Tuesday, March 26, 2013

ಸೂರಿಂಜೆ ಮೇಲಿನ ಪ್ರಕರಣ ಕೈಬಿಡಲು;ಅಮೆರಿಕ ಮೂಲದ ಸಿಪಿಜೆ ಆಗ್ರಹ



 ಮಾರ್ಚ್ -26-2013

ವಾಶಿಂಗ್ಟನ್: ಕರ್ನಾಟಕದಲ್ಲಿ ಯುವತಿಯರ ಗುಂಪೊಂದರ ಮೇಲೆ ನಡೆದಿದ್ದ ಭಾರೀ ಪ್ರಮಾಣದ ಹಲ್ಲೆಯನ್ನು ದಾಖಲಿಸಿಕೊಂಡ ಬಳಿಕ ಸುಮಾರು ನಾಲ್ಕು ತಿಂಗಳ ಕಾಲ ಕಾರಾಗೃಹ ಸೇರಿ ಭಾರತೀಯ ಟಿವಿ ವರದಿಗಾರನೊಬ್ಬನ ಜಾಮೀನು ಬಿಡುಗಡೆಯನ್ನು ಅಮೆರಿಕ ಮೂಲಕ ಪತ್ರಕರ್ತರ ರಕ್ಷಣಾ ಸಮಿತಿಯು(ಸಿಪಿಜೆ) ಸ್ವಾಗತಿಸಿವೆ.
ಪತ್ರಕರ್ತ ನವೀನ್ ಸೂರಿಂಜೆಯ ವಿರುದ್ಧ ಬಾಕಿಯಿರುವ ಕ್ರಿಮಿನಲ್ ಆರೋಪಗಳು ‘ಆಧಾರ ರಹಿತ ಹಾಗೂ ಪ್ರತಿಕಾರಾತ್ಮಕ’ ವೆಂದು ಅಭಿಪ್ರಾಯಿಸಿರುವ ಸಿಪಿಜೆ, ಅವುಗಳನ್ನು ಕೂಡಲೇ ಕೈಬಿಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿವೆ.
 ನವೀನ್ ಸೂರಿಂಜೆಯನ್ನು ಕಾರಾಗೃಹದಿಂದ ಬಿಡುಗಡೆಗೊಳಿಸಿರುವುದು ಸಕಾಲಿಕವಾಗಿದೆ. ಕೇವಲ ಮಹಿಳೆಯರ ಮೇಲಿನ ಹಿಂಸಾಚಾರವನ್ನು ವರದಿ ಮಾಡಿದುದಕ್ಕಾಗಿ ಆತನನ್ನು ಬಂಧಿಸಿದ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ವಿಷಯವು ಇತ್ತೀಚಿನ ತಿಂಗಳುಗಳಲ್ಲಿ ಭಾರತ ವಿಶ್ವಾದ್ಯಂತ ಸುದ್ದಿಯಲ್ಲಿರುವಂತೆ ಮಾಡಿತ್ತೆಂದು ಸಿಪಿಜೆಯ ಉಪ ನಿರ್ದೇಶಕ ರಾಬರ್ಟ್ ಮಹೋನಿ ಹೇಳಿದ್ದಾರೆ.
ಅವರ ವಿರುದ್ಧದ ಎಲ್ಲ ಆರೋಪಗಳನ್ನು ತಕ್ಷಣವೇ ಹಿಂದೆ ಪಡೆಯಬೇಕೆಂದು ಅವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಕಸ್ತೂರಿ ನ್ಯೂಸ್ 24 ಹೆಸರಿನ ಕನ್ನಡ ವಾಹಿನಿಯ ವರದಿಗಾರ ನವೀನ್(28). ಮಾ.18ರಿಂದ ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನಿನನ್ವಯ ಶನಿವಾರ ಹೊರಗೆ ಬಂದಿದ್ದಾರೆ.
ಕಳೆದ ವರ್ಷ ಜು.28ರಂದು ಮಂಗಳೂರಿನ ಹೋಂ ಸ್ಟೇ ಒಂದರಲ್ಲಿ ಯುವತಿಯರ ಮೇಲೆ ನಡೆದಿದ್ದ ದಾಳಿಗೆ ಸಂಬಂಧಿಸಿ ಸೂರಿಂಜೆಯನ್ನು ಬಂಧಿಸಲಾಗಿತ್ತು.
ಹಿಂದೂ ಜಾಗರಣ ವೇದಿಕೆಗೆ ಸೇರಿದವರೆನ್ನಲಾದ ದುಷ್ಕರ್ಮಿಗಳು ಅನೈತಿಕ ಚಟುವಟಿಕೆಯ ಆರೋಪ ಹೊರಿಸಿ, ಯುವತಿಯರೂ ಸೇರಿದಂತೆ 12ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು.

No comments:

Post a Comment