Wednesday, March 27, 2013

ಫ್ರಾನ್ಸ್ ಸೇನೆ ಗುಂಡಿಗೆ ಕುಂದಾಪುರದ ಯುವಕ ಬಲಿ ಮಾರ್ಚ್ -27-2013

ಮಂಗಳೂರು: ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕನ್‌ನ ಬಂಗುಯಿ ವಿಮಾನ ನಿಲ್ದಾಣದಲ್ಲಿ ಫ್ರಾನ್ಸ್ ಸೇನೆಯ ನಡೆಸಿದ ಗುಂಡಿನ ದಾಳಿಯಲ್ಲಿ ಸಾವಿಗೀಡಾದ ಇಬ್ಬರು ಭಾರತೀಯರ  ಪೈಕಿ ಉಡುಪಿ ಜಿಲ್ಲೆ ಕುಂದಾಪುರ  ತಾಲೂಕಿನ ಹೆಮ್ಮಾಡಿ ಕಟ್ಟು ನಿವಾಸಿ ಬಲಿಯಾಗಿದ್ದಾರೆ.
 ಕೃಷ್ಣಯ್ಯ ಮೊಗವೀರ (37) ಗುಂಡಿನ ದಾಳಿಯಲ್ಲಿ ಸಾವಿಗೀಡಾದವರು ಇವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಕಟ್ಟು ನಿವಾಸಿ  ನಾರಾಯಣ ಮೊಗವೀರ ಮತ್ತು ಬಾಳು ಮೊಗವೀರ ಅವರ ಪುತ್ರ. ಇವರಿಗೆ ಮೂವರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು ಇದ್ದಾಳೆ. ಇವರಲ್ಲಿ ಕೃಷ್ಣಯ್ಯ ಕೊನೆಯವರು. ಇವರ ಪತ್ನಿ ಸುಮನ ಮತ್ತು ಮಗು ಆದಿತ್ಯ ಮುಂಬೈನಲ್ಲಿ ನೆಲೆಸಿದ್ದಾರೆ.
ಅಲ್ಲಿನ ಔಷಧ ತಯಾರಿಕಾ ಕಂಪೆನಿಯೊಂದರಲ್ಲಿ ಅವರು ಉದ್ಯೋಗದಲ್ಲಿದ್ದರು. ವಿಮಾನ ನಿಲ್ದಾಣದಲ್ಲಿ ತಪ್ಪು ಗ್ರಹಿಕೆಯಿಂದಾಗಿ ಇವರು ಪ್ರಯಾಣಿಸುತ್ತಿದ್ದ ವಾಹನದತ್ತ ಫ್ರಾನ್ಸ್ ಸೇನಾ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ  ಇಬ್ಬರು ಸಾವಿಗೀಡಾಗಿ, 6 ಮಂದಿ ಗಾಯಗೊಂಡಿದ್ದಾರೆ. 

No comments:

Post a Comment