Friday, March 8, 2013

ಅಪರಾಧ ತಡೆಗೆ ರಹಸ್ಯ ಕ್ಯಾಮರ ಅಳವಡಿಕೆಕಾಸರಗೋಡು: ಅಪರಾಧ ಕೃತ್ಯಗಳು ಮತ್ತು ಅಹಿತಕರ ಘಟನೆಗಳ ಮೇಲೆ ನಿಗಾ ಇರಿಸಲು ಜಿಲ್ಲೆಯ ಪ್ರಮುಖ ಕೆಂದ್ರಗಳಲ್ಲಿ ಪೊಲೀಸರು ರಹಸ್ಯ ಕ್ಯಾಮರಗಳನ್ನು ಅಳವಡಿಸಲು ತೀರ್ಮಾನಿಸಿದ್ದಾರೆ. ಕಾಞಂಗಾಡ್ ನಿಂದ ಕಾಸರಗೋಡು ತನಕ ಹೆಚ್ಚಿನ ಕ್ಯಾಮರಗಳನ್ನು ಅಳವಡಿಸಲಾಗುತ್ತದೆ. ಇದಕ್ಕಾಗಿ ಪೊಲೀಸ್ ಕಂಟ್ರೋಲ್ ರೂಂನಲ್ಲಿ ಹತ್ತಕ್ಕೂ ಅಧಿಕ ಬೃಹತ್ ಸ್ಕ್ರೀನ್‌ಗಳನ್ನು  ಅಳವಡಿಸಲಾಗುವುದು. ಜಿಲ್ಲೆಯಲ್ಲಿ ನಡೆಯುವ ಚಟುವಟಿಕೆಗಳ ಕುರಿತು ಈ ದೃಶ್ಯಗಳ ಮೂಲಕ ತಿಳಿದು ಬರಲಿದೆ. ಇದಕ್ಕಾಗಿ 24ಗಂಟೆಯೂ ಕಾರ್ಯಾಚರಿಸುವ ಪೊಲೀಸ್ ತಂಡವನ್ನು ವ್ಯವಸ್ಥೆ ಮಾಡಲಾಗಿದೆ.ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಯಲ್ಲಿ ಅಪರಾಧ ತಡೆಗ ಟ್ಟುವ ನಿಟ್ಟಿನಲ್ಲಿ ರಹಸ್ಯ ಕ್ಯಾಮರಗಳನ್ನು ಅಳವಡಿಸಲು ಯೋಜನೆ ಹಾಕಲಾಗಿದೆ.
ಕ್ಯಾಮರಗಳು ಕಂಟ್ರೋಲ್ ರೂಂಗಳಿಗೆ ನೇರ ಸಂಪರ್ಕಿಸುವ ವ್ಯವಸ್ಥೆ ಮಾಡಲಾಗಿದೆ. ಕಾನೂನು ವಿರುದ್ಧ ಚಟುವಟಿಕೆ ಕಂಡುಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸರಿಗೆ ವಯರ್ ಲೆಸ್ ಸಂದೇಶ ರವಾನಿಸಿ ಆರೋಪಿಗಳನ್ನು ಬಂಧಿಸಲು ನೆರವಾಗಲಿದೆ.
ಒಂದು ತಿಂಗಳೊಳಗೆ ಕ್ಯಾಮರ ಅಳವಡಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಎರಡು ತಿಂಗಳೊಳಗೆ ಪೂರ್ಣಗೊಳಿಸಲಾಗು ವುದು. ಇದಕ್ಕಾಗಿ 75 ಲಕ್ಷರೂ. ವೆಚ್ಚವಾಗಲಿದೆ. ಇದಲ್ಲದೇ ಜಿಲ್ಲೆಯ ಪ್ರಮುಖ ಚಿನ್ನಾಭರಣ ಮತ್ತು ವಸ್ತ್ರ ಮಳಿಗೆಯಲ್ಲೂ ರಹಸ್ಯ ಕ್ಯಾಮರ ಅಳವಡಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಶಾಸಕ ಎನ್.ಎ.ನೆಲ್ಲಿಕುನ್ನು, ಪಿ.ಬಿ.ಅಬ್ದುಲ್ ರಝಾಕ್‌ರ ಶಾಸಕ ನಿಧಿಯಿಂದ 10 ಲಕ್ಷ ರೂ.  ಮಂಜೂರುಗೊಳಿಸಲು ಸರಕಾರದ ಅನುಮತಿ ಲಭಿಸಿದೆ.

No comments:

Post a Comment