Friday, March 8, 2013

ಮಅದನಿಗೆ ಪೆರೋಲ್ ಬಿಡುಗಡೆ


ಮಅದನಿಗೆ ಪೆರೋಲ್ ಬಿಡುಗಡೆ

ಬೆಂಗಳೂರು: ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಶಂಕಿತ ಆರೋಪದ ಮೇಲೆ ಬಂಧಿತರಾಗಿರುವ ಅಬ್ದುನ್ನಾಸರ್ ಮಅದನಿಯವರಿಗೆ ಪುತ್ರಿಯ ವಿವಾಹ ನಿಮಿತ್ತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ವಿಶೇಷ ನ್ಯಾಯಾಲಯ ಪೆರೋಲ್ ಮೇಲೆ ಬಿಡುಗಡೆ ನೀಡಿದೆ.ಸ್ವತಃ ಅಬ್ದುನ್ನಾಸರ್ ಮಅದನಿ ಬಿಡುಗಡೆಗೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಐದು ದಿನಗಳ ಕಾಲ ಪೆರೋಲ್ ಮೇಲೆ ತೆರಳುವಂತೆ ಆದೇಶಿಸಿದ್ದು, ಬಿಗಿ ಪೊಲೀಸ್ ಭದ್ರತೆಯಲ್ಲಿ ತೆರಳಿ ಪುತ್ರಿಯ ವಿವಾಹ ಮುಗಿದ ಬಳಿಕ ಹಿಂದಿರುಗುವಂತೆ ಸೂಚಿಸಿದೆ. ಮಾ.10ರಂದು ಕೇರಳದಲ್ಲಿ ಅಬ್ದುನ್ನಾಸರ್ ಮಅದನಿ ಅವರ ಪುತ್ರಿ ಶಬೀರಾಳ ವಿವಾಹದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿದೆ.

No comments:

Post a Comment