Friday, March 22, 2013

ಕೇರಳ ವಿಧಾನ ಸಭೆಯಲ್ಲಿ ತುಳು, ಕನ್ನಡದಲ್ಲಿ ಶಾಸಕ ರಝಾಕ್‌ರಿಂದ ಸರಕಾರಕ್ಕೆ ಕೃತಜ್ಞತೆ


ಕೇರಳ ವಿಧಾನ ಸಭೆಯಲ್ಲಿ ತುಳು, ಕನ್ನಡದಲ್ಲಿ ಶಾಸಕ ರಝಾಕ್‌ರಿಂದ ಸರಕಾರಕ್ಕೆ ಕೃತಜ್ಞತೆ
ಮಾರ್ಚ್ -22-2013

ಮಂಜೇಶ್ವರ: ‘‘ಸೊಲ್ಮೆಲು.. ಸೊಲ್ಮೆಲು.. ಸೊಲ್ಮೆಲು.. ತುಳುನಾಡ ಜನ ಮಾನಿಲೆನ ಸೊಲ್ಮೆಲು.. ತಾಲೂಕು ಆವೆರೆ ಸಾಕಾರ ಮಲ್ತಿನ ಸರಕಾರೊಗು ಸೊಲ್ಮೆಲು...’’ ಮಂಜೇಶ್ವರ ತಾಲೂಕು ರಚನೆ ಮಾಡಿದ ಸರಕಾರಕ್ಕೆ ವಿಧಾನ ಸಭೆಯಲ್ಲಿಂದು ಮಂಜೇಶ್ವರ ಶಾಸಕ ಪಿ.ಬಿ. ಅಬ್ದುರ್ರಝಾಕ್ ಕೃತಜ್ಞತೆ ಸಲ್ಲಿಸಿದ್ದು ಹೀಗೆ!
ಮಂಜೇಶ್ವರ ತಾಲೂಕು ಘೋಷಣೆ ಮಾಡಿದ ಸರಕಾರಕ್ಕೆ ಇಂದಿನ ವಿಧಾನ ಸಭಾ ಅಧಿವೇಶನದ ಬಜೆಟ್ ಅಂಗೀಕಾರ ಚರ್ಚೆಯ ವೇಳೆ ಅವರು ತುಳು, ಕನ್ನಡದಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದರು. ಬಳಿಕ ಕನ್ನಡದಲ್ಲಿ ಮಾತನಾಡಿದ ಶಾಸಕರು, ‘‘ಹಲವು ಭಾಷೆಗಳ ಸಂಗಮ ಭೂಮಿಯಾದ ಮಂಜೇಶ್ವರಕ್ಕೆ ತಾಲೂಕು ಕೊಡುಗೆ ನೀಡಿದ ಯುಡಿಎಫ್ ಸರಕಾರಕ್ಕೆ ವಂದನೆ,ಅಭಿನಂದನೆ’’ ಎಂದು ತನ್ನ ಭಾಷಣ ಮುಗಿಸಿದಾಗ ಸ್ಪೀಕರ್ ಸಹಿತ ಎಲ್ಲರು ಕರತಾಡನಗೈದರು.
ತನ್ನ ಬಜೆಟ್ ಅನುಮೋದನಾ ಭಾಷಣದಲ್ಲಿ ವಿತ್ತ ಸಚಿವ ಕೆ.ಎಂ. ಮಾಣಿರನ್ನು ಪ್ರಶಂಶಿಸಿದ ಮಂಜೇಶ್ವರ ಶಾಸಕ ಅಬ್ದುರ್ರಝಾಕ್, ರಾಜ್ಯದ ಅಭಿವೃದ್ಧಿಯ ಮುನ್ನಡೆಗೆ ಹಾಗೂ ಆರ್ಥಿಕ ಸುದೃಢತೆಗೆ ಈ ಸಾಲಿನ ಬಜೆಟ್ ರಹದಾರಿಯಾಗಲಿದೆ ಎಂದು ಹಾರೈಸಿದರು.
ಕೃಪೆ ವಾ.ಭಾರತಿ 

No comments:

Post a Comment