Wednesday, March 6, 2013

ಧೂಮಪಾನ‌ ಎಂದರೆ ದೇಹತ್ಯಾಗ‌




drpshashikalakr...
ಧುನಿಕ ಯುಗದಲ್ಲಿ ಒತ್ತಡ, ಆತಂಕ, ಟೆನ್ಶನ್ ಎಂದು ಒದ್ದಾಡುತ್ತಾ ಇರುವ ಜನರು, ಇಂಥಹ ಮಾನಸಿಕ ಗೊಂದಲಗಳನ್ನು ಹತ್ತಿಕ್ಕುತ್ತಿರುವುದಾದರೂ ಏನು ? ಇದು ಯಾಕೆ ? ಹೇಗೆ ? ಎಂಬುದರ ಬಗ್ಗೆ ಚಿಂತನೆ ಮಾಡದೆ, ಇವೆಲ್ಲದರ ನಿರ್ವಹಣೆಗೆ ಎನ್ನುವಂತೆಯೋ ಅಥವಾ ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸಿದರೆ ಅದು ನಾಗರೀಕತೆಯ ಸಂಕೇತವೋ ಎಂಬಂತೆ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದಕರ ! ತಂಬಾಕು ಸೇವನೆ ಎಗ್ಗಿಲ್ಲದಂತೆ ಮುಂದುವರೆದಿದೆ ! ಗುಟ್ಕಾ ಸಂಸ್ಕೃತಿ ಹದಿಹರೆಯದಲ್ಲೇ ಶುರುವಾಗಿದೆ. ಹೆಣ್ಣುಮಕ್ಕಳೂ ಸಹ ಬಾಯಲ್ಲಿ ಸಿಗರೇಟ್ ಹೊಗೆ ಬಿಡುತ್ತಾ ಪಬ್‍ಗಳತ್ತ ನಡೆದಿರುವುದು ನೋಡುತ್ತಿದ್ದೇವೆ. ಬೆಂಗಳೂರಿನಲ್ಲಿ ಗ್ರಾಮೀಣ ಪ್ರದೇಶದ ಯುವಕರ ಚಿಕ್ಕಗುಂಪೊಂದು ಆಡುತ್ತಿದ್ದ ಮಾತು ಕಿವಿಗೆ ಬಿತ್ತು ! ‘‘ನೋಡೋ, ಆ ಆಚಿಟಿ ಎಷ್ಟು ಸಿಗರೇಟ್ ಸೇದುತ್ತಿದ್ದಾಳೆ’’ ಎಂದು ಒಬ್ಬ ಮಹಿಳೆಯ ಕಡೆ ಕೈ ಮಾಡಿ ತೋರಿಸುತ್ತಿದ್ದರು. ಇದು ನಡೆದದ್ದು ಮಾನಸಿಕ ನೆಮ್ಮದಿದಾಗಿ, ಆರೋಗ್ಯಕ್ಕಾಗಿ, ‘ಧ್ಯಾನ’ದ ಮಾರ್ಗವನ್ನು ಹರಡುತ್ತಿರುವ ಕ್ಷೇತ್ರ ಒಂದರಲ್ಲಿ ! ಎಂಥಹ ವಿಪರ್ಯಾಸವಾದರೂ ಸಹ ಧ್ಯಾನವು ಆಕೆಯ ಮನಃಶಾಂತಿಗೆ ಮಾರ್ಗ ಎಂಬುದು ಆಕೆಯ ಅರಿವಿಗೆ ಬರುವುದರಲ್ಲಿ ಸಂಶಯವೇ ಇಲ್ಲ !
‘‘ಅಮೇರಿಕಾದಲ್ಲಿ ಪ್ರತಿ ದಿನ ಒಂದು ಸಾವಿರ ಜನರು, ಸಿಗರೇಟ್ ಸೇವನೆಗೆ ವಿದಾಯ ಹೇಳುತ್ತಾರಂತೆ ! ’’ ಅದು ಹೇಗೆ ? ಎಂದು ಆಶ್ಚರ್ಯವೇ ? ಇವರೆಲ್ಲ ಸಿಗರೇಟ್ ಸೇವನೆಯ ದುಷ್ಟರಿಣಾಮದಿಂದ ದೇಹತ್ಯಾಗ ಮಾಡುತ್ತಿರುವವರು ! ಸಿಗರೇಟ್ ತ್ಯಾಗ ಅಲ್ಲ !
ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನೂ ಸಿಗರೇಟ್ ಸೇವಿಸುತ್ತಾನೆಂದರೆ ನಂಬುವಿರಾ ? ಬರೀ ಸಿಗರೇಟ್, ಬೀಡಿ ಹಚ್ಚಿ ಅದನ್ನು ಬಾಯಲ್ಲಿಟ್ಟು ಸಏದಿದರೆಷ್ಟೇ ಧೂಮಪಾನಿಗಳೇ, ಅದಕ್ಕಿಂತ ಹೆಚ್ಚು ದುಷ್ಪರಿಣಾಮ ಅವರೊಡನಿರುವ ಎಲ್ಲ ಮನುಷ್ಯರು, ಅವರು ಉಗುಳುವ ಹೊಗೆಯನ್ನು ಸೇರಿಸುವ ಜನರೂ ಸಹ ! ಫಿಲ್ಟರ್ ಮೂಲಕ ಅವರು ಸಿಗರೇಟ್ ಸೇದಿದರೆ, ಅದಿಲ್ಲದೆಯೇ ನೇರವಾಗಿ ಅವರು ಉಗುಳಿದ ಹೊಗೆಯನ್ನು ಸೇವಿಸುವ ನಾವೆಲ್ಲರೂ, ಪ್ಯಾಸೀನ್ ಸ್ಮೋಕರ್ಸ್ ! ತೆಪ್ಪಗೆ ಆ ಹೊಗೆಯನ್ನು ಸೇರಿಸುವ ಜಡ ಧೂಮಪಾನಿಗಳು ! ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಜಾರಿಯಲ್ಲಿದೆಯೇ ? ಸಿಗರೇಟ್ ಅನ್ನು ಕೊಂಡ ವ್ಯಕ್ತಿ ರಾಜಾರೋಷವಾಗಿ ಅದೇ ಅಂಗಡಿಯಲ್ಲಿ ಅದಕ್ಕೆ ಬೆಂಕಿ ಹಚ್ಚಿ, ಎಲ್ಲರ ಮೇಲೂ ಧೂಮಪಾನ ಹೊಗೆಯನ್ನು ಹರಡಿ ಹೋಗುತ್ತಾನೆ ! ತಮ್ಮ ದೇಹವನ್ನು ಮಸಿಯಲ್ಲಿ ಮುಳುಗಿಸುವ ಜೊತೆಗೆ ಎಲ್ಲರ ಆರೋಗ್ಯವನ್ನು ಹಾಳು ಮಾಡುವ ಭೂಪರಿವರು !
ಧೂಮಪಾನದಿಂದಾಗುವ ತೊಂದರೆಗಳಿಗೆ ಲೆಕ್ಕವೇ ಇಲ್ಲ ! ಧೂಮಪಾನದಿಂದ ಶ್ವಾಸಕೋಶಗಳಿಗಷ್ಟೇ ರೋಗ ತಗಲುವುದಿಲ್ಲ ! ತಲೆಯಿಂದ ಕಾಲಿನವರೆಗೂ ಎಲ್ಲ ಅಂಗಾಂಗಗಳೂ ರೋಗಗ್ರಸ್ಥವಾಗುವುದೆಂಬುದನ್ನು ಅರಿಯಬೇಕು.
ಧೂಮಪಾನದಿಂದಾಗುವ ದುಷ್ಪರಿಣಾಮಗಳತ್ತ ಒಂದು ನೋಟ :
ನಿರ್ಜೀವವಾಗಿ, ಹೊಳಪಿಲ್ಲದ ತಲೆ ಕೂದಲು ಸಿಗರೇಟ್ ವಾಸನೆಯುಕ್ತವಾಗಿ ಮಾಸಿದಂತೆ ಅಥವಾ ಬಣ್ಣ ಬದಲಾಯಿಸಿದಂತಾಗಿ, ಕೂದಲಿನ ಬೆಳವಣಿಗೆ ಕುಂಠಿತವಾಗುವುದರ ಜೊತೆಗೆ ಬೇಗ ಬೆಳ್ಳಗಾಗುವುದೂ ಸಹ. ಮಿದುಳಿನ ಮೇಲೆ ತಂಬಾಕಿನ ಪರಿಣಾಮ ಘೋರವಾದದ್ದು. ಕ್ಯಾರೋಟಿಡ್ ಆರ್ಟರಿಯಲ್ಲಿ ಕೊಬ್ಬು ಶೇಖರಣೆ, ಇದರಿಂದಾಗಿ ಮಿದುಳಿಗೆ ರಕ್ತ ಸಂಚಾರ ಕುಂಠಿತ, ಸ್ಥಗಿತವಾದಾಗ ‘‘ಪಾಶ್ರ್ವವಾಯು’’ ರಕ್ತವು ಮಂದವಾಗುವುದು.
