Monday, March 4, 2013

ಮಂಜೇಶ್ವರ ಗ್ರಾಂ.ಪಂ.ಮರಳುಮಾಫಿಯಾಗಳ ಅಡ್ಡೆಯಾಗಿದೆ:ಶ್ರೀಜಾ ವೆಲ್ ಪಾರ್ಟಿ ಪ್ರ. ಕಾರ್ಯದರ್ಶಿ


ಮಂಜೇಶ್ವರ:ಮಂಜೇಶ್ವರ ಗ್ರಾ.ಪಂಚಾಯತ್ ಮರಳು ಮಾಫಿಯಾಗಳ ಅಡ್ಡೆಯಾಗಿದ್ದು ಇದನ್ನು ಜನರು ಎದುರಿಸಲು ಸನ್ನದ್ದರಾಗಬೇಕೆಂದು ವೆಲ್ಫೇರ್ ಪಕ್ಷದ ರಾಜ್ಯದ ಪ್ರಧಾನ ಕಾರ್ಯದರ್ಶಿ ಶ್ರೀಜಾ ರವರು ಹೇಳಿದರು.ಅವರು ಇಂದು ವೆಲ್ಫೇರ್ ಪಾರ್ಟಿ ಮಂಜೇಶ್ವರ ಮಂಡಲ ಸಮಿತಿ ಕಛೇರಿಯಲ್ಲಿ ಆಯೋಜಿಸಲಾಗಿದ್ದ  ಕಾರ್ಯಕ್ರಮವೊಂದರಲ್ಲಿ ಮುಖ್ಯ ಅಥಿಯಾಗಿ ಬಾಗವಹಿಸಿ ಮಾತನಾಡುತಿದ್ದರು.ಜನರ ಸಂಕಷ್ಟವನ್ನು ಅರ್ಥಮಾಡಲು ರಾಜ್ಯ ಸರಕಾರ ಹಾಗು ಕೇಂದ್ರ ಸರಕಾರ ಸಂಪೂರ್ಣ ವಿಪಲವಾಗಿದೆ ಮಾತ್ರವಲ್ಲದೆ ನಿತ್ಯೋಪಯೋಗದ ಸಾಮಾಗ್ರಿಗಳ ಬೆಲೆ ಗಗನಕ್ಕೇರುತ್ತಿರುವುದಾಗಿ ಹೇಳಿದರು.ಇದಕ್ಕೊಂದು ಕಡಿವಾಣ ಅಗತ್ಯವಿದೆ ಎಂದು ಹೇಳಿದ ಅವರು ವೆಲ್ಫೇರ್ ಪಕ್ಷಕ್ಕೆ ಅತ್ಯಧಿಕ ಶತ್ರುಗಳು ಇರುವುದು ಕೂಡಾ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಎಂದು ಹೇಳಿದರು.  ಕೇವಲ ಒಂದೂವರೆ ವರ್ಷ ಪ್ರಾಯವಾಗಿರುವ ವೆಲ್ಫೇರ್ ಪಕ್ಷಕ್ಕೆ ಇನ್ನೂ ಅಧಿಕ ಪ್ರಮಾಣದಲ್ಲಿ ಸದಸ್ಯರನ್ನು ಸೇರಿಸಿ ಉತ್ತಮವಾದ ರೀತಿಯಲ್ಲಿ ಪಕ್ಷದ ಕಾರ್ಯಚಟುವಟಿಕೆಗಳನ್ನು ಕೊಂಡೊಯ್ಯಬೇಕೆಂದು ಕಾರ್ಯಕರ್ತರಿಗೆ ಸಲಹೆ ಇತ್ತರು.ವೇದಿಕೆಯಲ್ಲಿ ವೆಲ್ಫೇರ್ ಪಕ್ಷದ ರಾಜ್ಯ ಉಪಾಧ್ಯಕ್ಷ ಸಿ.ಆಹ್ಮದ್ ಕುಂಞಿ,ಜಿಲ್ಲಾಧ್ಯಕ್ಷ ಜೇಕಬ್,ಮಂಡಲಾಧ್ಯಕ್ಷ ಯಾಕೂಬ್ ಮೊಯಿದೀನ್,ಮೊದಲಾದವರು ಉಪಸ್ಥರಿದ್ದರು.ಮಂಡಲ ಕಾರ್ಯದರ್ಶಿ  ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಾನರ್ಪಣೆ ಗೈದರು. ಸಭೆಯಲ್ಲಿ ಇತ್ತೀಚೆಗೆ ನಿಧನರಾದ ವೆಲ್ಫೇರ್ ಪಕ್ಷದ ಸಕ್ರಿಯ ಕಾರ್ಯಕ್ರತನಾದ ಜೆ.ಕೆ.ಅಬ್ದುಲ್ ಖಾದರ್ ರವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

No comments:

Post a Comment