Wednesday, March 6, 2013

ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ


*ರಹಿಮಾನ್ ಉದ್ಯಾವರ

ಕುಂಜತ್ತೂರು:ಉದ್ಯೋಗ ಖಾತರಿ ಯೋಜಣೆಯಡಿಯಲ್ಲಿ ದುಡಿದು ಅದರಲ್ಲಿ ಸಿಕ್ಕಿದ ಸಂಪಾದಣೆಯಿಂದ ಕುಟುಂಬಕ್ಕೆ ಬೆಳಕಾಗಿದ್ದ ಮಹಿಳೆಯೊಬ್ಬಳ ಅಕ್ರಂಧನ ಹೊರ ಜಗತ್ತಿಗೆ ಅರಿವಾಗದೆ ನತದೃಷ್ಟ ಕುಟುಂಬವೊಂದು ಅರಣ್ಯರೋದನ ಪಡುತ್ತಿದೆ.
ಮಂಜೇಶ್ವರ ಗ್ರಾ.ಪಂ.20 ನೇ ವಾರ್ಡಿನ ವ್ಯಾಪ್ತಿಯ ಉದ್ಯಾವರ ಮಾಡ ಕೆರೆಮನೆ ಬಳಿ ನಿವಾಸಿ ದಿವಂಗತ ಪಕೀರ ಮಗಳು ಜಗದೀಶ್ ಎಂಬವರ ಪತ್ನಿ ಸುಲೋಚನ(45) ಇವರ ಎರಡೂ ಕಾಲುಗಳು ನಿಷ್ಕ್ರಿಯವಾಗಿದ್ದು ಕುಟುಂಬದ ಬದುಕು ಕತ್ತಲೆಯಲ್ಲಿ ಮುಳುಗಿದೆ.

ಮಂಜೇಶ್ವರ ಗ್ರಾ.ಪಂ. ವತಿಯಿಂದ ನಡೆಯುತಿದ್ದ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿ ಕೆಲಸ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದ ಸುಲೋಚನ ರವರಿಗೆ ಎರಡು ವರ್ಷ ಮೊದಲು ದಿಡೀರಣೆ ಕಾಣಿಸಿಕೊಂಡ ಕಾಲುನೋವು ಗುಣವಾಗದೆ ವೈಧ್ಯಲೋಕಕ್ಕೆ ಮೂರು ಲಕ್ಶ ರೂಪಾಯಿ ಖರ್ಚು ಮಾಡಿ ಕೂಡಾ ಏನೂ ಪ್ರಯೋಜನವಾಗದೆ ಇದೀಗ ಇವರ ಎರಡೂ ಕಾಲುಗಳು ನಿಷ್ಕ್ರಿಯಗೊಂಡು  ನಡೆದಾಡಲು ಸಾದ್ಯವಾಗದೆ ಮುರುಕು ಮನೆಯೊಂದರ ಒಳಗೆ ಮಲಗಿದಲ್ಲಿಯೇ ಇದ್ದಾರೆ.ಇದೀಗ ಇವರ ಮದ್ದಿಗೆ ದಿನದಲ್ಲಿ 1000 ರೂ ಬೇಕಾಗಿದೆ ಆದರೆ ಕಳೆದ ಕೆಲವು ತಿಂಗಳಿನಿಂದ ಹಣಕಾಸಿನ ತೊಂದರೆಯಿಂದ ಡಾಕ್ಟರ್ ಸಂದರ್ಶನ ಮಾಡಿಯೇ ಇಲ್ಲವೆನ್ನುತ್ತಾರೆ ಸುಲೋಚನ.ಇವರ ಎರಡು ಮಕ್ಕಳಲ್ಲಿ ದೊಡ್ಡವಳಾದ ಪ್ರಿಯಾಂಕ ಪಿಯುಸಿ ಯಲ್ಲಿ ಕಲಿಯುತಿದ್ದರೆ ಧ್ವೀತಿಯ ಮಗಳಾದ ಭಾಗ್ಯಶ್ರೀ 8 ನೇ ತರಗತಿಯಲ್ಲಿ ಕಲಿಯುತಿದ್ದಾಳೆ.ಮುಂಬೈಯಲ್ಲಿ ಹೋಟೆಲ್ ಕಾರ್ಮಿಕನಾಗಿದ್ದ ಇವರ ಗಂಡ ಜಗದೀಶ್ ಬಲಬಾಗದ ಕಾಲಿನಲ್ಲಿ ಕಾಣಿಸಿಕೊಂಡ ನೋವಿನಿಂದ ಶಸ್ತ್ರ ಚಿಕಿತ್ಸೆ ಮಾಡಿ ಇದೀಗ ಯಾವೊಂದು ದುಡಿಮೆಯೂ ಇಲ್ಲದೆ ಮನೆಯಲ್ಲೇ ಬಾಕಿ ಉಳಿದಿದ್ದಾರೆ.ಇದೀಗ ಹಣಕಾಸಿನ ತೊಂದರೆಯಿಂದ ಮಕ್ಕಳ ವಿದ್ಯಾಭ್ಯಾಸ ವನ್ನು ಕೂಡಾ ಮುಂದುವರಿಸುವುದು ಕಷ್ಟ ಸಾದ್ಯವೆನ್ನುತಿದ್ದಾರೆ ಸುಲೋಚನ.ಎರಡೂ ಕಾಲುಗಳು ನಿಷ್ಕ್ರಿಯಗೊಂಡು ಮಾತನಾಡಲು ಕೂಡಾ ಸಾಧ್ಯವಾಗದ ರೀತಿಯಲ್ಲಿ ಕತ್ತಲು ಕೋಣೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿರುವ ಸುಲೋಚನಳ ಕುಟುಂಬಕ್ಕೆ ಯಾರಾದರೂ ಸಹಾಯ ಹಸ್ತವನ್ನು ನೀಡಿದರೆ ಆ ಕುಟುಂಬ ಮಂದಿಯ ಬದುಕಿಗೊಂದು  ಅರ್ಥ ಕಲ್ಪಿಸಿದಂತಾಗುತ್ತದೆ. ಕುಟುಂಬಕ್ಕೆ ಧನಸಹಾಯ ನೀಡುವವರು ಕುಟುಂಬವನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ.ಅಥವಾ ಗ್ರಾಮೀಣ ಬ್ಯಾಂಕ್ ಕುಂಜತ್ತೂರು ಶಾಖೆಯ ಖಾತೆ ನಂಬ್ರ 18201044981 ಮೂಲಕ ಜಮೆ ಮಾಡಬಹುದಾಗಿದೆ.ಅಥವಾ 09495952874 ಮೊಬೈಲ್ ಮುಖಾಂತರ ಸಂಪರ್ಕಿಸಬಹುದಾಗಿದೆ. ಸಂಘ ಸಂಸ್ಥೆಗಳ ಹಾಗು ಸಾಮಾಜಿಕ ರಾಜಕೀಯ ಅಲ್ಲದೆ ಇತರ ಎಲ್ಲಾ ವಲಯಗಳ ಪ್ರತಿನಿಧಿಗಳು ಮಹಿಳೆಯ ಕುಟುಂಬಕ್ಕೆ ಬೆಳಕಾಗಳು ಆರ್ಥಿಕ ನೆರವು ನೀಡಬೇಕಾಗಿದ್ದು ಸಾಮಾಜಿಕ ಕಳಿಕಳಿಯ ಮಂಜೇಶ್ವರ್ ಟೈಮ್ಸ್ ಕೂಡಾ ಅದನ್ನೇ ನಿರೀಕ್ಷಿಸುತ್ತಿದೆ.

No comments:

Post a Comment