ಧೂಮಪಾನಿಗಳು ಪಾಶ್ರ್ವವಾಯು ಪೀಡಿತರಾಗುವುದು, ಆರೋಗ್ಯವಂತರಿಗಿಂತ ಒಂದುವರೆ ಪಟ್ಟು ಹೆಚ್ಚು ಕಣ್ಣುಗಳಲ್ಲಿ ಅನೇಕ ವಿಧದ ತೊಂದರೆ ಗ್ಲುಕೋಮ, ಪೊರೆ, ಹಾಗೂ ದೃಷ್ಠಿ ಹೀನತೆ.
ವಾಸನೆಯನ್ನು ಗ್ರಹಿಸಲಗದಿರುವುದು, ಹಲ್ಲುಗಳು ಹಳದಿಯಾಗಿ, ಕೊಳೆಕಟ್ಟಿದಂತೆ ಕಾಣುವುದು, ವಸಡುಗಳಿಂದ ರಕ್ತಸ್ರಾವವಾಗುವಿಕೆ, ವಸಡುಗಳಲ್ಲಿ ಸೋಂಕು, ತುಟಿ, ಬಾಯಿ, ನಾಲಿ, ಗಂಟಲು, ಅನ್ನನಾಳ, ಶ್ವಾಸಕೋಶ, ಉದರ ಗರ್ಭಕೋಶದ ಕೊರಳು, ಮೂತ್ರಪಿಂಡ, ಮೂತ್ರ ಚೀಲ ಹೀಗೆ ಹಲವಾರು ಅಂಗಗಳ ಕ್ಯಾನ್ಸರ್‍ಗೆ ಧೂಮಪಾನ ಕಾರಣವಾಗಿದೆ.
ರಕ್ತನಾಳಗಳಲ್ಲಿ ಉಂಟಾಗುವ ಕೊಬ್ಬು ಶೇಖರಣೆ, ನಂತರದಲ್ಲಿ ಅದರ ಮೇಲೆ  ರಜ್ತ ಹೆಪ್ಪು ಗಟ್ಟುವಿಕೆಯಿಂದ ಕೈ ಕಾಲುಗಳು ಗ್ಯಾಂಗ್ರೀನ್‍ಗೆ ತುತ್ತಾಗುವವು, ಹೃದಯ ಸಂಬಂಧೀ ಖಾಯಿಲೆಗಳು ಹೃದಯಾಘಾತ ಹೆಚ್ಚುವುದು.
ಬಾಯಿಯ ರುಚಿ ತಗ್ಗುವಿಕೆ, ಗಂಟಲು ಬೇನೆ ಜೊತೆಗೆ ಹೊರ ಹೊಮ್ಮುವ ದುರ್ಗಂಧಯುಕ್ತ ಉಸಿರು, ಇತರೇ ಸಾಮಾನ್ಯ ತೊಂದರೆಗಳು, ಧೂಮಪಾನದಲ್ಲಿರುವ ಹಾನಿಕಾರಕ ವಸ್ತುಗಳು ನೇರವಾಗಿ ಶ್ವಾಸಕೋಶಗಳನ್ನು ಪ್ರವೇಶಿಸುವುದರಿಂದ ಅಲ್ಲಿ ದುಷ್ಪರಿಣಾಮಗಳು ನೂರಾರು ! ಗರ್ಭಿಣಿ ಸ್ತ್ರೀಯರಲ್ಲೂ ಹಾಗೂ ಗರ್ಭದಲ್ಲಿರುವ ಶಿಶುವಿನ ಮೇಲೂ ಸಿಗರೇಟಿನ ದುಷ್ಪರಿಣಾಮಗಳಾಗುವವು.
ಉಸಿರಿನ ತೊಮದರೆ, ಆಸ್ತಮ, ಕೆಮ್ಮು, ಕಫ, ದಮ್ಮು, ಕ್ರಾನಿಕ್ ಬ್ರಾಂಕೈಟಿಸ್, ಎಂಫಸೀಮ ಎಂಬಂತೆ ……..ನೂರಾರು, ಶ್ವಾಸಕೋಶಗಳಾದರೆ ಕಪ್ಪಗೆ ಮಸಿಯಿಂದ ತುಂಬಿರುವವು. ಜಠರದ ಸಮಸ್ಯೆಗಳೆಂದರೆ, ಉರಿ, ಅಲ್ಸರ್, ಹಾಗೂ ಕ್ಯಾನ್ಸರ್ ಪಿತ್ತಕೋಶದಲ್ಲಿ ಕಲ್ಲುಗಳು, ಕರುಳಿನ ತೊಂದರೆಗಳು.
