹಿತವಾಗಿ ಹಿಂಬಾಲಿಸಬೇಕು. ಇಲ್ಲವಾದಲ್ಲಿ ಇರುವ ಎಲ್ಲಾ ಗನ್‌ಮ್ಯಾನ್‌ಗಳು ವಿಧಾನಸೌಧದ ಹೊರಗಡೆ ಇರಬೇಕು. ರೀತಿಯ ಕಠಿಣ ನಿರ್ಧಾರ ಕೈಗೊಳ್ಳಲು ಕಾರಣವಾದರೂ ಏನು ಎನ್ನುವ ಪ್ರಶ್ನೆಗೆ, ಬಹುತೇಕ ಗನ್‌ಮ್ಯಾನ್‌ಗಳು ಪೊಲೀಸ್ ಅಧಿಕಾರಿಗಳಿಗಿಂತಲೂ ಹೆಚ್ಚಿನ ರೀತಿಯಲ್ಲಿ ದರ್ಪ, ದೌಲತುತಿ ತೋರುತಾತಿರೆ.
ಬೇರೆ ಭದ್ರತಾ ಅಧಿಕಾರಿಗಳಿಗೆ ಕಿರಿಕಿರಿಯುಂಟು ಮಾಡುತಾತಿರೆ. ತಾವು ಸಚಿವರ ಗನ್‌ಮ್ಯಾನ್‌ಗಳು ಎಂದು ಬೊಬ್ಬಿರಿಯುತಾತಿರೆ. ಪೊಲೀಸ್ ಆಯುಕತಿರು, ಪೊಲೀಸ್ ಮಹಾನಿರ್ದೇಶಕರಿಗೂ ಸಲಾಮು ಹೊಡೆಯುವುದಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಗನ್‌ಮ್ಯಾನ್‌ಗಳಿಗೆ ವಿಧಾನಸೌಧದಲ್ಲಿ ಪ್ರವೇಶ ನೀಡುತಿತಿಲ್ಲ.
ನ್ನು ಸರ್ಕಾರಿ ನೌಕರರಿಗೂ ವಿಧಾನಸೌಧ ಪ್ರವೇಶ ನಿರ್ಬಂಧಿಸಲಾಗಿದೆ. ಕಳೆದ ವಾರ ಮೇಲ್ಮನೆ ಸದಸ್ಯ ಪುಟ್ಟಣ್ಣ ನೇತೃತ್ವದಲ್ಲಿ ಉಪನ್ಯಾಸಕರು ಸರ್ಕಾರಿ ನೌಕರರೆಂದು ಹೇಳಿಕೊಂಡು ವಿಧಾನಸೌಧ ಪ್ರವೇಶಿಸಿದ್ದರು. ನಂತರ ಹಣಕಾಸು ಇಲಾಖೆ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ರಿಂದ ಕುಪಿತರಾದ ಐ.ಎ.ಎಸ್. ಅಧಿಕಾರಿಗಳು ಪೊಲೀಸರನ್ನು ತೀವ್ರ ತರಾಟೆಗೆ ಗುರಿಪಡಿಸಿದರು.
ಇದರಿಂದ ಎಚ್ಚತತಿ ವಿಧಾನಸೌಧದ ಭದ್ರತಾ ವಿಭಾಗ ಇದೀಗ ಸರ್ಕಾರಿ ನೌಕರರಿಗೆ ವಿಧಾನಸೌಧಕ್ಕೆ ಪ್ರವೇಶವನ್ನು ನಿರ್ಬಂಧಿಸಿದೆ. ಯಾರಾದರೂ ವಿಧಾನಸೌಧಕ್ಕೆ ಆಗಮಿಸಬೇಕಾಗಿದ್ದರೆ ಕಡ್ಡಾಯವಾಗಿ ಪಾಸ್ ಹೊಂದಿರಲೇಬೇಕು. ಇಲ್ಲವಾದಲ್ಲಿ ನಿರ್ದಿಷ್ಟ ಕಾರಣವನ್ನು ನೀಡಬೇಕು.
ಈ ಕಾರಣದಿಂದಾಗಿ ಸರ್ಕಾರಿ ನೌಕರರು ಮತುತಿ ವಿಧಾನಸೌಧದ ಭದ್ರತಾ ಸಿಬ್ಬಂದಿ ನಡುವೆ ಕಿರಿಕಿರಿ, ವಾಗ್ವಾದ ನಡೆಯುವುದು ಸಾಮಾನ್ಯವಾಗಿದೆ. ಲಕ್ಷ್ಮಣ್ ಸಿಂಗ್ ಹೇಳುವಂತೆ ವಿಧಾನಸೌಧ ಸುರಕ್ಷಿತ ಸ್ಥಳವೇನಲ್ಲ. ಕಳೆದ ವರ್ಷ ವಸತಿ ಸಚಿವ ವಿ. ಸೋಮಣ್ಣ ಅವರಿಗೆ ತುಮಕೂರು ಜಿಲ್ಲೆಯ ವ್ಯಕಿತಿಯೊಬ್ಬ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿತುತಿ.
ಸಚಿವರು, ಶಾಸಕರು, ಮಂತ್ರಿಗಳಿಗೆ ವಿರುದ್ಧವಾಗಿರುವವರು ಗುಂಪು ಗುಂಪಾಗಿ ದೈಹಿಕ ಹಲ್ಲೆ ನಡೆಸಿದರೆ ಯಾರು ಜವಾಬ್ದಾರರು ಎನ್ನುವುದು ಜನ ಪ್ರತಿನಿಧಿಗಳ ಆತಂಕವಾಗಿದೆ
ಕೃಪೆ ವಾ.ಭಾರತಿ 

No comments:

Post a Comment