Monday, March 25, 2013

ವಿದೇಶಿ ಮದ್ಯ ವಶ:ಆರೋಪಿ ಪರಾರಿನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಅಬಕಾರಿ ಪೊಲೀಸರು ನಡೆಸಿದ ದಾಳಿಯಲ್ಲಿ ವಿದೇಶಿ ಮದ್ಯಗಳನ್ನು ವಶಪಡಿಸಿದ ಬಗ್ಗೆ ಮಂಗಲ್ಪಾಡಿಯಿಂದ ವರದಿಯಾಗಿದೆ.
ಅಬಕಾರಿ ಸರ್ಕಲ್ ಕಛೇರಿಯ ಪ್ರಿವೆಂಟಿವ್ ಅಧಿಕಾರಿ ಬಷೀರ್ ಆಹ್ಮದ್ ರವರ ನೇತೃತ್ವದಲ್ಲಿ ನಿನ್ನೆ ನಡೆಸಿದ ದಾಳಿಯಲ್ಲಿ 180 ಎಂ.ಎಲ್. 28 ಬಾಟ್ಲಿ ವಿದೇಶಿ ಮದ್ಯಗಳನ್ನು ವಶಪಡಿಸಲಾಗಿದೆ.
ಮದ್ಯ ಬಚ್ಚಿಟ್ಟಿದ್ದ ವ್ಯಕ್ತಿ ಪರಾರಿಯಾಗಿದ್ದು ಆತನ ಗುರುತು ಪತ್ತೆ ಹಚ್ಚಲಾಗಿದ್ದು ಆತನ ವಿರುದ್ದ ಮೊಕದ್ದಮೆ ದಾಖಲಿಸಲಾಗಿದ್ದು ಮುಂದಿನ ತನಿಖೆ ನಡೆಯುತ್ತಿರುವುದಾಗಿ ಅಧಿಕಾರಿಗಳಿಂದ ತಿಳಿದು ಬಂದಿದೆ

No comments:

Post a Comment