ಚರ್ಮ ಸುಕ್ಕುಗಟ್ಟುವಿಕೆ, ಬೇಗ ವಯಸ್ಸಾದಂತೆ ಕಾಣುವುದು, ಕಾಲುಗಳಲ್ಲಿ ನೋವು, ನಡೆಯಲಾಗದಿರುವಿಕೆ, ಲೈಂಗಿಕ ದೌರ್ಬಲ್ಯ, ರಕ್ತದಲ್ಲಿನ ಕೊಬ್ಬಿನಂಶ ಹೆಚ್ಚುವಿಕೆ, ಮುಂತಾದವೂ ಸಹ ತಂಬಾಕಿನಿಂದುಂಟಾಗುವ ದುಷ್ಪರಿಣಾಮಗಳು, ಜೊತೆಗೇ ಜೇಬಿನಲ್ಲಿರುವ, ಗಳಿಸಿರುವ ಹಣವೆಲ್ಲವೂ ಪೋಲಾಗುವುದು, ಹಣ ಕೊಟ್ಟುಕೊಂಡುಕೊಳ್ಳುವ ದೈಹಿಕ ಖಾಯಿಲೆಗಳಿವು !
ಸಿಗರೇಟಿನ ಚಟಕ್ಕೆ ಬೀಳಲು ಹಲವಾರು ದಾರಿಗಳು, ಸಹವಾಸದೋಷ, ಸ್ನೇಹಿತರಿಂದ ಒತ್ತಡ, ಬಲವಂತ ಕುತೂಹಲ, ಪ್ರತಿಷ್ಠೆ, ದೊಡ್ಡತನ, (ದಡ್ಡತನ) ಎಂಬಂತೆ, ಒತ್ತಡ ನಿರ್ವಹಣೆಗಾಗಿ ? ಟೆನ್ಷನ್ ಕಳೆದುಕೊಳ್ಳಲೋಸುಗ.
ಸತ್ಯ ಸಂಗತಿಯೆಂದರೆ ಸಿಗರೇಟ್ ಸೇವನೆಯಿಂದ ಇನ್ನಷ್ಟು ಒತ್ತಡ ಹೆಚ್ಚಾಗುವುದೇ ವಿನಹ ಅದರಿಂದ ಒತ್ತಡ, ಆತಂಕ ನಿರ್ವಹಣೆಯಾಗುವುದಿಲ್ಲ !
ಸಿಗರೇಟ್ ಸೇದಿದ ತಕ್ಷಣ, ಎದೆ ಬಡಿತ ಹೆಚ್ಚುವುದು, ಬಿ.ಪಿ. (ರಕ್ತದೊತ್ತಡ) ಹೆಚ್ಚಾಗುವುದು. ನರ ಹಾಗೂ ಮಿದುಳು ಉತ್ತೇಜನಗೊಳ್ಳುವವು.
ಹಸಿವು ಕಡಿಮೆಯಾಗುವುದು. (ಧೂಮಪಾನ ತ್ಯಜಿಸಿದ ನಂತರ ಅನೇಕರ ತೂಕ ಹೆಚ್ಚುವುದು. ಇದಕ್ಕೆ ಕಾರಣ, ಧೂಮಪಾನಿಗಳಲ್ಲಿ ಹಸಿವು ಹೆಚ್ಚುವುದು ಹಾಗೂ ಸಾಕಷ್ಟು ಆಹಾರ ಸೇವಿಸಲು ಸಾಧ್ಯವಾಗುವುದು).
ಧೂಮಪಾನದಿಂದ ರೋಗ ನಿರೋಧಕ ಶಕ್ತಿ ಕುಸಿತ, ಕ್ಷಯರೋಗಕ್ಕೆ ಆಹ್ವಾನ.
ಧೂಮಪಾನ ಜನರನ್ನು ಕೊಲ್ಲುವುದು.
ಜೀವನ ಪರ್ಯಂತ ಧೂಮಪಾನಿಯಾಗಿರುವ ಇಬ್ಬರಲ್ಲಿ ಒಬ್ಬನನ್ನು ಎಂಬಂತೆ, ಸಿಗರೇಟ್ ಸೇವನೆ ಕೊಲೆ ಮಾಡುವುದು. ಇದರಲ್ಲಿ ಅರ್ಧದಷ್ಟು ಸಾವು ಸಂಭವಿಸುವುದು ಮಧ್ಯ ವಯಸ್ಕರಲ್ಲಿ.
