Thursday, March 21, 2013

ಜನಪ್ರತಿನಿಧಿಗೆ ಗಲ್ಫ್ ಉದ್ಯೋಗಿಯಿಂದ ಕಪಾಲ ಮೋಕ್ಷಮಂಜೇಶ್ವರ:ಜನಪ್ರತಿನಿಧಿಯೊಬ್ಬನಿಗೆ ಹಾಗು ಸಂಘಟನೆಯೊಂದರ ವ್ಯಕ್ತಿಯ ಮಧ್ಯೆ ನಡೆದ ಮಾತಿನ ಚಕಮಕಿ ಕೊನೆಗೆ ಕಪಾಲ ಮೊಕ್ಷದಲ್ಲಿ ಪರ್ಯಾವಸಾನ ಗೊಂಡ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಲ್ಫ್ ಉದ್ಯೋಗಿ ಕಾರಿನಲ್ಲಿ ಸಂಚರಿಸುತ್ತಿರುವಾಗ ದಾರಿ ಮಧ್ಯೆ ಬೇರೊಬ್ಬರಲ್ಲಿ ಮಾತಲ್ಲಿ ನಿರತರಾಗಿದ್ದ ಜನಪ್ರತಿನಿಧಿಯನ್ನು ತನ್ನ ಕಾರಿಗೆ ಆಹ್ವಾನಿಸಿದ್ದೇ ಘಟನೆಗೆ ಕಾರಣವಾಗಿದೆ.ಮೊದಲು ಸಂಘಟನೆಯೊಂದರಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಗಲ್ಫ್ ಉದ್ಯೋಗಿ ನಂತ್ರ ಗಲ್ಫ್ ರಾಜ್ಯಕ್ಕೆ ಪ್ರಯಾಣ ಬೆಳೆಸಿ ಸಂಪಾದನೆ ಮಾಡಿ ಊರಿಗೆ ಬಂದಿದ್ದ. ಮೊದಲು ಜನಪ್ರತಿನಿಧಿ ಹಾಗು ಗಲ್ಫ್ ಉದ್ಯೋಗಿ ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿ ಕೊಂಡಿದ್ದರು.ಜನಪ್ರತಿನಿಧಿ ಗಲ್ಫ್ ಉದ್ಯೋಗಿಯ ಮಧ್ಯೆ ಮಾತಿಗೆ ಮಾತು ಬೆಳೆದು ಗಲ್ಫ್ ಉದ್ಯೋಗಿ ಜನಪ್ರತಿನಿಧಿಯ ಕಪಾಲ ಮೋಕ್ಷ ನಡೆಸಿರುವುದಾಗಿ ಸ್ಥಳೀಯರಿಂದ ಕೇಳಿ ಬಂದಿದೆ.

No comments:

Post a Comment