Sunday, March 17, 2013

ಕುಂಜತ್ತೂರಿನಲ್ಲಿ ಮತ್ತೆ ತಲೆ ಎತ್ತಿದ ಧ್ವಜಗಳ ಸ್ಪರ್ಧೆ ;ಹೈಕೋರ್ಟ್ ಆದೇಶದ ಉಲ್ಲಂಘನೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ: ಸಾರ್ವಜನಿಕ ಸ್ಥಳಗಳಲ್ಲಿ ಹಾಗು ರಸ್ತೆ ಬದಿಯಲ್ಲಿ ಸ್ಥಾಪಿಸಲಾಗಿರುವ ಅನಧಿಕೃತ  ಬೋರ್ಡ್,ಜಾಹೀರಾತುಫಲಕ ಹಾಗು ಧ್ವಜ ಗಳನ್ನು ತೆರವುಗೊಳಿಸಲು ಹೈಕೋರ್ಟಿನ ಆದೇಶವಿದ್ದರೂ ಇತ್ತೀಚೆಗೆ ಕುಂಜತ್ತೂರಿನ ಮಾಸ್ಕೋ ಸಭಾಂಗಣದ ಎದುರು ಬಾಗದ ಮರವೊಂದರಲ್ಲಿ ಪ್ರತ್ಯಕ್ಷವಾದ ಹಸಿರು ಹಾಗು ಕೇಸರಿನ ಬಣ್ಣದ ಧ್ವಜವು ವಿವಾದವಾಗುತ್ತಿದೆ.ಇತ್ತೀಚೆಗೆ ಹೈಕೋರ್ಟ್ ಕಠಿಣವಾದ ಬಾಷೆಯಲ್ಲಿ ಇಂತಹ ಧ್ವಜಗಳನ್ನು ಹಾಕುತ್ತಿರುವವರ ವಿರುದ್ದ ಕಠಿಣವಾದ ಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶವಿತ್ತಿದ್ದರೂ  ಪೊಲೀಸರು ಇತ್ತ ಕಡೆ ಗಮನ ಹರಿಸದೇ ಇರುವುದು ನಾಗರಿಕ ವಲಯದಲ್ಲಿ ಚರ್ಚಾವಿಷಯವಾಗಿದೆ.ಇದೀಗ ಇಂತಹ ನಾಮಫಲಕ ಅಥವಾ ಧ್ವಜ ಇತ್ಯಾದಿಗಳನ್ನು ತೆರವುಗೊಳಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶನೀಡಿದೆ.ಈ ಬಗ್ಗೆ ರಾಜ್ಯ ಸಾರಿಗೆ ಆಯುಕ್ತರ ಸಂಭಂಧಪಟ್ಟ ಅಧಿಕಾರಿಗಳನ್ನು ನಿಯೋಜಿಸಿ ಅಗತ್ಯದ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯ ಆದೇಶಿಸಿದೆ.ಅನಧಿಕೃತ ಬೋರ್ಡ್,ಧ್ವಜ,ಇತ್ಯಾದಿಗಳನ್ನು ತೆರವುಗೊಳಿಸಲು ಅಗತ್ಯವಿದ್ದಲ್ಲಿ ಸಂಭಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳ ಸಹಾಯವನ್ನು ಪಡೆಯಬಹುದಾಗಿದೆ.ಈ ಬಗ್ಗೆ ಸೆಂಟರ್ ಫೋರ್ ಕನ್ಸ್ಯೂಮರ್ ಎಜ್ಯುಕೇಷನ್ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿ ಆ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಕೊನೆಗೆ ಈ ಮೇಲಿನಂತೆ ಆದೇಶ ನೀಡಿದೆ.
ರಾಷ್ಟ್ರೀಯ ಹೆದ್ದಾರಿಗಳ ಪರಿಸರದಲ್ಲಿ ಅನಧಿಕೃತ ಬೋರ್ಡಿಂಗ್ ಯಾ ಜಾಹೀರಾತು ಫಲಕ ಸ್ಥಾಪಿಸಲು ಅನುಮತಿ ನೀಡುವ ಅಧಿಕಾರ ಸ್ಥಳೀಯಾಡಳಿತ ಸಂಸ್ಥೆಗಳಿಗೂ ಇಲ್ಲವೆಂದು ಹೇಳಿದ ಹೈಕೋರ್ಟ್ ಇಂತಹ ಬೋರ್ಡ್ ಗಳು ಪತ್ತೆಯಾದಲ್ಲಿ ಅದನ್ನು ಸಾರಿಗೆ ಆಯುಕ್ತರ ಗಮನಕ್ಕೆ ತರಲು ನ್ಯಾಯಾಲಯ ನಿರ್ಧೇಶಿಸಿದೆ

No comments:

Post a Comment