Wednesday, March 27, 2013

ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಮಸೀದಿಯ ಮೌಲವಿ


  ಯಾದಗಿರಿ, ಮಾ. 27 : ಇತ್ತೀಚಿನ ದಿನಗಳಲ್ಲಿ ಕೆಲ ಧರ್ಮಗುರುಗಳು ನಡೆದುಕೊಳ್ಳುತ್ತಿರುವ ರೀತಿಯಿಂದಾಗಿ ಅವರನ್ನು ನಂಬಿದ್ದ ಜನರೇ ಅವರನ್ನು ಧಿಕ್ಕರಿಸುವಂತಾಗುತ್ತಿದೆ. ಇಂಥವರ ಪಟ್ಟಿಗೆ ಈ ಬಾರಿ ಮುಸ್ಲಿಂ ಜನಾಂಗಕ್ಕೆ ಸೇರಿದ ಧರ್ಮಗುರುವೊಬ್ಬ ಸೇರಿಕೊಂಡಿದ್ದಾನೆ. ಯಾದಗಿರಿ ನಗರದ ಮಿಲ್ಲತ್ ಬಡಾವಣೆಯ ಉಮೇರಾ ಫಾರುಕ್ ಮಸೀದಿಯ ಧರ್ಮಗುರು ಉತ್ತರ ಪ್ರದೇಶದ ಆಲಂ ಶೇಖ್ ಶಹನಾಜ್ (42) ತನಗೆ ಆಶ್ರಯ ನೀಡಿದ ಮನೆಯವರ ಮಗಳನ್ನು ಮರಳು ಮಾಡಿ ಅಪಹರಿಸಿದ್ದಾನೆ. ಧರ್ಮಗುರುವನ್ನು ನಂಬಿ ಮಾಡಿದ ತಪ್ಪಿಗಾಗಿ ಮನೆಯವರು ಪರಿತಪಿಸುತ್ತಿದ್ದಾರೆ ಮತ್ತು ಮಗಳನ್ನು ಕಳೆದುಕೊಂಡಿದ್ದಕ್ಕೆ ಗೋಳಾಡುತ್ತಿದ್ದಾರೆ. ಈ ಘಟನೆ ನಡೆದಿರುವುದು ಮಾರ್ಚ್ 20ರಂದು. ಉಮೇರಾ ಫಾರುಕ್ ಮಸೀದಿಯ ಧರ್ಮಗುರು ಆಲಂ ಶೇಖ್ ಶಹನಾಜ್ 3 ತಿಂಗಳ ಹಿಂದೆಷ್ಟೆ ಈ ಮಸೀದಿ ಸೇರಿಕೊಂಡಿದ್ದ. ಮಸೀದಿ ಸಮೀಪ ಇರುವ ಅಬ್ದುಲ್ ಎಂಬುವರು ಧರ್ಮಗುರು ಎನ್ನುವ ಕಾರಣಕ್ಕೆ ಆಲಂ ಶೇಖ್ ಶಹನಾಜ್ ಎಂಬಾತನಿಗೆ ಆಶ್ರಯ ನೀಡಿದ್ದರು. ಆದರೆ, ಆ ಹರಾಮ್ ಖೋರ್ ಶೇಖ್ ಅಬ್ದುಲ್ ಅವರ ಮಗಳು ಶಾಹಿನ್ ಪರ್ವಿನ್ (21) ಎಂಬ ಯುವತಿಯ ಮೇಲೆ ಕಣ್ಣು ಹಾಕಿ, ಆಕೆಯನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಈ ಮಸೀದಿಗೆ ಒಳ್ಳೆಯ ಧರ್ಮಗುರುವನ್ನು ನೇಮಿಸಬೇಕೆಂದು ತೀರ್ಮಾನಿಸಿ ಮಸೀದಿಯ ಸದಸ್ಯರು ಉತ್ತರ ಪ್ರದೇಶದಿಂದ 42 ವರ್ಷದ ಆಲಂ ಶೇಖ್ ಶಹನಾಜ್ ನನ್ನು ಕರೆತಂದಿದ್ದರು. ವಾಸಿಸಲು ಅದೇ ಬಡಾವಣೆಯಲ್ಲಿ ಒಂದು ಕೋಣೆ ಸಹ ಒದಗಿಸಿದ್ದರು. ಆ ಕೋಣೆಯಲ್ಲಿ ಅನನುಕೂಲತೆ ಇದ್ದಿದ್ದರಿಂದ ಮಸೀದಿಯ ಪಕ್ಕದಲ್ಲಿದ್ದ ಅಬ್ದುಲ್ ಎಂಬುವರ ಮನೆಗೆ ಪ್ರತಿನಿತ್ಯ ಭೇಟಿ ನೀಡುತ್ತಿದ್ದ. ಶೇಖ್ ಕಷ್ಟಪಡುತ್ತಿದ್ದದನ್ನು ಗಮನಿಸಿದ ಅಬ್ದುಲ್ ಅವರು ತಮ್ಮ ಮನೆಯಲ್ಲಿ ಒಂದು ಕೋಣೆ ನೀಡಿದರು. ಅವರ ಮನೆಯಿಂದಲೇ ಅಲ್ಲಿಂದಲೆ ಮಸೀದಿಗೆ ಹೋಗಿ ನಮಾಜ್ ಪಠಣ ಮಾಡ್ತಾಯಿದ್ದ. ಮನೆ ಮಾಲೀಕ ಅಬ್ದುಲ್ ಅವರ ಮಗಳು ಶಾಹಿನ್ ಪರ್ವಿನ್ ಳೊಂದಿಗೆ ತೀರ ಸಲುಗೆಯಿಂದ ಇರತೊಡಗಿದ್ದ. ಆದರೂ ಆತನ ಮೇಲೆ ಮನೆಯವರಿಗೆ ಶಂಕೆ ಬಂದಿಲ್ಲ. ಮುಂದೆ ಆಕೆಯನ್ನು ನಂಬಿಸಿ, ಅವಳಿಗೆ ಭಾನಾಮತಿ ಮಾಡಿ ಕಿಡ್ನಾಪ್ ಮಾಡಿದ್ದಾನೆ ಎಂದು ಶಾಹಿನ್ ತಂದೆ ಅಬ್ದುಲ್ ಹೇಳುತ್ತಾರೆ. ಸಮಾಜದ ಉದ್ಧಾರಕ್ಕೆ ಶ್ರಮಿಸಬೇಕಿದ್ದ ಧರ್ಮಗುರುವೊಬ್ಬ ಈ ರೀತಿ ಮಾಡಿರುವುದಕ್ಕೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಕಾಲ ಮಿಂಚಿ ಹೋಗಿದೆ. ಇನ್ನು ಮುಂದೆ ಸ್ಥಳೀಯ ಧರ್ಮಗುರುವನ್ನೇ ನೇಮಕ ಮಾಡ್ತಿವಿ ಅಂತಾ ಸದಸ್ಯರು ಹೇಳಿದ್ದಾರೆ. 2013ರ ಮಾರ್ಚ್ 23ರಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆಲಂನ ಹುಡುಕಾಟದಲ್ಲಿ ತೊಡಗಿದ್ದಾರೆ. ಆತ ಉತ್ತರ ಪ್ರದೇಶಕ್ಕೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.

No comments:

Post a Comment