ಚಿಮಣಿಯಲ್ಲಿ ಕಟ್ಟಿದ ಕಪ್ಪು ಹೊಗೆಯಂತಿರುವವು, ಧೂಮಪಾನಿಯ ಶ್ವಾಸಕೋಶಗಳು ! ದಿನಕ್ಕೆ 20 ಸಿಗರೇಟ್ ಸೇದುವವನು ಒಂದು ವರ್ಷಕ್ಕೆ ಸುಮರು 210 ಗ್ರಾಂ ಟಾರ್/ಡಾಂಬರನ್ನು (ಒಂದು ಕಪ್) ಸೇವಿಸಿದಂತೆ.
ಶ್ವಾಸಕೋಶದ ಕ್ಯಾನ್ಸರ್, ಧೂಮಪಾನಿಗಳಲ್ಲಿ ಹತ್ತುಪಟ್ಟು ಹೆಚ್ಚು !
ಕಡಿಮೆ ನಿಕೋಟಿನ್ ಇರುವ ಸಿಗರೇಟ್ ಸಹ ಅಪಾಯ. ಏಕೆಂದರೆ ಧೂಮಪಾನಿಯು ಒಳಗೆ ದೀರ್ಘವಾಗಿ ಎಳೆದುಕೊಂಡ ಹೊಗೆಯನ್ನು ಸ್ವಲ್ಪ ಹೊತ್ತು ಹಾಗೆಯೇ ಇಟ್ಟುಕೊಂಡು ನಂತರ ಹೊರ ಬಿಡುವನು. ಇದರಿಂದ ಶ್ವಾಸಕೋಶದ ಒಳಗೆ ಹಾನಿಕಾರಕ ವಸ್ತುಗಳು ಸೇರಿಕೊಳ್ಳುವವು.
ಹೃದಯದ ಖಾಯಿಲೆಗಳಿಂದುಂಟಾದ 5 ಮರಣಗಳಲ್ಲಿ ಒಂದಕ್ಕೆ ಕಾರಣ ಸಿಗರೇಟ್ ಸೇವನೆ.
ಚಿಕ್ಕ ವಯಸ್ಸಿನಲ್ಲಾಗುವ ಹೃದಯ ಸಂಬಂಧೀ ಸಾವುಗಳಲ್ಲ. ಶೇ. 75 ರಷ್ಟು ಸಾವಿಗೆ (ತಂಬಾಕು) ಸಿಗರೇಟ್ ಕಾರಣ !
ಗರ್ಭಿಣಿ ಸ್ತ್ರೀಯರು ಧೂಮಪಾನಿಗಳಾಗಿದ್ದಲ್ಲಿ, ಹುಟ್ಟುವ ಮಗುವಿನ ತೂಕ ಕಡಿಮೆಯಾಗುವುದು. ಬೇಗನೇ ಹೆರಿಗೆಯಾಗುವುದು. ಅಬಾರ್ಷನ್ ಆಗಬಹುದು, ಅಥವಾ ಹುಟ್ಟಿದ ತಕ್ಷಣ ಮಗು ಅಸುನಿಗಬಹುದು !
ಗರ್ಭದಿಂದ ಗೋರಿಯವರೆಗೆ ಎಂಬಂತೆ ಸಿಗರೇಟಿನ ದುಷ್ಪರಿಣಾಮಗಳು ಅನೇಕ ! ಆರೋಗ್ಯವೇ ಭಾಗ್ಯ ! ಇಂದೇ ಧೂಮಪಾನ ತ್ಯಜಿಸಿ. ಅರೋಗ್ಯವನ್ನು ಮರಳಿ ಪಡೆಯಿರಿ. ಎಷ್ಟೇ ವರ್ಷದಿಂದ ಧೂಮಪಾನಿಗಳಾಗಿದ್ದರೂ ಸರಿ, ತ್ಯಜಿಸಿದ ಕೆ¯ವೇ ಗಂಟೆಗಳಲ್ಲಿ ದೇಹದ ಆರೋಗ್ಯ ಉತ್ತಮಗೊಳ್ಳಲು ಶುರುವಾಗುವುದು.
‘‘ಧೂಮಪಾನಿಗಳಿಂದ ದೂರವಿರಿ, ಸೆಕೆಂಡ್ ಹ್ಯಾಂಡ್ ಸ್ಮೋಕ್ ಇನ್ನೂ ಅಪಾಯಕಾರಿ’

No comments:

Post a Comment