Sunday, March 31, 2013

ಕುಂಜತ್ತೂರಿನಲ್ಲಿ ಅತಂಕ ಸೃಷ್ಟಿಸಿದ ಬೆಂಕಿಯ ಜ್ವಾಲೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕುಂಜತ್ತೂರಿನ ಹಳೆ ಆರ್ ಟಿ ಓ ಚೆಕ್ ಪೋಸ್ಟ್  ರಾಷ್ಟ್ರೀಯ ಹೆದ್ದಾರಿ ಬಳಿ ದಿಡೀರಣೆ ಕಂಡು ಬಂದ ಬೆಂಕಿಯು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿತು.
ಭೂಮಿಯ ಅಡಿಬಾಗದಿಂದ ಬೆಂಕಿಯ ಜ್ವಾಲೆ ಎದ್ದ ರೀತಿಯಲ್ಲಿ ಕಂಡು ಬಂದ ಬೆಂಕಿಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವ ಎಲ್ಲರನ್ನೂ ಒಮ್ಮೆಗೆ ಹಲವು ಶಂಶಯಗಳಿಗೆ ಎಡೆಮಾಡಿ ಕೊಟ್ಟಿತು. ವಿಷಯ ಹರಡುತಿದ್ದಂತೆ ಜನರು ಇದನ್ನು ನೋಡಲು ಬೈಕ್ ಕಾರುಗಳಲ್ಲಿ ಬರಲು ಆಗಮಿಸಿದರು.ಕೆಲವರು ಇದನ್ನು ಉಲ್ಕೆ ಎಂದು ಹೇಳಿದರೆ ಇನ್ನು ಕೆಲವರು ಜ್ವಾಲಾ ಮುಖಿಯ ಸೂಚನೆಯೆಂದು ಬಣ್ಣಿಸುವುದು ಕಂಡು ಬಂತು.ಇಷ್ಟೆಲ್ಲಾ ಆಗಿಯೂ ಬೆಂಕಿ ಯ ಹತ್ತಿರ ಯಾರೂ ಹೋಗಲು ಸಿದ್ದರಾಗಲಿಲ್ಲ.ಕೊನೆಗೆ ಹೈವೇ ಪೊಲೀಸಿನವರು ತಲುಪಿ ಪರಿಶೋಧಿಸಿ ಯಾರೋ ಲಾರಿಯವರು ರಾಸಾಯನಿಕ ಪದಾರ್ಥವನ್ನು ಚೆಲ್ಲಿ ಅದರ ಮೇಲೆ ಯಾರೋ ಬೆಂಕಿ ಹಾಕಿದ್ದಾರೆ ಭಯಪಡಬೇಕಾದದ್ದೇನೂ ಇಲ್ಲವೆಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.ನಂತ್ರ ಸಾರ್ವಜನಿಕರು ಬೆಂಕಿಯನ್ನು ನಂದಿಸಲು ಮುಂದಾದರು. ಕೆಲಕಾಲ ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆ ಉಂಟಾಯಿತು

No comments:

Post a Comment