Tuesday, March 5, 2013

ರೈಲ್ವೇ ಗೇಟಿಗೆ ರಿಕ್ಷಾ ಡಿಕ್ಕಿ: ಅರ್ಧ ತಾಸು ಟ್ರಾಫಿಕ್ ಜಾಮ್ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ರೈಲ್ವೇ ಗೇಟಿಗೆ ರಿಕ್ಷಾವೊಂದು ಡಿಕ್ಕಿಯಾದ ಪರಿಣಾಮ ಸ್ವಲ್ಪ ಕಾಲ ಗೇಟ್ ತೆರೆಯದೆ ಸುಮಾರು ಅರ್ಧತಾಸು ಕಾಲ ವಾಹನ ಸಂಚಾರ ಸ್ಥಗಿತಗೊಂಡ ಘಟನೆ ಉದ್ಯಾವರ ಧ್ವೀತಿಯ ರೈಲ್ವೇ ಗೇಟ್ ಬಳಿ ನಡೆಯಿತು.

ಮಂಗಳವಾರ ಮದ್ಯಾಹ್ನ ಮಂಜೇಶ್ವರದಿಂದ ಉದ್ಯಾವರ ಕಡೆ ಸಾಗುತಿದ್ದ ರಿಕ್ಷವೊಂದು ಗೇಟಿನ ಸಮೀಪದಿಂದ ಚಲಿಸುತ್ತಿರುವಾಗ ಗೇಟ್ ಅರ್ಧ ಬಾಗಿತ್ತೆಂದು ಹೇಳಲಾಗಿದೆ ಇದರಿಂದ ರಿಕ್ಷಾದ ಮೇಲ್ಬಾಗ ತಾಗಿದ ಕೂಡಲೇ ಗೇಟ್  ಒಂದು ಬಾಗ ಮುರಿದು ಬಿದ್ದಿದೆ.ಕೆಲವು ಸಮಯದ ಹಿಂದೆ ಇದೇ ಸ್ಥಳದಲ್ಲಿ ಗೇಟ್ ಕೀಪರ್  ನಿರ್ಲ್ಯಕ್ಷದಲ್ಲಿ ಬಸ್ಸಿಗೆ ಗೇಟ್ ತಾಗಿ ಮುರಿದು ಬಿದ್ದು ಬಸ್ಸಿನವರಿಂದ ಸುಮಾರು 25000 ರೂ ದಂಡ ಕೂಡಾ ವಸೂಲಿಕೂಡಾ ಮಾಡಲಾಗಿತ್ತು.ಇದೀಗ ಅದೇ ಬಾಗ ರಿಕ್ಷಾದ ಮೇಲ್ಬಾಗ ತಾಗಿದ ಕೂಡಲೇ ಮುರಿದಿದೆ.ರಿಕ್ಷಾಕ್ಕೆ ಯಾವುದೇ ಹಾನಿಕೂಡಾ ಆಗಿಲ್ಲ.ಹಾಗಿದ್ದರೆ  ಮೊದಲು ಗೇಟ್ ಮುರಿದಾಗ ದಂಡ ವಸೂಲಿ ಮಾಡಿದ ಹಣದಿಂದ ಮಾಡಿದ್ದಾದರೂ ಏನುಇದು ಇಲ್ಲಿಯ ನಾಗರಿಕರ ಪ್ರಶ್ನೆ?ಮೊದಲೇ ಮುರಿದ ಗೇಟನ್ನು ಸರಿಪಡಿಸದೆ ಅಲವಡಿಸಿರಬಹುದೆಂಬ ಶಂಶಯವನ್ನು ಇಲ್ಲಿಯ ನಾಗರಿಕರು ವ್ಯಕ್ತಪಡಿಸಿದ್ದಾರೆಇಂತಹ ನಿರ್ಲ್ಯಕ್ಷವನ್ನು ತೋರುತ್ತಿರುವ ನೌಕರರ ಅಥವಾ ಅಧಿಕಾರಿಗಳ ವಿರುದ್ದ ಸಂಭಂಧಪಟ್ಟವರು ನಿಗಾ ಇರಿಸಲು ಇಲ್ಲಿಯ ನಾಗರಿಕರು ಆಗ್ರಹಿಸಿದ್ದಾರೆ.

No comments:

Post a Comment