Monday, March 4, 2013

ಮಂಜೇಶ್ವರ ಗ್ರಾಹಕರ ವೇದಿಕೆಯಲ್ಲಿ ದೂರುಗಳ ಸ್ವೀಕಾರಮಂಜೇಶ್ವರ: ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ  ಮಂಜೇಶ್ವರ ಗ್ರಾಹಕರ ವೇದಿಕೆಯಲ್ಲಿ ದೂರುಗಳ ಸ್ವೀಕಾರ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಯಾವರ ಮಾಡದ ಬಳಿಯಿರುವ ಅಝಾದ್ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಲಾಯಿತು.ಶ್ರೀ ಮುರಳೀಧರ್ ಭಟ್ ರವರ ಅಧ್ಯಕ್ಷತೆ ವಹಿಸಿದರು.  
ವೇದಿಕೆಗೆ ದೂರು ನೀಡಿದ ವ್ಯಕ್ತಿಗಳನ್ನು ನೇರವಾಗಿ ವೇದಿಕೆಗೆ ಕರೆಸಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಸಭೆಯಲ್ಲಿ ಉಷಾ ಸೋಂಕಾಲು, ಅನಂತ ಗ್ಯಾಸ್ ಏಜನ್ಸಿ ಮಾಲಕಿ ಶೋಬಾ, ಸಿ.ಆಹ್ಮದ್ ಕುಂಞಿ,ನಾರಾಯಣ ಮಾಸ್ಟರ್,ಬಿ.ಮಹಮ್ಮದ್,ಇಬ್ರಾಹಿಂ ಮೊದಲಾದವರು ಮಾತನಾಡಿದರು
ಮಂಜೇಶ್ವರ ಗ್ರಾಹಕರ ವೇದಿಕೆಯ ದೂರುಗಳ ಸ್ವೀಕಾರ ಕಾರ್ಯಕ್ರಮ  

ಮಂಜೇಶ್ವರ ಗ್ರಾಹಕರ ವೇದಿಕೆಯ ದೂರುಗಳ ಸ್ವೀಕಾರ ಕಾರ್ಯಕ್ರಮ  

ಮಂಜೇಶ್ವರ ಗ್ರಾಹಕರ ವೇದಿಕೆಯ ದೂರುಗಳ ಸ್ವೀಕಾರ ಕಾರ್ಯಕ್ರಮ  

ದೂರು ಬಂದ ಅನಾಥಾಶ್ರಮವೊಂದಕ್ಕೆ ವೇದಿಕೆಯ ಕಾರ್ಯಕರ್ತರು ಬೇಟಿ ನೀಡುವುದು 
 ಉಪ್ಪಳದ ಸೋಂಕಾಲು ನಿವಾಸಿ ಉಷಾ  ಎಂಬವರು ವೇದಿಕೆಗೆ ನೀಡಿದ ದೂರಿನಂತೆ ಮಂಜೇಶ್ವರ ಅನಂತ ಗ್ಯಾಸ್ ಏಜನ್ಸಿಯ ಕಚೇರಿಗೆ ಹೋದಾಗ ಏಜನ್ಸಿಯ ಸಾಕು ನಾಯಿಯೊಂದು  ಗ್ರಾಹಕಳಿಗೆ ಕಚ್ಚಿದಾಗ ಮೂಕಪ್ರೇಕ್ಷಕರಾಗಿ ನೋಡಿ ನಿಂತ ಗ್ಯಾಸ್ ಏಜನ್ಸಿಯ ಸಿಬ್ಬಂಧಿಗಳು ಗ್ರಾಹಕಿಯ ಯಾವುದೇ ಸಹಾಯಕ್ಕೂ ಬರಲಿಲ್ಲವೆಂದು ದೂರಲಾಗಿದೆ.ಕಚ್ಚಿದ ಬಾಗದಿಂದ ನೆತ್ತರು ಧಾರೆ ಧಾರೆಯಾಗಿ ಇಳಿಯುತಿದ್ದರೂ ಇದರ ಬಗ್ಗೆ ಕಿಂಚತ್ತೂ ಕನಿಕರ ತೋರಿಸದೆ ಸಿಬ್ಬಂದಿಗಳು ದರ್ಪದಿಂದ ಮಾತನಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಗ್ಗೆ ದೂರು ಪುಸ್ತಕದಲ್ಲಿ ದೂರು ದಾಖಲಿಸಿ 6 ತಿಂಗಳು ಕಳೆದರೂ ಇದುವರೇಗೂ ಯಾವುದೇ ವಿಚಾರಣೆ ನಡೆದಿಲ್ಲವೆಂಬುದಾಗಿ ದೂರಲಾಗಿದೆ. ಬಗ್ಗೆ ವೇದಿಕೆಯು ವೇದಿಕೆಗೆ ಹಾಜರಾದ ಅನಂತ ಗ್ಯಾಸ್ ಏಜನ್ಸಿ ಮಾಲಕಿ ಶೋಬಾ ಹಾಗು ದೂರುದಾತಳ ಹೇಳಿಕೆಯನ್ನು ಪಡೆದು ಮುಂದಿನ ತೀರ್ಮಾನದ ಬಗ್ಗೆ ನೋಟೀಸನ್ನು ಕಳುಹಿಸಲಾಗುವುದೆಂದು ತಿಳಿಸಿದೆ.
ಅದೇ ರೀತಿ ತೂಮಿನಾಡಿನಲ್ಲೊಂದು ಅನಧಿಕೃತ ಅನಾಥಾಲಯ,ಮಂಜೇಶ್ವರ ಗ್ರಾ. ಪಂ.ನಲ್ಲಿ ಸೌಲಭ್ಯದಿಂದ ವಂಚಿತರಾದ ವಿಕಲಾಂಗರು,ಉಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯದಂಚಿನಲ್ಲಿರುವ ಧೈತ್ಯಾಕಾರದ ಮರ ಮೊದಲಾದ ರೀತಿಯ ಹಲವು ದೂರುಗಳನ್ನು ಸ್ವೀಕಾರ ಮಾಡಿದ ವೇದಿಕೆಯು ದೂರುದಾತರಿಗೆ ನ್ಯಾಯಯುತವಾದ ರೀತಿಯಲ್ಲಿ ಪರಿಹಾರಕಂಡುಕೊಳ್ಳುವ ರೀತಿಯಲ್ಲಿ ಗ್ರಾಹಕರ ಹೋರಾಟಕ್ಕೆ ಬೆಂಬಲವನ್ನು ನೀಡುವುದಾಗಿ ತಿಳಿಸಿತು.ಸಾಕ್ಷ್ಯಾಧಾರಗಳಿಲ್ಲದ ದೂರುಗಳನ್ನು ಸ್ವೀಕಾರ ಮಾಡಲಿಲ್ಲ.
ವೇದಿಕೆಯ ಕಾರ್ಯದರ್ಶಿ ರಹಿಮಾನ್ ಉದ್ಯಾವರ ರವರು ಸ್ವಾಗತಿಸಿ ಕೆ.ನಾಸರ್ ಕೈರಳಿಯವರು ವಂದಿಸಿದರು

No comments:

Post a Comment