Monday, March 18, 2013

ಕುಂಜತ್ತೂರಿನಲ್ಲಿ ಆಡುಕಳ್ಳರ ಹಾವಳಿ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕುಂಜತ್ತೂರು ಪರಿಸರದಲ್ಲಿ ಆಡುಕಳ್ಳರ ಹಾವಳಿ ಅತಿಯಾಗುತಿದ್ದು ಇದೀಗ ಹಾಡುಹಗಲೇ ವಾಹನದಲ್ಲಿ ಬಂದು  ಸಾರ್ವಜನಿಕರ ಎದುರಿನಲ್ಲಿಯೇ ಮಾರ್ಗದ ಬದಿಯಲ್ಲಿರುವ ಆಡುಗಳನ್ನು ಎತ್ತಿ ವಾಹನಕ್ಕೆ ಹಾಕಿ ಕೊಂಡು ಹೋಗುತಿದ್ದಾರೆ.
ರವಿವಾರ ಮಧ್ಯಾಹ್ನ ಬೈಕಿನಲ್ಲಿ ಬಂದ ಇಬ್ಬರು ಯುವಕರು ಕುಂಜತ್ತೂರು ಹಳೆ ಆರ್.ಟಿ.ಓ ಚೆಕ್ ಪೋಸ್ಟ್ ಗೆ ಬಂದು ಆಡುಗಳು ಮೇಯುತ್ತಿರುವ ಸ್ಥಳದಲ್ಲಿ ಸ್ವಲ್ಪ ಹೊತ್ತು ನಿಂತು ನಂತ್ರ ಮಂಜೇಶ್ವರ ಬಾಗಕ್ಕೆ ಹಿಂತಿರುಗಿದರೆನ್ನಲಾಗಿದೆ. ನಂತ್ರ ಸ್ವಲ್ಪ ಹೊತ್ತು ಕಳೆದು ಮಂಜೇಶ್ವರ ಬಾಗದಿಂದ ಬಿಳಿ ಆಲ್ಟೋ ಕಾರೊಂದರಲ್ಲಿ ಅದೇ ಸ್ಥಳಕ್ಕೆ ಆಗಮಿಸಿದ ಅದೇ ಅಪರಿಚಿತ ಯುವಕರು ತೂಮಿನಾಡು ಲಕ್ಷಂ ವೀಡು ಕಾಲನಿ ನಿವಾಸಿ ಆದಂ ಎಂಬವರ ಮೂರು ಆಡುಗಳನ್ನು ಹಿಡಿದು ಕಾರಿಗೆ ಹಾಕಿ ಕೊಂಡೊಯ್ದಿರುವುದಾಗಿ ದೂರಲಾಗಿದೆ. ಇವರು ಆಡುಗಳನ್ನು ಕೊಂಡೊಯ್ಯುವ ಸಂದರ್ಭ ಅದೇ ಸ್ಥಳದಲ್ಲಿ ಇದ್ದ ಅನ್ಯರಾಜ್ಯದ ನಿವಾಸಿಗಳು ಇದಕ್ಕೆ ಪ್ರತ್ಯಕ್ಷ ದರ್ಶಿಗಳಾಗಿದ್ದಾರೆ ಆದರೆ ಕಾರಿನ ನಂಬ್ರದ ಮಾಹಿತಿ ಲಭ್ಯವಾಗಿಲ್ಲ ವ್ಯಕ್ತಿಗಳನ್ನು ಕಂಡರೆ ಪತ್ತೆಹಚ್ಚಬಹುದೆಂದು ತಿಳಿಸಿದ್ದಾರೆ .ಇವರು ಆಡುಗಳನ್ನು ಹಿಡಿಯುವ ಸಂದರ್ಭ ಅದರ ಕೂಗು ಕೇಳದಿರಳು ಒಂದು ರೀತಿಯ ಪುಡಿಯನ್ನು ಆಡಿನ ಮುಖಕ್ಕೆ ಎರಚಿ ಕೊಂಡೊಯ್ದಿರುವುದಾಗಿ ಪ್ರತ್ಯಕ್ಷ ದರ್ಶಿಗಳಾದ ಅನ್ಯರಾಜ್ಯದ ವ್ಯಕ್ತಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಆದಂ ರವರು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ದೂರನ್ನು ದಾಖಲಿಸದೆ ಪೊಲೀಸರು ಹಿಂತಿರುಗಿ ಕಳುಹಿಸಿರುವುದಾಗಿ ದೂರಲಾಗಿದೆ. 

No comments:

Post a Comment