Wednesday, March 20, 2013

ಉದ್ಯಾವರ ಬಂಡಾರ ಮನೆ ರಸ್ತೆ ಕಳಪೆ ಕಾಮಗಾರಿ:ವಿಜಿಲೆನ್ಸ್ ಗೆ ದೂರು



ಮಂಜೇಶ್ವರ:ಮಂಜೇಶ್ವರ ಗ್ರಾ.ಪಂ.ನ 6 ನೇವಾರ್ಡಿನ ಬಂಡಾರ ಮನೆ ರಸ್ತೆ ಯ ಕಾಮಗಾರಿಯು ಈಗಾಗಲೇ ಪೂರ್ತಿಗೊಂಡಿದ್ದು ಆದರೆ ಈ ಕಾಮಗಾರಿಯು ಕಳಪೆ ಕಾಮಗಾರಿಗೊಂದು ಕೈಗನ್ನಡಿಯಾಗಿದೆಂದು ನಾಗರಿಕರು ಆರೋಪಿಸಿದ್ದು ಈ ರಸ್ತೆಯ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಬಿಲ್ ಪಾಸ್ ಮಾಡಬೇಕೆಂಬ ವಿನಂತಿ ಪತ್ರವನ್ನು ಮಂಜೇಶ್ವರ ಗ್ರಾ. ಪಂ.ಅಧ್ಯಕ್ಷರಿಗೆ ಹಾಗು ಕಾರ್ಯದರ್ಶಿಯವರಿಗೆ ನೀಡಲಾಗಿದೆ.ಹಾಗು ಈ ಬಗ್ಗೆ ವಿಜಿಲೆನ್ಸ್ ಅಧಿಕಾರಿಗಳಿಗೂ ದೂರನ್ನು ರವಾನಿಸಲಾಗಿದೆ.
ಮಂಜೇಶ್ವರ ಗ್ರಾ.ಪಂ.ಪ್ರೊಜೆಕ್ಟ್ ನಂಬ್ರ 2012/13 ರಾಷ್ಟ್ರೀಯ  ಹೆದ್ದಾರಿ 17 ರಿಂದ ಬಂಡಾರ ಮನೆ ರಸ್ತೆ ಯ ರೀ ತಾರಿಂಗ್ ಕಾಮಗಾರಿಗೆ ಪಂಚಾಯತ್ ಫಂಡ್ ನಿಂದ 25೦,೦೦೦ ರೂಪಾಯಿಯನ್ನು ಅನುಮತಿಸಲಾಗಿತ್ತು ಈ ಯೋಜಣೆಯಂತೆ ಕಾಮಗಾರಿಯು ಆರಂಭಗೊಂಡಿತ್ತು.ಆರಂಭಂದಿಂದಲೇ ಈ ಕಾಮಗಾರಿಯ ಬಗ್ಗೆ ಮಂಜೇಶ್ವರ ಗ್ರಾಹಕರ ವೇದಿಕೆಗೆ ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಹಕ್ಕು ಖಾಯಿದೆ ನಿಯಮ ಪ್ರಕಾರ ಈ ಕಾಮಗಾರಿಯ ಸಂಪೂರ್ಣ ಮಾಹಿತಿಯನ್ನು ಮಂಜೇಶ್ವರ ಗ್ರಾಹಕರ ವೇದಿಕೆ ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡ ಇಂಜಿನಿಯರ್ ರವರಿಂದ ಪಡಕೊಂಡಿತ್ತು . ಆದರೆ ಮಾಹಿತಿಯ ಆಧಾರದಲ್ಲಿ ಈ ಕಾಮಗಾರಿಗೆ ಎಸ್ಟಿಮೇಟ್ ನಲ್ಲಿ ತಿಳಿಸಿದ ಪ್ರಕಾರ ಕೆಲಸ ನಡೆದಿಲ್ಲವೆಂದು ಆರೋಪಿಸಿ ಸಂಭಂಧಪಟ್ಟ ಇಂಜಿನಿಯರುಗಳು ಪುನರ್ ಪರಿಶೀಲಿಸಿ ಗುತ್ತಿಗೆದಾರನಿಗೆ ಬಿಲ್ ಅನುಮತಿಸಬೇಕೆಂದು ಆಗ್ರಹಿಸಿ ಮಂಜೇಶ್ವರ ಗ್ರಾಹಕರ ವೇದಿಕೆ.ಪಂಚಾಯತ್ ಅಧಿಕೃತರಿಗೆ ಹಾಗು ವಿಜಿಲೆನ್ಸ್ ಅಧಿಕಾರಿಗಳಿಗೆ ದೂರು ನೀಡಿದೆ.

No comments:

Post a Comment