Tuesday, March 19, 2013

ಗ್ರಾಮ ಕರಣಿಕ ಲೋಕಾಯುಕ್ತ ಬಲೆಗೆ


ಗ್ರಾಮ ಕರಣಿಕ ಲೋಕಾಯುಕ್ತ ಬಲೆಗೆ


 ಮಾರ್ಚ್ -19-2013

ಬೆಳ್ತಂಗಡಿ: ಲಂಚ ಪಡೆಯು ತ್ತಿದ್ದ ಗ್ರಾಮ ಕರಣಿಕನನ್ನ್ನು ಬೆಳ್ತಂಗಡಿಯ ಪೊಲೀಸರು  ಬಂಧಿಸಿದ್ದಾರೆ.ಕಳಿಯ ಗ್ರಾಮದ ಗ್ರಾಮ ಕರಣಿಕ ಪೊಡಿಯ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಸ್ಥಳೀಯ ನಿವಾಸಿ ಆರಿಸ್ ಎಂಬವರು ತಂದೆಯ ಮರಣ ನಂತರ ಜಮೀನಿನ ಖಾತೆ ಬದಲಾವಣೆ ಗಾಗಿ ಅರ್ಜಿ ಸಲ್ಲಿಸಿದಾಗ ಪೊಡಿಯ  ಮೂರು ಸಾವಿರ ರೂ. ಲಂಚ ಕೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಆರಿಸ್ ಲೋಕಾ ಯುಕ್ತ ಪೊಲೀಸರಿಗೆ  ದೂರು ನೀಡಿ ದ್ದಾರೆ. ದೂರು ಸ್ವೀಕರಿಸಿದ ಲೋಕಾ ಯುಕ್ತ ಅಧಿಕಾರಿಗಳು ಇಂದು ಬೆಳ್ತಂಗಡಿಗೆ ಆಗಮಿಸಿದ್ದರು.
ತಾಲೂಕು ಕಚೇರಿಯ ಹಿಂಭಾಗದಲ್ಲಿ ಪೊಡಿಯ ಆರಿಸ್‌ರಿಂದ ರೂ 2,500 ಪಡೆಯುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಡಿ.ವೈ. ಎಸ್.ಪಿ. ವಿಠಲ ದಾಸ್ ಪೈ, ಇನ್ಸ್‌ಪೆಕ್ಟರ್ ದಲೀಪ್ ಕುಮಾರ್, ಉಮೇಶ್ ಶೇಟ್ ಹಾಗೂ ಇತರರು ಭಾಗವಹಿಸಿದ್ದರು.
ಕೃಪೆ ವಾ.ಭಾರತಿ 

No comments:

Post a Comment