Tuesday, March 19, 2013

ಕೊಲ್ಲಿ ಉದ್ಯೋಗಿ ನಾಪತ್ತೆಕುಂಜತ್ತೂರು:ಕೊಲ್ಲಿ ರಾಷ್ಟ್ರದಿಂದ ಊರಿಗೆ ತಲುಪಿದ ವ್ಯಕ್ತಿಯೊಬ್ಬರು ನಾಪತ್ತೆಯಾದ ಬಗ್ಗೆ ಇಲ್ಲಿಗೆ ಸಮೀಪದ ಮಂಜೇಶ್ವರ ಗೇಟ್ ಬಳಿಯಿಂದ ವರದಿಯಾಗಿದೆ.
ಮಂಜೇಶ್ವರ ಗೇಟ್  ಸಮೀಪವಿರುವ ಉಸ್ಮಾನ್ ಕ್ವಾರ್ಟರ್ಸ್ ನಲ್ಲಿ ವಾಸವಾಗಿದ್ದ ಹುಸೈನ್(55) ಎಂಬವರು ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ.ಕೊಲ್ಲಿ ರಾಷ್ಟ್ರದಲ್ಲಿ ಚಾಲಕ ವೃತ್ತಿಯಲ್ಲಿದ್ದ ಇವರು ತಿಂಗಳ 7 ರಂದು ಊರಿಗೆ ತಲುಪಿದ್ದರು.ನಂತ್ರ ಇದೇ ತಿಂಗಳು 12 ರಂದು ಹೊಸ ವೀಸಾಕ್ಕೆ ಹಣ ನೀಡಲು ಉಪ್ಪಳಕ್ಕೆ ಹೋಗುವುದಾಗಿ ಮನೆಯಿಂದ ಹೊರಟ ಇವರು ನಂತ್ರ ಮನೆಗೆ ತಿರುಗಿಬರಲಿಲ್ಲವೆಂದು ದೂರಲಾಗಿದೆ.
ಈಗ ಹಲವು ಕಡೆಯೂ ಹುಡುಕಿ ಪತ್ತೆಯಾಗದ ಕಾರಣ ಪತ್ನಿ ಸೌದ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾಳೆ.ಮನೆಯಿಂದ ಹುಸೈನ್ ತೆರಳುವಾಗ ನೀಲಿ ಜೀನ್ಸ್ ಪ್ಯಾಂಟ್ ಹಾಗು ಶರ್ಟ್ ಧರಿಸಿದ್ದಾರೆ.ಯಾರಾದರೂ ಇವರ ಮಾಹಿತಿ ಸಿಕ್ಕಿದರೆ ಮಂಜೇಶ್ವರ ಪೊಲೀಸ್ ಠಾಣೆಯ 04998272640 ನಂಬ್ರಕ್ಕೆ ಸಂಪರ್ಕಿಸಲು ಪೊಲೀಸರು ತಿಳಿಸಿದ್ದಾರೆ

No comments:

Post a Comment