Thursday, March 21, 2013

ಮಂಜೇಶ್ವರ ತಾಲೂಕು ರಚನೆ: ಈಡೇರಿತು ಬಹು ವರ್ಷಗಳ ಬೇಡಿಕೆ


ಮಾರ್ಚ್ -21-2013

ಮಂಜೇಶ್ವರ:  ಕಾಸರಗೋಡು ತಾಲೂಕನ್ನು ವಿಭಜಿಸಿ ಮಂಜೇಶ್ವರ ಹೊಸ ತಾಲೂಕನ್ನಾಗಿ ಘೋಷಿಸಲಾಗಿದೆ. ಕೇರಳ ವಿಧಾನಸಭೆಯಲ್ಲಿಂದು ಹಣಕಾಸು ಸಚಿವ ಕೆ.ಎಂ.ಮಾಣಿ ನೂತನ ತಾಲೂಕನ್ನು ಘೋಷಿಸಿ ದರು. ಮಂಜೇಶ್ವರವಲ್ಲದೆ ಜಿಲ್ಲೆಯ ಹೊಸದುರ್ಗ ತಾಲೂಕನ್ನು ಕೂಡಾ ವಿಭಜಿಸಿ ವೆಳ್ಳರಿಕುಂಡು ತಾಲೂಕನ್ನು ಘೋಷಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 12 ತಾಲೂಕುಗಳನ್ನು ಇಂದು ಘೋಷಿಸಲಾಗಿದೆ. ಮಂಜೇಶ್ವರ ತಾಲೂಕು ರಚನೆ ಹಲವು ವರ್ಷಗಳ ಬೇಡಿಕೆಯಾಗಿದ್ದು, ಇದೀಗ ತಾಲೂಕು ಘೋಷಣೆ ಯಿಂದ ಜನತೆಯ ಸಂಭ್ರಮ ಮುಗಿಲು ಮುಟ್ಟಿದೆ. ತಾಲೂಕು ರಚನೆಗೆ ಶಾಸಕ ಪಿ.ಬಿ.ಅಬ್ದುರ್ರಝಾಕ್ ಸತತ ಪ್ರಯತ್ನ ನಡೆಸಿದ್ದರು. ತಾಲೂಕು ರಚನೆಗೆ ಒತ್ತಾಯಿಸಿ ಕೆಲವು ತಿಂಗಳುಗಳ ಹಿಂದೆ ನಿಯೋಗವೊಂದು ಮುಖ್ಯಮಂತ್ರಿ, ಕಂದಾಯ ಮತ್ತು ಹಣಕಾಸು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು.



No comments:

Post a Comment