Friday, March 22, 2013

ಮಂಗಲ್ಪಾಡಿ ಪಂಚಾಯತಿನಲ್ಲಿ ಭ್ರಷ್ಟಾಚಾರ:ವಿಜಿಲೆನ್ಸ್ ತನಿಖೆಯಿಂದ ಬಹಿರಂಗನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮಂಗಲ್ಪಾಡಿ ಪಂಚಾಯತಿನಲ್ಲಿ ಭ್ರಷ್ಟಾಚಾರ ಮತ್ತೆ ತಲೆ ಎತ್ತಿದ್ದು ಪಂಚಾಯತ್ ಕಾರ್ಯದರ್ಶಿ ಯನ್ನು ಜಿಲ್ಲೆಯಿಂದ ಬೇರೆ ಕಡೆ ವರ್ಗಾಯಿಸಿ ಶಿಸ್ತು ಕ್ರಮ ಕೈಗೊಳ್ಳಲು ವಿಜಿಲೆನ್ಸ್ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.
ಸರಕಾರದಿಂದ ಸಿಗುವ ವೇತನವನ್ನು ಪಡೆದು ಸರಕಾರದ ಕಾನೂನನ್ನು ಉಲ್ಲಂಘಿಸಿದ್ದಾರೆಂಬ ಆರೋಪದಲ್ಲಿ ಪಂ.ಕಾರ್ಯದರ್ಶಿ ಬಿ.ಕೆ.ಕೇಶವರನ್ನು ಹಣಕಾಸು ಜವಾಭ್ದಾರಿಯುಳ್ಳ ಹುದ್ದೆಗಳಿಂದ ಹೊರತುಪಡಿಸಿ ಜಿಲ್ಲೆಯಿಂದ ಹೊರಗೆ ವರ್ಗಾಯಿಸಬೇಕೆಂಬುದು ಸರ್ಕಾರಕ್ಕೆ  ವಿಜಿಲೆನ್ಸ್ ಶಿಫಾರಸ್ಸು ಮಾಡಿದೆ.
ಮಂಗಲ್ಪಾಡಿ ಪಂ.ನಲ್ಲಿ ಕ್ಲಾರ್ಕ್ ಆಗಿದ್ದ ರಾಜನ್ ಹಾಗು ಯು.ಡಿ ಕ್ಲರ್ಕ್ ಆಗಿದ್ದ ಐತಪ್ಪ ವಿರುದ್ದ ಇಲಾಖೆ ಮಟ್ಟದ ಕ್ರಮ ಕೈಗೊಳ್ಳಲು ಕೂಡಾ ವಿಜಿಲೆನ್ಸ್ ಸರಕಾರವನ್ನು ಒತ್ತಾಯಿಸಿದೆ.ಪಂ.ನಲ್ಲಿ ಕ್ಲರ್ಕ್ ಆಗಿದ್ದ ರಾಜನ್ ಇತ್ತೀಚೆಗೆ ಮೃತಪಟ್ಟಿದ್ದಾರೆ.ಕಾನೂನು ಕಾಯ್ದೆ ಉಲ್ಲಂಘಿಸಿ ಕಟ್ಟಡಗಳಿಗೆ ಅನುಮತಿ ಹಾಗು ನಿರ್ಮಾಣ ಕಾಯ್ದೆ ಪಾಲಿಸದೆ ಕಟ್ಟಡಕ್ಕೆ ನಂಬ್ರ ನೀಡಿದ್ದು ಹೊಯ್ಗೆ ಪಾಸ್ ನಲ್ಲಿ ಅವ್ಯವಹಾರ ಮೊದಲಾದ ಅವ್ಯವಹಾರಗಳನ್ನು ವಿಜಿಲೆನ್ಸ್ ಬಯಲಿಗೆಳೆದಿದೆ.ಮಾತ್ರವಲ್ಲದೆ ಪಂಚಾಯತ್ ರಿಜಿಸ್ಟರ್ ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿಲ್ಲವೆಂಬುದನ್ನು ಕೂಡಾ ಪತ್ತೆ ಹಚ್ಚಲಾಗಿದೆ. ಮೊದಲು ಕುಂಬಳೆ ಪಂಚಾಯತಿನಲ್ಲಿರುವಾಗಲೂ ಪಂಚಾಯತ್ ಇಲಾಖೆ ಇವರ ವಿರುದ್ದ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿ ಶಿಶ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದರೂ ಆಡಳಿತ ಪಕ್ಷದ ಸ್ವಾಧೀನವನ್ನು ಬಳಸಿ ಪ್ರಕರಣವನ್ನು ಅಲ್ಲಿಂದಲ್ಲಿಗೆ ಮುಚ್ಚುದರಲ್ಲಿ ಯಶಶ್ವೀಯಾಗಿದ್ದರು.ಜಿಲ್ಲೆಯಲ್ಲೇ ತಾನು ಮುಂದೆ ಎಂದು ಹೇಳಿಕೊಂಡು ಬ್ರಷ್ಟಾಚಾರದಲ್ಲಿ ನಂಬ್ರ ವನ್ ಆಗಿರುವ ಮಂಗಲ್ಪಾಡಿ ಪಂಚಾಯತ್ ಮೊತ್ತ ಮೊದಲಾಗಿ 2000 ರಲ್ಲಿ ಓಂಬುಡ್ಸ್ ಮೆನ್ ಮಂಗಲ್ಪಾಡಿ ಪಂಚಾಯತಿನ 15 ಸದಸ್ಯರನ್ನು ಅನರ್ಹಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಆದರೆ ಇಲ್ಲೂ ಒಂಬಡ್ಸ್ ಮೆನ್ ನಿರ್ಧಾರಕ್ಕೆ ಹೈಕೋರ್ಟ್ ತಡೆಯೊಡ್ಡಿತ್ತು.ಇದೀಗಲೂ ಕೇಸು ಕಲ್ಲಿಕೋಟೆ ವಿಜಿಲೆನ್ಸ್ ನ್ಯಾಯಾಲಯದಲ್ಲಿ ಮುಂದುವರಿಯುತ್ತಿದೆ

No comments:

Post a Comment